ಗದಗ: ಬಿಜೆಪಿ ಯುವ ಮೋರ್ಚಾದಿಂದ ರಾಷ್ಟ್ರೀಯ ಯುವದಿನ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಕಬಡ್ಡಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಿಕಟಪೂರ್ವ ರೈತ ಮೋರ್ಚಾದ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಕಬಡ್ಡಿಪಟು ರಾಜು ಕುಲಕರ್ಣಿ ಮುಂತಾದವರು ಮಾತನಾಡಿದರು.
ರೋಣ ಮಂಡಲದ ಅಧ್ಯಕ್ಷ ಉಮೇಶ ಪಾಟೀಲ್ ನಿರೂಪಿಸಿದರು. ಪ್ರಶಸ್ತಿ, ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಸಂತೋಷಕ್ಕೆ ನೆರವೇರಿಸಿದರು. ನವೀನ ಕುರ್ತಕೋಟಿ ವಂದಿಸಿದರು.ಕ್ರೀಡಾಕೂಟದ ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶರಣಬಸವೇಶ್ವರ ಕಲಿಕೇರಿ (ಎ) ತಂಡ , ದ್ವಿತೀಯ ಸ್ಥಾನ ಶರಣಬಸವೇಶ್ವರ ಕಲಿಕೇರಿ (ಬಿ) ತಂಡ ಹಾಗೂ ತೃತೀಯ ಸ್ಥಾನ ಎಸ್.ಜೆ.ಜೆ.ಎಂ ಪಿಯು ಕಾಲೇಜ್ ತಂಡ ಪಡೆದುಕೊಂಡವು.ಉತ್ತಮ ರೈಡರ್ ಭವಾನಿ ಮನಕವಾಡ, ಉತ್ತಮ ಆಲ್ ರೌಂಡರ್ ಭಾಗ್ಯ ಬೂದಿಹಾಳ, ಉತ್ತಮ ಕ್ಯಾಚರ್ ಐಶ್ವರ್ಯ ಪರಮೇಶ್ವರ ಪಡೆದಿದ್ದಾರೆ.
ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಿ.ಸಿ.ಪಾಟೀಲ ಅಭಿಮಾನಿ ಬಳಗ ಲಕ್ಕುಂಡಿ (ಎ) ತಂಡ, ದ್ವಿತೀಯ ಸ್ಥಾನ ರೈಲ್ವೇಸ್ ಗದಗ ಟೀಮ್ ಹಾಗೂ ತೃತೀಯ ಸ್ಥಾನ ಬಿ.ಪಿ.ಎಡ್ ಕಾಲೇಜ ಪಡೆದುಕೊಂಡವು. ಉತ್ತಮ ರೈಡರ್ ವಿಷ್ಣು, ಉತ್ತಮ ಆಲ್ ರೌಂಡರ್ ಸಂಗಮೇಶ್, ಉತ್ತಮ ಕ್ಯಾಚರ್ ಚಂದ್ರು ಕಂಬಳಿ ಅವರು ಸ್ಥಾನವನ್ನು ಪಡೆದಿದ್ದಾರೆ.ಜಿಲ್ಲಾ ಕೋಶಾಧ್ಯಕ್ಷ ನಾಗರಾಜ ಕುಲಕರ್ಣಿ, ಬಸವರಾಜ್ ಇಟಗಿ, ಶಶಿಧರ ದಿಂಡೂರ, ಪ್ರಕಾಶ ಕೊತ್ತಂಬರಿ, ಸಚಿನ್ ಮಡಿವಾಳರ, ಬಸವರಾಜ ನರೇಗಲ್ಲ, ಪ್ರವೀಣ ಹಡಪದ, ಆನಂದ್ ಗಡಗೇರಿ ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಯುವಕರು, ಕ್ರೀಡಾ ಪ್ರೇಮಿಗಳು ಮುಂತಾದವರು ಉಪಸ್ಥಿತರಿದ್ದರು.