ಸತ್ವ ಸಂಗಮ ಸಮಾರಂಭ । ಸಮಾನ ಮನಸ್ಕ ಗೃಹಿಣಿಯರ ಮಾನವೀಯ ಕಾರ್ಯ ಎಲ್ಲರಿಗೂ ಪ್ರೇರಣೆ
ಬಿಡುವಿಲ್ಲದ ಜೀವನ ಜಂಜಾಟದ ಮಧ್ಯೆಯೂ ಗೃಹಿಣಿಯರು, ಯುವತಿಯರು ಆತ್ಮಿ ಅಸೋಸಿಯೇಷನ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ ಶ್ಲಾಘಿಸಿದರು.
ಬಿಡುವಿಲ್ಲದ ಜೀವನ ಜಂಜಾಟದ ಮಧ್ಯೆಯೂ ಗೃಹಿಣಿಯರು, ಯುವತಿಯರು ಆತ್ಮಿ ಅಸೋಸಿಯೇಷನ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ ಶ್ಲಾಘಿಸಿದರು. ದಾವಣಗೆರೆಯಲ್ಲಿ ಆತ್ಮಿ ಅಸೋಸಿಯೇಷನ್ ಎರಡನೇ ವರ್ಷ ಸಮಾರಂಭದಲ್ಲಿ ಮಾತನಾಡಿದರು.ನಗರದ ಶ್ರೀಮತಿ ಗೌರಮ್ಮ ನರಹರಿಶೇಟ್ ಕಲಾ ಭವನದಲ್ಲಿ ಆತ್ಮಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ 2ನೇ ವರ್ಷದ ಸತ್ವ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಮ್ಮ ಕುಟುಂಬ ನಿರ್ವಹಣೆ, ತಮ್ಮ ಉದ್ಯೋಗ ಹೀಗೆ ಎಲ್ಲವನ್ನೂ ಸರಿದೂಗಿಸಿಕೊಂಡು, ಸಮಾನ ಮನಸ್ಕ ಗೃಹಿಣಿಯರು, ಯುವತಿಯರು ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಇತರರಿಗೂ ಮಾದರಿಯಾಗಿರುವುದು ಆತ್ಮಿ ಸಂಸ್ಥೆಯಲ್ಲಿ ಕಾಣಬಹುದು ಎಂದರು.
18 ವರ್ಷದೊಳಗಿನ ಮಕ್ಕಳಿಗೆ ತೊಂದರೆಯಾದರೆ, ಮನೆಗೆ ಬರದಿದ್ದರೆ ತಕ್ಷಣೇ 1091 ನಂಬರ್ ಸಹಾಯವಾಣಿಗೆ ಕರೆ ಮಾಡಿದರೆ, ಕೇವಲ 10 ನಿಮಿಷದಲ್ಲಿ ನಿಮ್ಮ ಸಹಾಯಕ್ಕೆ ಪೊಲೀಸ್ ಸಿಬ್ಬಂದಿ ಬರುತ್ತಾರೆ. ಇತ್ತೀಚೆಗೆ ಅಪರಾಧ ಕೃತ್ಯಗಳ ಜೊತೆಗೆ ಸೈಬರ್ ಕ್ರೈಂ ಸಹ ಹೆಚ್ಚುತ್ತಿದೆ. ಸಾಕಷ್ಟು ಜನರು ಇಂತಹ ಆನ್ ಲೈನ್ ವಂಚಕರ ಜಾಲಕ್ಕೆ ಸಿಕ್ಕಿ ಸಾಕಷ್ಟು ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಾಗ್ರತೆ ವಹಿಸಿ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ, ಫೋಟೋಗಳನ್ನು ಹಂಚಿಕೊಳ್ಳಬೇಡಿ ಎಂದು ಎಎಸ್ಪಿ ವಿಜಯಕುಮಾರ ಸಂತೋಷ ಎಚ್ಚರಿಸಿದರು.
ಶ್ರೀ ಪುಟ್ಟರಾಜ ಗವಾಯಿಗಳ ಶ್ರೀ ವೀರೇಶ್ವರ ಪುಣ್ಯಾಶ್ರಮದ ಮಕ್ಕಳು ವಚನ ಗೀತೆ ಹಾಡಿದರು. ಹಿರಿಯ ವೈದ್ಯೆ ಡಾ.ಶುಕ್ಲಾ ಶೆಟ್ಟಿ, ಹಿರಿಯ ಕಲಾವಿ
ಆತ್ಮೀ ಅಸೋಸಿಯೇಷನ್ ನಿಂದ ವೃದ್ಧಾಶ್ರಮದ ವೃದ್ಧರಿಗೆ ಕಣ್ಣಿನ ಪರೀಕ್ಷೆ ಮಾಡಿಸಿ, ಕನ್ನಡಕ ವಿತರಿಸಲಾಯಿತು. ಜಿಲ್ಲೆಯ ಸುಮಾರು 15 ಶಾಲೆ ಆಯಾಗಳಿಗೆ ಸೀರೆ ವಿತರಿಸಲಾಯಿತು. ಮಹಿಳಾ ಸ್ವಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಮತ್ತು ಇಸ್ತ್ರೀಪೆಟ್ಟಿಗೆ ವಿತರಿಸಲಾಯಿತು. ಇನ್ನೂ ಅನೇಕ ಸೇವಾ ಕಾರ್ಯ ಕೈಗೊಳ್ಳಲಾಯಿತು.