ತೆರವು ಕಾರ್ಯಾಚರಣೆ ನೆಪದಲ್ಲಿ ಬಡವರ, ದಲಿತರ ಮೇಲೆ ದೌರ್ಜನ್ಯ

KannadaprabhaNewsNetwork |  
Published : Nov 14, 2024, 12:56 AM IST
ತಾಳಿಕೋಟೆ 3 | Kannada Prabha

ಸಾರಾಂಶ

ತಾಳಿಕೋಟೆ, ಮುದ್ದೇಬಿಹಾಳ ಪಟ್ಟಣದಲ್ಲಿ ಡಬ್ಬಾ ಅಂಗಡಿ, ಗೂಡಂಗಡಿಗಳನ್ನು ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದ ಬಡವರ ಹಾಗೂ ದಲಿತರ ಮೇಲೆ ದೌರ್ಜನ್ಯ ಎಸಗಿ ಅಂಗಡಿಗಳನ್ನು ತೆರವುಗೊಳಿಸಿ ಹೊಟ್ಟೆಯ ಮೇಲೆ ಹೊಡೆಯುವಂತಹ ಕಾರ್ಯ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾಡಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ದೂರಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಳಿಕೋಟೆ, ಮುದ್ದೇಬಿಹಾಳ ಪಟ್ಟಣದಲ್ಲಿ ಡಬ್ಬಾ ಅಂಗಡಿ, ಗೂಡಂಗಡಿಗಳನ್ನು ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದ ಬಡವರ ಹಾಗೂ ದಲಿತರ ಮೇಲೆ ದೌರ್ಜನ್ಯ ಎಸಗಿ ಅಂಗಡಿಗಳನ್ನು ತೆರವುಗೊಳಿಸಿ ಹೊಟ್ಟೆಯ ಮೇಲೆ ಹೊಡೆಯುವಂತಹ ಕಾರ್ಯ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾಡಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ದೂರಿದರು.ಅತಿಕ್ರಮಣ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ತಾಳಿಕೋಟೆಯಲ್ಲಿ ಹರಳಯ್ಯ ದಲಿತ ಸಮಾಜದ ಬಂದುಗಳು ೪೦ ವರ್ಷಗಳಿಂದ ಪಾದರಕ್ಷೆಗಳನ್ನು ತಯಾರಿಕೆ ಮಾಡುತ್ತ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಅವರ ಉಪಜೀವನಕ್ಕೆ ಬಿಜೆಪಿ ಸರ್ಕಾರದಲ್ಲಿ ನಾನು ಶಾಸಕನಿದ್ದಾಗ ಅವರಿಗೆ ಸೌಲತ್ತುಗಳನ್ನು ಕೊಡಿಸಿ ಅವರ ಜೀವನಕ್ಕೆ ಆದಾರವಾಗುವಂತಹ ಕೆಲಸ ಮಾಡಿದ್ದೇನೆ. ಆದರೆ, ಈಗೀನ ಶಾಸಕರಾದ ಸಿ.ಎಸ್.ನಾಡಗೌಡ ಅವರು ದಲಿತರು, ಬಡವರ ಅಂಗಡಿಗಳನ್ನು ತೆರವು ಕಾರ್ಯಚರಣೆ ನೆಪದಲ್ಲಿ ಒಡೆದುಹಾಕಿಸುವಂತಹ ಕೆಲಸ ಮಾಡಿದ್ದಾರೆ. ತೆರವು ಕಾರ್ಯಾಚರಣೆಗೆ ಗುಲಬರ್ಗಾ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಕೂಡಾ ಅವುಗಳನ್ನು ಒಡೆದು ಹಾಕುವಂತಹ ಕೆಲಸ ಪುರಸಭೆ ಮುಖ್ಯಾಧಿಕಾರಿಗಳು ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.ಅತಿಕ್ರಮಣ ಡಬ್ಬಾ ಅಂಗಡಿಗಳನ್ನು ತೆಗೆಯುವಂತಹ ಸಮಯದಲ್ಲಿ ಮಾನವೀಯತೆ ದೃಷ್ಟಿ ಇರಬೇಕು. ಬಡವರ ಮನವಲಿಸಿ ತೆಗೆಯುವಂತಹ ಕಾರ್ಯ ಮಾಡಬೇಕು. ಆ ಅಂಗಡಿಕಾರರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿ ತೆರವು ಮಾಡಬೇಕು. ಫುಟ್‌ಪಾತ್‌ ಮೇಲೆ ಡಬ್ಬಾ ಅಂಗಡಿ ಇಟ್ಟು ಬಾಡಿಗೆ ಪಡೆಯುವಂತವರ ಅಂಗಡಿಗಳನ್ನು ತೆಗೆದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ವಿಶೇಷವಾಗಿ ಅಪ್ಪಾಜಿ ನಾಡಗೌಡ ಅವರು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ಮುದ್ದೇಬಿಹಾಳದಲ್ಲಿಯೂ ಅದೇ ಮಾಡಿದ್ದಾರೆ. ತಾಳಿಕೋಟೆಯಲ್ಲಿಯೂ ಮಾಡಿದ್ದಾರೆ. ೩ ವಿಶೇಷ ಪೊಲೀಸ್ ಪಡೆ ತರಿಸಿ ಬಡವರನ್ನು ಹೆದರಿಸಿ ಅಂಗಡಿಗಳನ್ನು ತೆಗಿಸಿದ್ದಾರೆ. ಬಡವರೇನು ಭಯೋತ್ಪಾದಕರಾ ಎಂದು ಪ್ರಶ್ನಿಸಿದರು.ಬಡವರ ಅಂಗಡಿಗಳನ್ನು ಒಡೆದು ಹಾಕಿಸತಕ್ಕಂತ ಕೆಲಸ ಶಾಸಕರು ಮಾಡುವುದರ ಜತೆಗೆ ದಲಿತರು, ಬಡವರ ಮೇಲೆ ದೌರ್ಜನ್ಯವೆಸಗುವಂತಹ ಕೆಲಸವನ್ನು ಮಾಡಿದ್ದಾರೆ. ವಿಶೇಷವಾಗಿ ದೇವಸ್ಥಾನದ ಮುಂದುಗಡೆ ಹಾಕಲಾಗಿರುವ ತಗಡುಗಳನ್ನು ತೆಗೆಸುವಂತಹ ಕಿತ್ತಿಸುವಂತಹ ಕೆಲಸವನ್ನು ಮಾಡಿಸುತ್ತಿದ್ದಾರೆ. ನಾನು ಪೊಲೀಸ್ ಅಧಿಕಾರಿಗಳಿಗೆ ಏಚ್ಚರಿಸುತ್ತೇನೆ. ಈ ಸರ್ಕಾರ ಶಾಶ್ವತವಲ್ಲ. ಇವತ್ತು ತಾಳಿಕೋಟೆ, ಮುದ್ದೇಬಿಹಾಳದಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದವರು ಪಶ್ಚಾತಾಪ ಪಡುತ್ತಿದ್ದಾರೆ. ಅದಕ್ಕೆ ನಾನು ಪೊಲೀಸ್ ಅಧಿಕಾರಿಗಳಿಗೆ ಹೇಳುತ್ತೇನೆ. ಈ ಶಾಸಕ ಅಪ್ಪಾಜಿ ನಾಡಗೌಡರ ಮಾತು ಕೇಳಿ ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದಿರಿ. ಅದನ್ನು ನಿಲ್ಲಿಸಬೇಕು. ಇಲ್ಲದಿದ್ದರೇ ಮುಂದೆ ತಾವು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾಕಷ್ಟು ಶ್ರೀಮಂತರು ಕಾಂಗ್ರೆಸ್ ಮುಖಂಡರುಗಳು ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಅವರ ಬಣ್ಣ ಬಯಲು ಮಾಡುತ್ತೇನೆ ರಸ್ತೆಯ ಮೇಲೆ ಮನೆ ಅಂಗಡಿ ಕಟ್ಟಿಕೊಂಡವರನ್ನು ಬಿಟ್ಟು ಬಡವರ ಮೇಲೆ ಪ್ರಹಾರ ನಡೆಸುವಂತಹ ಕಾರ್ಯ ಮಾಡಿರುವ ಶಾಸಕ ನಾಡಗೌಡರಿಗೆ ತಕ್ಕ ಎದುರೇಟು ಶೀಘ್ರದಲ್ಲಿಯೇ ಸಿಗಲಿದೆ. ಡಬ್ಬಾ ಅಂಗಡಿಗಳ ತೆರುವಿನಿಂದ ಬೀದಿಗೆ ಬಂದಿರುವ ಬಡ ಕುಟುಂಬಗಳೊಂದಿಗೆ ನಾನು ಸದಾ ನಿಲ್ಲುತ್ತೇನೆ ಯಾರೂ ಹೆದರುವ ಅವಶ್ಯವಿಲ್ಲ ಎಂದು ಗುಡುಗಿದರು.ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕೂಡಾ ದಲಿತ ಸಮೂದಾಯದ ಅಂಗಡಿಗಳನ್ನು ಒಡೆದು ಹಾಕಿರುವುದು ಖಂಡನಿಯವಾಗಿದೆ. ಆ ಬಡವರ ಜತೆಗೆ ನಾನು ಸದಾ ನಿಲ್ಲುತ್ತೇನೆ. ನನಗೆ ಅನಾರೋಗ್ಯ ಇರುವುದರಿಂದ ಸದ್ಯ ಬರುವುದು ಆಗಿಲ್ಲ. ಎರಡು ದಿನದಲ್ಲಿ ಆಗಮಿಸಿ ಅವರಿಗೆ ನ್ಯಾಯ ಕೊಡಿಸುವ ಕಡೆಗೆ ಕೆಲಸ ಮಾಡುತ್ತೇನೆ.

- ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಶಾಸಕರು.ಉಮೇಶ ಕಾರಜೋಳ ಖಂಡನೆ

ತಾಳಿಕೋಟೆ: ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಹರಳ್ಳಯ್ಯ ಸಮೂದಾಯದ ಜನರು ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಅವುಗಳನ್ನು ಅಧಿಕಾರಿಗಳು ಒಡೆದು ಹಾಕಿ ತೆರವು ಮಾಡಿರುವುದನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರ್ಜೋಳ ಖಂಡಿಸಿದ್ದಾರೆ.

ದಲಿತ ಸಮೂದಾಯದ ಜನರಾದ ಬಡಪಾಯಿಗಳು ಕಳೆದ ೪೦ ವರ್ಷಗಳಿಂದ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಚಪ್ಪಲಿ ಹೊಲೆಯುವುದರೊಂದಿಗೆ ಕುಲಕಸುಬುನ್ನು ಮಾಡುತ್ತಿದ್ದರು ಮತ್ತು ಈ ಡಬ್ಬಾ ಅಂಗಡಿಗಳ ತೆರುವಿಗೆ ಗುಲಬರ್ಗಾ ಉಚ್ಚನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರೂ ಕೂಡಾ ಅದೆಲ್ಲವನ್ನು ಧಿಕ್ಕರಿಸಿ ಅಧಿಕಾರಿಗಳು ತೆರವುಗೊಳಿಸಿರುವುದು ಖಂಡನೀಯ. ಕೂಡಲೇ ಅಧಿಕಾರಿಗಳನ್ನು ಅಮಾನತುಗೊಳಿಸಿ ಬಡ ದಲಿತ ಸಮೂದಾಯಕ್ಕೆ ಜಿಲ್ಲಾಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಎಸ್ಸಿ ಮೋರ್ಚಾದಿಂದ ಇಂದು ಹೋರಾಟ

ತಾಳಿಕೋಟೆ: ಪಟ್ಟಣದ ದಲಿತ ಸಮೂದಾಯದ ಅಂಗಡಿಗಳನ್ನು ಒಡೆದು ಹಾಕಿ ತೆರವುಗೊಳಿಸಿರುವದನ್ನು ಖಂಡಿಸಿ ನ.14ರಂದು ತಾಳಿಕೋಟೆ ಪಟ್ಟಣದಲ್ಲಿ ಪ್ರತಿಭಟನೆಯ ಜತೆಗೆ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಹೋರಾಟ ನಡೆಸಲಿದ್ದೇವೆ ಎಂದು ತಾಪಂ ಮಾಜಿ ಸದಸ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ತಂಗಡಗಿ ತಿಳಿಸಿದ್ದಾರೆ.

ಬಸ್ ನಿಲ್ದಾಣದ ಮುಂಭಾಗದ ಡಬ್ಬಾ ಅಂಗಡಿಗಳ ತೆರವಿಗೆ ಕೋರ್ಟ ತಡೆಯಾಜ್ಞೆ ನೀಡಿದ್ದರೂ ಕೂಡಾ ಅವುಗಳನ್ನು ಅಧಿಕಾರಿಗಳು ಒಡೆದು ಹಾಕಿ ತೆರವುಗೊಳಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಅಧಿಕಾರಿಗಳ ದುರ್ನಡತೆ ಮತ್ತು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸಾವಿರಾರು ಸಂಖ್ಯೆಯಲ್ಲಿ ಎಸ್ಸಿ ಮೋರ್ಚಾ ಕಾರ್ಯಕರ್ತರೊಂದಿಗೆ ಧರಣಿ ಸತ್ಯಾಗ್ರಹ ಮತ್ತು ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ