ಕನ್ನಡಪ್ರಭ ವಾರ್ತೆ ಜೇವರ್ಗಿ
ತಾಲ್ಲೂಕಿನ ನೆಲೋಗಿಯಲ್ಲಿ ಇಬ್ಬರು, ಸೊನ್ನದಲ್ಲಿ ಮೂರು ಜನ, ನೇದಲಗಿಯಲ್ಲಿ ಇಬ್ಬರು, ಜೇರಟಗಿಯಲ್ಲಿ ಇಬ್ಬರು ಸೇರಿದಂತೆ 8ಜನ ನಕಲಿ ವೈದ್ಯರ ಆಸ್ಪತ್ರೆಗಳನ್ನು ಮುಚ್ಚಿಸಿ ಓರ್ವನನ್ನು ಬಂಧಿಸಲಾಗಿದ್ದು, 7 ಜನ ನಕಲಿ ವೈದ್ಯರು ಪರಾರಿಯಾಗಿದ್ದಾರೆ.ಸೆರೆ ಸಿಕ್ಕ ಒಬ್ಬ ವೈದ್ಯನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿರುವ ನಕಲಿ ವೈದ್ಯರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಜೇವರ್ಗಿ ಸಿ.ಪಿಐ ರಾಜೇಸಾಹೇಬ್ ನದಾಫ್, ನೆಲೋಗಿ ಪಿ.ಎಸ್.ಐ. ಅಶೋಕ ಪಾಟೀಲ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಕಲಿ ವೈದ್ಯರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.