ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಡ್ಡೆಗಳ ಮೇಲೆ ದಾಳಿ

KannadaprabhaNewsNetwork | Published : Mar 23, 2024 1:02 AM

ಸಾರಾಂಶ

ನಗರದಲ್ಲಿ ಎಲ್ಲೆಂದರಲ್ಲಿ ನಿರಂತರವಾಗಿ ಹಾಗೂ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಕುರಿತು ಕನ್ನಡಪ್ರಭ ಶುಕ್ರವಾರ ಪ್ರಕಟಿಸಿದ ಎಗ್ಗಿಲ್ಲದೇ ನಡೆದಿದೆ ಗ್ಯಾಸ್ ರಿಫಿಲ್ಲಿಂಗ್ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಬಿತ್ತರಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸಿದರು. ಜತೆಗೆ ಅಲ್ಲಿದ್ದ ಗ್ಯಾಸ್ ರಿಫಿಲ್ಲಿಂಗ್ ಮಷಿನ್, ಡೊಮೆಸ್ಟಿಕ್ ಸಿಲಿಂಡರ್ಗಳನ್ನು ಜಪ್ತಿ ಮಾಡಿ, ಅಂಗಡಿಗಳನ್ನು ಸೀಜ್ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಎಲ್ಲೆಂದರಲ್ಲಿ ನಿರಂತರವಾಗಿ ಹಾಗೂ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಕುರಿತು ಕನ್ನಡಪ್ರಭ ಶುಕ್ರವಾರ ಪ್ರಕಟಿಸಿದ ಎಗ್ಗಿಲ್ಲದೇ ನಡೆದಿದೆ ಗ್ಯಾಸ್ ರಿಫಿಲ್ಲಿಂಗ್‌ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಬಿತ್ತರಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸಿದರು. ಜತೆಗೆ ಅಲ್ಲಿದ್ದ ಗ್ಯಾಸ್ ರಿಫಿಲ್ಲಿಂಗ್ ಮಷಿನ್, ಡೊಮೆಸ್ಟಿಕ್ ಸಿಲಿಂಡರ್‌ಗಳನ್ನು ಜಪ್ತಿ ಮಾಡಿ, ಅಂಗಡಿಗಳನ್ನು ಸೀಜ್ ಮಾಡಿದ್ದಾರೆ.

ನಗರದ ಲಕ್ಷ್ಮೀ ಥಿಯೇಟರ್, ಅಲಂಕಾರ ಥಿಯೇಟರ್ ಬಳಿ ಹಾಗೂ ಬಾಗಲಕೋಟೆ ರಸ್ತೆ, ತೇಕಡೆ ಗಲ್ಲಿಗಳಲ್ಲಿನ ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುವ ಕುರಿತು ಕನ್ನಡಪ್ರಭ ವರದಿ ಮಾಡಿ ಅಧಿಕಾರಿಗಳ ಕಣ್ಣು ತೆರೆಸಿತ್ತು. ಇದರ ಬೆನ್ನಲ್ಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ನಾಮದೇವ ಚವ್ಹಾಣ ಹಾಗೂ ಅಧಿಕಾರಿಗಳ ತಂಡ ವಿವಿಧೆಡೆ ದಾಳಿ ನಡೆಸಿ, 15ಕ್ಕೂ ಅಧಿಕ ಸಿಲಿಂಡರ್‌ಗಳು ಹಾಗೂ ಗ್ಯಾಸ್ ರಿಫಿಲ್ಲಿಂಗ್ ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ.

ಈ ಮೂಲಕ ಕನ್ನಡಪ್ರಭ ವರದಿ ಪರಿಣಾಮ ಬೀರಿದ್ದು, ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿದೆ. ಇನ್ಮುಂದೆ ಈ ರೀತಿ ಅನಧಿಕೃತ ದಂಧೆ ನಡೆಸದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

--------

ಕೋಟ್....

ಈಗಾಗಲೇ ನಾವು ಹಲವು ಕಡೆಗಳಲ್ಲಿ ದಾಳಿ ಮಾಡಿದ್ದೆವು. ಕನ್ನಡಪ್ರಭ ವರದಿ ಬಂದ ಬಳಿಕ ಎಲ್ಲೆಲ್ಲಿ ದಂಧೆ ನಡೆಯುತ್ತಿದೆ ಎಂಬುದನ್ನು ಮನಗಂಡು, ರೇಡ್ ಮಾಡುವ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ನಿರಂತರವಾಗಿ ದಾಳಿ ಮಾಡಿ ಅಕ್ರಮ ಅಡ್ಡೆಗಳನ್ನೆಲ್ಲ ಬಂದ್ ಮಾಡಿಸಲಾಗುವುದು.

-ನಾಮದೇವ ಚವ್ಹಾಣ, ಸಹಾಯಕ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

---

ಬಾಕ್ಸ್‌.....ಸಂಘಟನೆಯಿಂದಲೂ ಡಿಸಿಗೆ ಮನವಿ ಸಲ್ಲಿಕೆ

ನಗರದಲ್ಲಿ ಸೇರಿದಂತೆ ಜಿಲ್ಲಾದ್ಯಂತ ಅನಧಿಕೃತವಾಗಿ ನಡೆಯುತ್ತಿರುವ ಅಡುಗೆ ಅನಿಲ ದುರ್ಬಳಕೆ ಹಾಗೂ ಮಾರಾಟ ತಡೆ ಹಿಡಿಯುವಂತೆ ಭೀಮ್ ಸರಕಾರ ಸಂಘಟನಾ ಸಮಿತಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದೆ.

ಈ ವೇಳೆ ಮಾತನಾಡಿದ ಭೀಮ ಸರಕಾರ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ, ಅಡುಗೆ ಅನಿಲ ದುರ್ಬಳಕೆ ಹಾಗೂ ಮಾರಾಟವಾಗುತ್ತಿರುವ ಕುರಿತು ಕನ್ನಡಪ್ರಭದಲ್ಲಿ ವರದಿ ಪ್ರಕಟಗೊಂಡಿದ್ದು, ಅಕ್ರಮ ದಂಧೆ ತಡೆಹಿಡಿಯುವಂತೆ ಸಂಘಟನೆಯಿಂದಲೂ ಲಿಖಿತ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಲಾಗುತ್ತಿದೆ. ಜಿಲ್ಲಾಡಳಿತ ಈ ಅನಾಹುತಕಾರಿ ದಂಧೆಯನ್ನು ತಡೆಗಟ್ಟಬೇಕು ಹಾಗೂ ಮುಂದೆ ಇಂತಹ ಘಟನೆಗಳು ಸಂಭವಿಸಿದಲ್ಲಿ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ವೇಳೆ ವಿನಾಯಕ ಸೊಂಡೂರ, ಇರ್ಫಾನ್ ಬೀಳಗಿ, ಉದಯಕುಮಾರ ಆಕಾಶ, ಬಸಪ್ಪ ಬೋರಗಿ, ಬಾಬು ರಾಠೋಡ ಉಪಸ್ಥಿತರಿದ್ದರು.

Share this article