ಪೊಲೀಸರ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಫೈರಿಂಗ್

KannadaprabhaNewsNetwork | Published : Jul 5, 2024 12:53 AM

ಸಾರಾಂಶ

ಅ್ಯಂಡ್ರಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನು ಒಂದು ಕೊಲೆ ಪ್ರಕರಣ, 3 ಕೊಲೆ ಪ್ರಯತ್ನ ಪ್ರಕರಣಗಳು, ೪ ಹಲ್ಲೆ ಪ್ರಕರಣಗಳು, 2 ದರೋಡೆ ಪ್ರಕರಣಗಳು,1 ಮನೆಗಳ್ಳತನ ಪ್ರಕರಣ ಸೇರಿ ಒಟ್ಟು ೧೧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸ್ಟ್ಯಾಲಿನ್ ಮತ್ತವನ ಸಹಚರರು ಜೂ.೨೩, ೨೦೨೪ರಂದು ಸತೀಶ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆ ಪೊಲೀಸರು ಆರೋಪಿಯ ಕಾಲಿಗೆ ಫೈರಿಂಗ್ ಮಾಡಿ ರೌಡಿಯನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಾಮಸಮುದ್ರಂ ರಸ್ತೆ, ಲಕ್ಷ್ಮೀಸಾಗರ ರಸ್ತೆಯಲ್ಲಿ ಹಿಡಿಯಲು ಹೋದ ಅ್ಯಂಡ್ರಸನ್ ಪೇಟೆ ಪೊಲೀಸರ ಮೇಲೆ ರೌಡಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದಾಗ ಅ್ಯಂಡ್ರಸನ್‌ ಪೇಟೆ ಪೊಲೀಸರು ತಮ್ಮ ಪ್ರಾಣ ರಕ್ಷಣೆಗೆ ರೌಡಿ ಶೀಟರ್‌ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ್ಯಂಡ್ರಸನ್‌ ಪೇಟೆ ಸುಸೈಪಾಳಂನ ಕೊಲೆ ಆರೋಪಿ ಸ್ಟ್ಯಾಲಿನ್ ಬಿನ್ ಪನ್ನಿರ್ ಸೆಲ್ವನ್(೩೨)ನನ್ನು ಬೆನ್ನಟ್ಟಿ ಫೈರಿಂಗ್ ಮಾಡಿದ್ದು, ಆಗ ಆರೋಪಿಯು ತಪ್ಪಿಸಿಕೊಳ್ಳಲು ಯತ್ನಿಸಿ ಪಿಎಸ್‌ಐ ಮಂಜುನಾಥ್ ಮೌರ್ಯ ಹಾಗೂ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಪೇದೆ ಸುನಿಲ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅ್ಯಂಡ್ರಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನು ಒಂದು ಕೊಲೆ ಪ್ರಕರಣ, 3 ಕೊಲೆ ಪ್ರಯತ್ನ ಪ್ರಕರಣಗಳು, ೪ ಹಲ್ಲೆ ಪ್ರಕರಣಗಳು, 2 ದರೋಡೆ ಪ್ರಕರಣಗಳು,1 ಮನೆಗಳ್ಳತನ ಪ್ರಕರಣ ಸೇರಿ ಒಟ್ಟು ೧೧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸ್ಟ್ಯಾಲಿನ್ ಮತ್ತವನ ಸಹಚರರು ಜೂ.೨೩, ೨೦೨೪ರಂದು ಸತೀಶ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆ ಪೊಲೀಸರು ಆರೋಪಿಯ ಕಾಲಿಗೆ ಫೈರಿಂಗ್ ಮಾಡಿ ರೌಡಿಯನ್ನು ಬಂಧಿಸಿದ್ದಾರೆ.

ರೌಡಿ ಶೀಟರ್‌ ಗಡಿಪಾರು:

ಏ.೧೮, ೨೦೨೪ ರಂದು ಕೋಲಾರ ಉಪವಿಭಾಗಾಧಿಕಾರಿಯು ಈತನಿಗೆ ಹರಿಹರಕ್ಕೆ ಗಡಿಪಾರು ಮಾಡಿರುವ ಆದೇಶವಿದ್ದರೂ ಆದೇಶವನ್ನು ಉಲ್ಲಂಘಿಸಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಎಸ್ಪಿ ಶಾಂತರಾಜು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್‌ಗೆ ರವಾನಿಸಿದರು.

Share this article