ದೇವಿ ಆರಾಧನೆಯಿಂದ ನೆಮ್ಮದಿ ಪ್ರಾಪ್ತಿ: ನೀಲಕಂಠಮಠ

KannadaprabhaNewsNetwork |  
Published : Oct 14, 2024, 01:18 AM IST
 ಫೋಟೋ: 13 ಜಿಎಲ್‌ಡಿ2- ಗುಳೇದಗುಡ್ಡ  ಪಟ್ಟಣದ ಶ್ರೀ ನೀಲಕಂಠೇಶ್ವರ ಮಠದಲ್ಲಿ ದೇವಿ ಪುರಾಣ ಮಂಗಲ ಕಾರ್ಯಕ್ರಮದಲ್ಲಿ  ಮಹದೇವಯ್ಯ ನೀಲಕಂಠಮಠ ಮಾತನಾಡಿದರು.   | Kannada Prabha

ಸಾರಾಂಶ

ಹಬ್ಬಗಳು ನಮ್ಮ ದೇಶದ ಪ್ರಾಚೀನ ಸಂಸ್ಕೃತಿ ಪ್ರತೀಕವಾಗಿವೆ. ಪಾಂಡವರು ಸಹ ಇದೇ ವಿಜಯದಶಮಿ ಸಮಯದಲ್ಲಿ ವಿಜಯ ಸಾಧಿಸಿದ್ದು. ಧರ್ಮ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ

ಗುಳೇದಗುಡ್ಡ:

ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯು ಮನುಷ್ಯನಿಗೆ ಶಕ್ತಿ ತುಂಬುವದಷ್ಟೇ ಅಲ್ಲ, ಹೊಸ ಚೈತನ್ಯ, ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಪಡೆಯಬಹುದು ಎಂದು ಮಹದೇವಯ್ಯ ನೀಲಕಂಠಮಠ ಹೇಳಿದರು. ಅವರು ಪಟ್ಟಣದ ಶ್ರೀ ನೀಲಕಂಠೇಶ್ವರ ಮಠದಲ್ಲಿ ನವರಾತ್ರಿ ನಿಮಿತ್ತ 9 ದಿನಗಳವರೆಗೆ ನಡೆದ ದೇವಿ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ದೇವಿ ಪುರಾಣ ನಡೆಸಿಕೊಟ್ಟು ಮಾತನಾಡಿ, ಹಬ್ಬಗಳು ನಮ್ಮ ದೇಶದ ಪ್ರಾಚೀನ ಸಂಸ್ಕೃತಿ ಪ್ರತೀಕವಾಗಿವೆ. ಪಾಂಡವರು ಸಹ ಇದೇ ವಿಜಯದಶಮಿ ಸಮಯದಲ್ಲಿ ವಿಜಯ ಸಾಧಿಸಿದ್ದು. ಧರ್ಮ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು ಎಂದರು.

ನಿಂಗಪ್ಪ ಯಂಡಿಗೇರಿ, ಪುಂಡಲೀಕಪ್ಪ ಮಾನುಟಗಿ, ಮೃತ್ಯುಂಜ ನೀಲಕಂಠಮಠ, ಪೂರ್ಣಾನಂದ ನೀಲಕಂಠಮಠ, ರವಿ ಕಲಕೇರಿ, ಶಿವಪುತ್ರಪ್ಪ ಮಾಳಗಿ, ಗೋಪಾಲ ಜೀವಣಗಿ, ಗಿರೀಶ ನೀಲಕಂಠಮಠ, ಮಹಾಗುಂಡಪ್ಪ ಅರಕಾಲಚಿಟ್ಟಿ, ಬಸವರಾಜ ಹಳ್ಳೂರ, ಬಸಪ್ಪ ದಿಂಡಿ, ಅಮರಪ್ಪ ಬನ್ನಿ, ಮಲ್ಲಿಕಾರ್ಜುನ ಕಲಕೇರಿ, ನವೀನ ಮಾನುಟಗಿ, ಪಾಂಡು ಬಂಡಿ,ಅವರಾದಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!