ಕನ್ನಡಪ್ರಭ ವಾರ್ತೆ ರಾಮನಗರ
ನಗರದ ರಾಮ್ ಕಮಲ್ ಪಾರ್ಟಿ ಹಾಲ್‌ನಲ್ಲಿ ನಮ್ಮವರು ಬಳಗವು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟಿಪ್ಪು ಆಡಳಿತಲ್ಲಿ ಧರ್ಮ ಸಹಿಷ್ಣುತೆ ಇತ್ತು. ಇತಿಹಾಸವನ್ನು ವಸ್ತುನಿಷ್ಠವಾಗಿ ನೋಡಬೇಕು. ಆದರೆ, ಪಟ್ಟಭದ್ರರು ತಮ್ಮ ಹಿತಾಸಕ್ತಿಗಾಗಿ ಇತಿಹಾಸವನ್ನು ತಿರುಚಿ ಟಿಪ್ಪುವನ್ನು ಖಳನಾಯಕನನ್ನಾಗಿ ಬಿಂಬಿಸುತ್ತಾ ಬಂದಿದ್ದಾರೆ.ಪಟ್ಟಭದ್ರರ ಇಂತಹ ನಡೆಗಳು ನೈಜ ಚರಿತ್ರೆ ಮತ್ತು ವಾಸ್ತವದತ್ತ ಜನರ ಗಮನ ಸೆಳೆಯುವಂತೆ ಮಾಡಿರುವುದು ಉತ್ತಮ ಬೆಳವಣಿಗೆ. ಅದೇ ಕಾರಣಕ್ಕೆ ಟಿಪ್ಪು ಕುರಿತು ಹಲವು ಸಂಶೋಧನಾ ಕೃತಿಗಳು ಬಂದವು. ಆ ಪೈಕಿ ಕರಾವಳಿಯಲ್ಲಿ ಟಿಪ್ಪು ಕುರಿತ ತಪ್ಪು ಗ್ರಹಿಕೆಗೆ ನವೀನ್ ಅವರ ಈ ಪುಸಕ್ತ ಮದ್ದಾಗಿದೆ ಎಂದು ಹೇಳಿದರು.
ಬ್ರಿಟಿಷರ ಎದೆ ನಡುಗಿಸಿದ್ದ ವೀರ:
ರಾಮನಗರದ ಹೆಮ್ಮೆ ರೇಷ್ಮೆಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಟಿಪ್ಪು ಅವರದ್ದು. ನವೀನ್ ಅವರು ಟಿಪ್ಪು ನೈಜ ವ್ಯಕ್ತಿತ್ವವನ್ನು ತಮ್ಮ ಪುಸ್ತಕದಲ್ಲಿ ಬಿಂಬಿಸಿದ್ದಾರೆ. ಹಿಂದೆ ಸತ್ಯ ಹೇಳಿದ್ದ ಕಾರಣಕ್ಕೆ ಸಂಕಷ್ಟ ಎದುರಿಸಿ ಜೈಲು ಕಂಡಿರುವ ಅವರು ಸತ್ಯದ ಹಾದಿಯಲ್ಲಿ ರಾಜಿ ಮಾಡಿಕೊಳ್ಳದ ದಿಟ್ಟ ಪತ್ರಕರ್ತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಕೊತ್ತಿಪುರ ಜಿ. ಶಿವಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವೀನ್ ಸೂರಿಂಜೆ ಹಾಗೂ ಕಾವ್ಯ ದಂಪತಿಯನ್ನು ಸನ್ಮಾನಿಸಲಾಯಿತು. ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ, ಮುಸ್ಲಿಂ ಪದವೀಧರರ ವೇದಿಕೆಯ ಕಾರ್ಯದರ್ಶಿ ನಯಾಜ್ ಅಹಮದ್, ನಮ್ಮವರು ಬಳಗದ ಪದ್ಮರೇಖಾ, ನಗರಸಭೆ ಸದಸ್ಯ ಸಮದ್, ನಮ್ಮವರು ಬಳಗದ ಡಾ. ಅಂಕನಹಳ್ಳಿ ಪಾರ್ಥ, ಡಾ. ಕೃಷ್ಣ ಹಾಗೂ ಇತರರು ಇದ್ದರು. ಬಳಗದ ಆರ್. ನಾಗರಾಜು ಸ್ವಾಗತ ಮತ್ತು ನಿರೂಪಣೆ ಮಾಡಿದರು. ಬ್ಯಾಡರಹಳ್ಳಿ ಶಿವಕುಮಾರ್ ಸೌಹಾರ್ದ ಹಾಡುಗಳನ್ನು ಹಾಡಿದರು.
ಕೋಟ್...
– ನವೀನ್ ಸೂರಿಂಜೆ, ಕೃತಿಯ ಲೇಖಕ
ಕೋಟ್...
ಮುಸ್ಲಿಮರನ್ನು ಅಂಚಿಗೆ ತಳ್ಳುತ್ತಾ ಅಪರಾಧಿ ಸಮುದಾಯವಾಗಿ ಬಿಂಬಿಸುವ ಕೆಲಸವಾಗುತ್ತಿದೆ. ಮುಸ್ಲಿಮರಲ್ಲಿ ಸಮರ್ಥ ನಾಯಕತ್ವದ ಕೊರತೆ, ಒಳಗೊಳ್ಳುವಿಕೆ ಮತ್ತು ಪ್ರಗತಿಪರತೆ ಇಲ್ಲದಿರುವುದು, ಎಲ್ಲವನ್ನು ಧರ್ಮದ ಚೌಕಟ್ಟಿನಲ್ಲಿ ನೋಡುವುದು ಇದಕ್ಕೆ ಕಾರಣವಾಗಿದೆ.ಮುನೀರ್ ಕಾಟಿಪಳ್ಳ, ಹೋರಾಟಗಾರ.