ದೇವರಾಜೇಗೌಡರಿಂದ ಎಸ್‌ಐಟಿ ತನಿಖೆ ದಿಕ್ಕುತಪ್ಪಿಸುವ ಯತ್ನ: ಶಿವಲಿಂಗೇಗೌಡ

KannadaprabhaNewsNetwork |  
Published : May 10, 2024, 01:34 AM ISTUpdated : May 10, 2024, 11:18 AM IST
9ಎಚ್ಎಸ್ಎನ್10 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಮಂಡಳಿ ಅಧ್ಯಕ್ಷರಾದ ಕೆ.ಎಂ.ಶಿವಲಿಂಗೇಗೌಡ. | Kannada Prabha

ಸಾರಾಂಶ

ಪೆನ್‌ಡ್ರೈವ್ ಪ್ರಕರಣದ ಇಡೀ ಹಾಸನ ಜಿಲ್ಲೆಯ ಮಾನ, ಮರ್ಯಾದೆ ಹಾಳಾಗಿದೆ. ಇದರ ಮಧ್ಯೆ ವಕೀಲ ದೇವರಾಜೇಗೌಡ ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.

 ಹಾಸನ :  ಪೆನ್‌ಡ್ರೈವ್ ಪ್ರಕರಣದ ಇಡೀ ಹಾಸನ ಜಿಲ್ಲೆಯ ಮಾನ, ಮರ್ಯಾದೆ ಹಾಳಾಗಿದೆ. ಇದರ ಮಧ್ಯೆ ವಕೀಲ ದೇವರಾಜೇಗೌಡ ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಲೈಂಗಿಕ ಹಗರಣದಿಂದ ನಾವು ತಲೆ ತಗ್ಗಿಸಬೇಕಾಗಿದೆ. ಇದು ಈಗ ಇಡೀ ಜಗತ್ತಿನಲ್ಲಿ ಸುದ್ದಿಯಾಗಿದೆ. ಹೀನ ಕೃತ್ಯವನ್ನು ರೆಕಾರ್ಡ್ ಮಾಡಿ ಎಲ್ಲೆಡೆ ಹಬ್ಬುವಂತೆ ಮಾಡಿದ್ದು ಸಹಿಸಲು ಆಗುವುದಿಲ್ಲ. ಈ ಬಗ್ಗೆ ಮೊದಲು ಹೇಳಿದ್ದು ದೇವರಾಜೇಗೌಡ, ಹಾಸನದ ವೃತ್ತದಲ್ಲಿ ಪರದೆ ಹಾಕಿ ತೋರಿಸ್ತೇನೆ ಎಂದು ಅವರು ಸವಾಲು ಹಾಕಿದ್ದರು. ಹೆಣ್ಣುಮಕ್ಕಳ ಮುಖ ಬ್ಲರ್ ಮಾಡದೆ ಹಂಚಿದ್ದು ಸಮಾಜ ತಲೆ ತಗ್ಗಿಸುವ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಹೆಣ್ಣುಮಕ್ಕಳ ಗೌರವ ಉಳಿಯಬೇಕಾಗಿದ್ದರೆ ಅವರು ಪೊಲೀಸರಿಗೋ ನ್ಯಾಯಾಧೀಶರಿಗೋ ಕೊಡಬೇಕಿತ್ತು. ಪೆನ್‌ಡ್ರೈವ್ ಯಾರು ಬಿಟ್ಟಿದ್ದಾರೆ ಎಲ್ಲವೂ ತನಿಖೆಯಿಂದ ಹೊರ ಬರುತ್ತದೆ. ಈಗ ಪೆನ್‌ಡ್ರೈವ್ ಹರಿಬಿಟ್ಡಿದ್ದು ಯಾರು ಎಂದು ಚರ್ಚೆ ಶುರುವಾಗಿದೆ. ಇದರಲ್ಲಿ ರಾಜಕೀಯ ಬೆರೆತಿದೆ, ಜಾತಿಯೂ ಬಂದಿದೆ. ಆರೋಪ ಪ್ರತ್ಯಾರೋಪ ಕೂಡ ಆಗುತ್ತಿದೆ. ದೇವರಾಜೇಗೌಡ ಅವರು ಶಿವರಾಮೇಗೌಡ ಅವರ ಮೂಲಕ ಡಿ.ಕೆ. ಶಿವಕುಮಾರ್ ಮಾತಾಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡುತ್ತಾರೆ ಎಂದು ದೂರಿದರು.

ಕಾರ್ತಿಕ್ ಎಲ್ಲಾ ವಿರೋಧ ಪಕ್ಷಗಳ ನಾಯಕರ ಸಂಪರ್ಕ ಮಾಡಿದ್ದಾರೆ. ಅವರು ಶ್ರೇಯಸ್ ಪಟೇಲ್ ಜೊತೆ ಫೋಟೋ ತೆಗೆಸಿಕೊಂಡಿದ್ದನ್ನು ದೊಡ್ಡದಾಗಿ ಬಿಂಬಿಸಿತ್ತಿದ್ದಾರೆ. ದೇವೇಗೌಡರ ಕುಟುಂಬ ಬಿಟ್ಟು ಬಂದ ಮೇಲೆ ವಿರೋಧ ಪಕ್ಷದವರ ಜೊತೆ ಬರೋದು ಸಹಜ ಅಲ್ಲವೇ ಎಂದು ವ್ಯಂಗ್ಯವಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ