ದಾಬಸ್‍ಪೇಟೆ: ಐವತ್ತು ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂಮಿಯನ್ನು ಪ್ರಭಾವಿಗಳು ನಮ್ಮಿಂದ ಕಬಳಿಸುವ ಯತ್ನಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರೇ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಜತೆ ಜಮೀನಿನ ಮಾಲೀಕ ಉಮಾಶಂಕರ್(ಮಹದೇವಯ್ಯ) ಪ್ರತಿಭಟನೆ ನಡೆಸಿದರು.
ಪ್ರಜಾ ವಿಮೋಚನಾ ಚಳವಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡರಾಜು ಮಾತನಾಡಿ, ದಲಿತರ ಜಮೀನನ್ನು ಕಬಳಿಸಲು ಕೆಲವರು ಯತ್ನಿಸುತ್ತಿದ್ದು, ಜೊತೆಗೆ ಪೊಲೀಸರು ದಲಿತರ ಮೇಲೆಯೇ ದೌರ್ಜನ್ಯ ಎಸಗುತ್ತಿದ್ದು ಕೋಟಿಗಟ್ಟಲೆ ಬೆಲೆ ಬಾಳುವ ಈ ಜಮೀನು ದಲಿತ ಉಮಾಶಂಕರ್ ಕುಟುಂಬಕ್ಕೆ ಸೇರಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನ್ಯಾಯ ಒದಗಿಸಬೇಕು. ಇಲ್ಲವೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕುಟುಂಬಸ್ಥರಾದ ಗಂಗಮ್ಮ, ಮಹದೇವಯ್ಯ, ರತ್ನಮ್ಮ, ಲಕ್ಷ್ಮಮ್ಮ, ಬೆಂಗಳೂರು ನಗರ ಅಧ್ಯಕ್ಷ ಅಯೂಬ್ ಖಾನ್, ಗಂಗರಾಜು, ಕಾಂತರಾಜು, ಛಲವಾದಿ ವೇದಿಕೆಯ ಶಿವಲಿಂಗಯ್ಯ, ಗರುಡಪ್ಪ, ಆನಂದ್ ಕುಮಾರ್, ಗೋವಿಂದರಾಜು, ಮಹಿಳಾ ಮುಖಂಡರಾದ ಮಂಜಮ್ಮ ಸೇರಿದಂತೆ ಹಲವರಿದ್ದರು.ಪೋಟೋ 5 : ತ್ಯಾಮಗೊಂಡ್ಲು ಹೋಬಳಿಯ ವಾದಕುಂಟೆ ಗ್ರಾಮದಲ್ಲಿ ಜಮೀನು ಕಬಳಿಸಲು ಯತ್ನಿಸುತ್ತಿದ್ದವರ ವಿರುದ್ಧ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.