ಇಂಡಿಯಾ ಒಕ್ಕೂಟ, ಜಿರಳೆ ಪಕ್ಷದ ವಿರುದ್ಧದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ
ಭಾರತವು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ದೇಶವಾಗಿ ಪರಿವರ್ತನೆಯಾಗುವ ಕಾಲ ದೂರವಿಲ್ಲ. ಕಾಂಗ್ರೆಸ್ ಇದನ್ನು ಅರಿತು ದೇಶದಲ್ಲಿ ಆರಾಜಕತೆ ಸೃಷ್ಠಿ ಮಾಡಲು ಭಾರತದ ವಿರೋಧಿ ದೇಶಗಳೊಂದಿಗೆ ಹಾಗೂ ಉಗ್ರಗಾಮಿಗಳೊಂದಿಗೆ ಕೈಜೋಡಿಸಿ ನೀಟ್ ವಿಷಯ ಮುಂದು ಮಾಡಿಕೊಂಡು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂಡಿಯಾ ಒಕ್ಕೂಟ ಹಾಗೂ ಭಾರತೀಯ ಜಿರಳೆ ಪಕ್ಷದ ವಿರುದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಕಳೆದ ೧೨ ವರ್ಷ ನರೇಂದ್ರ ಮೋದಿಯ ಆಡಳಿತದಲ್ಲಿ ಯಾವುದೇ ಹಗರಣಗಳಿಲ್ಲದೆ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೋಯುತ್ತಿರುವುದು ಕಂಡು ಭೀತಿಯುಂಟಾಗಿದೆ. ದೇಶ ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಖಂಡನೀಯ ಎಂದರು.
ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲಿ ಆರಾಜಕತೆ ಸೃಷ್ಠಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನ ಏಜೆಂಟ್‌ರಂತೆ ವರ್ತಿಸಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಬಿಜೆಪಿಯಿಂದ ತುಕಡಿ ಪಕ್ಷಗಳಿಗೆ, ಗಂಜಿ ಗಿರಾಕಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ, ಆರ್‌ಎಸ್‌ಎಸ್ ಬಿಜೆಪಿ ಹಾಗೂ ಭಾರತದ ಬಗ್ಗೆ ಮಾತನಾಡುವಂತ ನೈತಿಕತೆ ಕಾಂಗ್ರೆಸ್ ಪಕ್ಷವು ಕಳೆದುಕೊಂಡಿದೆ ಎಂದು ಪ್ರತಿಪಾದಿಸಿದರು.
ಪ್ರಚಾರದ ತೆವಲಿಗೆ ಮೋದಿ ಮನೆ ಮುಂದೆ ಪ್ರತಿಭಟಿಸುತ್ತಿರುವ ಕಾಂಗ್ರೆಸ್ ಪಕ್ಷವು ಪಾರ್ಲಿಮೆಂಟ್ ಅಧಿವೇಶದಲ್ಲಿ ಪ್ರಸ್ತಾಪಿಸಬಹುದಾದ ಅವಕಾಶ ಇದ್ದರೂ ಬಳಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ನೀಟ್ ಪರೀಕ್ಷೆ ಬಗ್ಗೆ ಮಾತನಾಡದೆ ಶ್ರೀರಾಮ, ಆಯೋಧ್ಯೆ, ಹಿಂದೂತ್ವ, ಆರ್.ಎಸ್.ಎಸ್. ಬಿಜೆಪಿ. ಹಾಗೂ ನರೇಂದ್ರ ಮೋದಿ ವೈಯುಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕಿಸುತ್ತಿರುವುದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಮಾವು ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ್, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ವಿದ್ಯಾರ್ಥಿ ಮುಖಂಡ ಹರೀಶ್, ಜಿ.ಪಂ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಮುಖಂಡರಾದ ವಿಜಯಕುಮಾರ್, ಮಾಗೇರಿ ನಾರಾಯಣಸ್ವಾಮಿ, ರಾಜು, ಕಪಾಲಿ ಶಂಕರ್, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಬೆಗ್ಲಿ ಸೂರ್ಯಪ್ರಕಾಶ್, ಬಜರಂಗದಳ ಬಾಬು, ಬಾಲಾಜಿ, ಯುವ ಮೋರ್ಚಾ ಬಾಲಾಜಿ, ಸುಗಟೂರು ಚಂದ್ರಶೇಖರ್, ಮಂಜುನಾಥ್, ಸಾ.ಮಾ.ಅನಿಲ್ ಬಾಬು, ಓಹಿಳೇಶ್, ಅರುಣಮ್ಮ, ಮಮತಮ್ಮ, ಸುಮ, ರಾಜಲಲಕ್ಷ್ಮಮ್ಮ, ಗೋವಿಂದರಾಜು, ರಾಜೇಶ್ ಸಿಂಗ್, ಮಹೇಶ್ ಇದ್ದರು.