ಕನ್ನಡಪ್ರಭ ವಾರ್ತೆ ರಾಯಬಾಗ
ರಾಯಬಾಗ ರೈಲ್ವೆ ಸ್ಟೇಷನ್ ಖೈರವಾಡಿ ನಿವಾಸಿ ಸುನೀಲ ದೀಪಾಳೆ (27) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಯುವಕ. ರಾಯಬಾಗ ಪಟ್ಟಣದಿಂದ ಕಂಚಕರವಾಡಿ ರಸ್ತೆಯ ಕಡೆಗೆ ಹೋಗುತ್ತಿರುವ 12 ವರ್ಷದ ಶಾಲಾ ಬಾಲಕಿಗೆ ಡ್ರಾಪ್ ಕೊಡುವುದಾಗಿ ಬೈಕ್ ಮೇಲೆ ಕೂಡ್ರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದು, ಬಾಲಕಿಯ ಚೀರಾಟಕ ಕೇಳಿದ ಸಾರ್ವಜನಿಕರು ಓಡಿ ಬಂದು ಬಾಲಕಿಯನ್ನು ರಕ್ಷಿಸಿ, ಯುವಕನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಯಬಾಗ ಪೊಲೀಸರು ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.