ಪರಶುರಾಂಪುರ: ಆಧುನಿಕ ಕಾಲಘಟ್ಟದಲ್ಲಿ ಯುವಪೀಳಿಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಜಗಳೂರು ಸ್ವಾಮಿ ಹೇಳಿದರು. ಗ್ರಾ.ಪಂ, ಜಿಲ್ಲಾ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ, ದಸರಾ ಕ್ರೀಡಾಕೂಟದ ತಂಡ, ವಾಲಿಬಾಲ್ ಕ್ಲಬ್, ಗೆಳೆಯರ ಬಳಗ ಸೇರಿ ವಿವಿಧ ಯುವಕರ ಸಂಘದ ಸಂಘಗಳ ಆಶ್ರಯದಲ್ಲಿ ಕ್ರೀಡಾಕೂಟ ಆಯೋಜಿಸಿದೆ ಎಂದರು. ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪಿಎಸ್ಐಎಂಕೆ ಬಸವರಾಜು ಮಾತನಾಡಿ, ಯುವ ಪೀಳಿಗೆ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಕ್ರೀಡಾಪಟು ರಾಜಮ್ಮರ ತಿಪ್ಪೇಸ್ವಾಮಿ ಮಾತನಾಡಿದರು. ಗ್ರಾಪಂ ಸದಸ್ಯ ನಾಗರಾಜು, ನಾಗಭೂಷಣ, ಮಾಜಿ ಸದಸ್ಯ ಕರಿಯಣ್ಣ, ಐಓಸಿ. ನಾಗರಾಜಣ್ಣ, ಗೌತಮ, ಮಧುಸೂದನ, ಹರೀಶ ತಿಪ್ಪೇಸ್ವಾಮಿ, ಹೋಟೆಲ್ ರಘು, ತಿಮ್ಮಣ್ಣ, ರಾಜಣ್ಣ, ನಾಗರಾಜ, ರಮೇಶ, ತಿಪ್ಪೇರುದ್ರ, ಬಸವರಾಜು ಇದ್ದರು.