ಹೊನ್ನಾಳಿ ಪುರಸಭೆಯಿಂದ ವಿವಿಧ ಬಾಬ್ತುಗಳ ಹರಾಜು

KannadaprabhaNewsNetwork |  
Published : Mar 06, 2025, 12:31 AM IST
ಹೊನ್ನಾಳಿ ಫೋಟೋ 5ಎಚ್.ಎಲ್.ಐ1.  ಹೊನ್ನಾಳಿ ಪುರಸಭೆಯ ವಿವಿಧ ಬಾಬ್ತುಗಳ ಹರಾಜು ಪ್ರಕ್ರಿಯೆನಡೆಯಿತು,  ಪುರಸಬೆ ಅಧ್ಯಕ್ಷ ಮೈಲಪ್ಪ,ಸದಸ್ಯರುಗಳು, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ  ಬಿಡ್ ದಾರರುಗಳು ಇದ್ದರು.   | Kannada Prabha

ಸಾರಾಂಶ

ಪುರಸಭೆಯ 2024- 25ನೇ ಸಾಲಿನ ವಿವಿಧ ಬಾಬುಗಳ ಹರಾಜು ಪ್ರಕ್ರಿಯೆ ಮಂಗಳವಾರ ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ಸದಸ್ಯರ ಸಮ್ಮುಖ ಪಟ್ಟಣದ ನೀರು ಸರಬರಾಜು ಕೇಂದ್ರ ಅವರಣದಲ್ಲಿ ಮಂಗಳವಾರ ನಡೆಯಿತು.

- ಅಧ್ಯಕ್ಷ ಎ.ಕೆ.ಮೈಲಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ಸದಸ್ಯರ ಸಮ್ಮುಖ ಪ್ರಕ್ರಿಯೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪುರಸಭೆಯ 2024- 25ನೇ ಸಾಲಿನ ವಿವಿಧ ಬಾಬುಗಳ ಹರಾಜು ಪ್ರಕ್ರಿಯೆ ಮಂಗಳವಾರ ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ಸದಸ್ಯರ ಸಮ್ಮುಖ ಪಟ್ಟಣದ ನೀರು ಸರಬರಾಜು ಕೇಂದ್ರ ಅವರಣದಲ್ಲಿ ಮಂಗಳವಾರ ನಡೆಯಿತು.

ಹರಾಜು ಪ್ರಕ್ರಿಯೆಯಿಂದ ಒಟ್ಟು ₹49.46.000 ಆದಾಯ ಪುರಸಭೆಗೆ ಹರಿದುಬರಲಿದೆ ಎಂದು ಪುರಸಭಾಧ್ಯಕ್ಷ ಮೈಲಪ್ಪ ಈ ಸಂದರ್ಭದಲ್ಲಿ ತಿಳಿಸಿದರು.

ಹರಾಜು ಬಾಬ್ತುಗಳ ವಿವರ:

ವಾರದ ಸಂತೆ ₹12,61,000-00, ದಿನ ನಿತ್ಯದ ಹಸಿ ತರಕಾರಿ ಸಂತೆ ಹರಾಜು ₹16,73,000-00, ಜಾನುವಾರು, ಕುರಿ, ಆಡು ಸಂತೆ ಮಾರುಕಟ್ಟೆ ಹರಾಜು ಬಾಬ್ತು ₹8,03,000-00, ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಸುಂಕ ₹4,01,000-00, ಮಾಂಸದ ಅಂಗಡಿ -1 ಹರಾಜು ಬಾಬ್ತು ₹3,07,000-00, ಮಾಂಸದ ಅಂಗಡಿ-2ಕ್ಕೆ ₹5,01,000-00 ಹರಾಜು ಪ್ರಕ್ರಿಯೆ ನಡೆಯಿತು.

ಹರಾಜು ಪ್ರಕ್ರಿಯೆ ಪುರಸಭೆ ಸದಸ್ಯರಾದ ಭಾವಿಮನೆ ರಾಜಣ್ಣ, ರಾಜೇಂದ್ರ, ರಂಜಿತಾ ಚನ್ನಪ್ಪ, ಎಂ. ಸುರೇಶ್, ಪ ಪಂ ಮಾಜಿ ಸದಸ್ಯರಾದ ಎಚ್.ಡಿ. ವಿಜೇಂದ್ರಪ್ಪ, ಅಣ್ಣಪ್ಪ, ಗಿರೀಶ್, ಚಂದ್ರು ಗುಂಡಾ, ಇಂಚರ ಮಂಜುನಾಥ್, ಮಹೇಶ್ ಹುಡೇದ್, ನಾಮಿನಿ ಸದಸ್ಯ ಚಂದ್ರಪ್ಪ, ಬೂದೆಪ್ಪ, ರವಿ, ದೊಡ್ಡಕೇರಿ ಮಾದಪ್ಪ, ಎಚ್.ಬಿ. ಅಣ್ಣಪ್ಪ, ಕಕರವೇ ಶ್ರೀನಿವಾಸ್, ವಿನಯ್ ವಗ್ಗರ್, ಮಂಜುನಾಥ್ ಕಲ್ಕೇರಿ, ರಾಜುಕಡಗಣ್ಣಾರ್, ಹರೀಶ್ ಸೇರಿದಂತೆ ನೂರಾರು ಜನರು ಹರಾಜು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಮುಖ್ಯಾಧಿಕಾರಿ ಟಿ. ಲೀಲಾವತಿ,ಮೋಹನ್, ರಾಮಚಂದ್ರಪ್ಪ, ಮತ್ತು ಸಿಬ್ಬಂದಿ ಹಾಜರಿದ್ದು, ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು.

- - - -5ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪುರಸಭೆಯ ವಿವಿಧ ಬಾಬ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಪುರಸಭೆ ಅಧ್ಯಕ್ಷ ಮೈಲಪ್ಪ, ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಬಿಡ್‌ದಾರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ