ಕನ್ನಡಪ್ರಭ ವಾರ್ತೆ ಔರಾದ್‌ಗಡಿ ಭಾಗದ ಔರಾದ್ ಪಟ್ಟಣದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆಗೆ ಬುಧವಾರ ಪಟ್ಟಣದ ಅಮರೇಶ್ವರ ಮಂದಿರ ಬಳಿ ತಾಲೂಕು ಪಂಚಾಯತ ಇಒ ಕೀರಣ ಪಾಟೀಲ್ ತಮಟೆ ಬಾರಿಸುವ ಮೂಲಕ ಮೆರವಣಿಗೆ ಚಾಲನೆ ನೀಡಿದರು. ತೆರೆದ ಸಾರೋಟದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಮನ್ಮಥ ಡೋಳೆ ಹಾಗೂ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಯುವಕರು ಕೈಯಲ್ಲಿ ಕನ್ನಡದ ಧ್ವಜ, ಕೊರಳಲ್ಲಿ ಶಾಲು ಧರಿಸಿಕೊಂಡು ಕನ್ನಡದ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಅಮರೇಶ್ವರ ಮಂದಿರದಿಂದ ಆರಂಭವಾದ ಭವ್ಯ ಮೆರವಣಿಗೆ ಬಸವೇಶ್ವರ ವೃತದ ಮಾರ್ಗವಾಗಿ ಮುಖ್ಯರಸ್ತೆಯ ಮೂಲಕ ಬಸ ನಿಲ್ದಾಣ, ಕನಕದಾಸರ ವೃತ, ಕನ್ನಡಾಂಬೆಯ ವೃತ, ಡಾ.ಚನ್ನಬಸವ ಪಟ್ಟದ್ದೇವರ ವೃತ, ಅಮರೇಶ್ವರ ಕಾಲೇಜು ಮಾರ್ಗವಾಗಿ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿನ ಲಿಂಗೈಕ್ಯ ಚಂದ್ರಪ್ಪ ಪಾಟೀಲ್ ವೇದಿಕೆವರೆಗೆ ಜರುಗಿತು.ಮೆರವಣಿಗೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ತಾಲೂಕು ಅಧ್ಯಕ್ಷ ಬಿ.ಎಮ್.ಅಮರವಾಡಿ, ಧನರಾಜ ರಾಗಾ, ಸಂಜೀವ ಶಟಕಾರ, ಸಂಜು ಮೇತ್ರೆ, ಕೀರಣ ಉಪ್ಪೆ, ನೆಹರು ಪಾಟೀಲ್,ಶರಣಪ್ಪ ಪಾಟೀಲ್, ಅಶೋಕ ಶೆಂಬೆಳ್ಳೆ,ಅಂಬಾದಾಸ ನೆಳಗೆ, ಸುನೀಲ ಮೀತ್ರಾ, ಅಮರ ಸ್ವಾಮಿ, ಸಂದೀಪ ಪಾಟೀಲ್, ಆನಂದ ದ್ಯಾಡೆ ಸೇರಿದಂತೆ ಇನ್ನಿತರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರೆ,ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳ ವೇಷ ಭೂಷಣ ನೋಡುಗರ ಕಣ್ಮನ ಸೆಳೆಯಿತು.
ಕೃಷಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಸ್ತಬ್ದಚಿತ್ರಗಳು ಇಲಾಖೆಯ ಯೋಜನೆ ಬಗ್ಗೆ ಅರಿವು ಮೂಡಿಸುವ ನಾಪ ಫಲಕದ ಪ್ರಚಾರ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗೂ ನೀಡಿದವು. ಶಾಸಕ ಪ್ರಭು ಚವ್ಹಾಣ ಸೇರಿದಂತೆ ಇನ್ನಿತರ ಮುಖಂಡರು ಅಧಿಕಾರಿಗಳು ಸಂಘ ಸಂಸ್ಥೆಗಳ ಸದಸ್ಯರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದರು.ಪಟ್ಟಣದಲ್ಲಿ ನಡೆದ ಭವ್ಯ ಮೆರವಣಿಗೆ ನೋಡಲು ಜನರು ಅಂಗಡಿ ಹಾಗೂ ಮನೆಗಳ ಮೇಲೆ ನಿಂತು ವೀಕ್ಷಣೆ ಮಾಡಿದರು. ರಕ್ಷಾಳ ಗ್ರಾಮದ ಡೋಳ್ಳಾಟ, ನೆರೆಯ ರಾಜ್ಯ ತೆಲಾಂಗಣದ ಹಲಗಿ, ಓಂಟೆ ಮತ್ತು ಕುದುರೆಗಳು ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು. ತಹಶೀಲ್ದಾರ್ ಮಹೇಶ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯಿತ್ರಿ, ತಾಪಂ ಎಡಿ ಶಿವಕುಮಾರ ಘಾಟೆ, ಸೇರಿದಂತೆ ಶಿಕ್ಷಕರು ಸಂಘ ಸಂಸ್ಥೆಗಳ ಮುಖಂಡರು ಮೆರವಣಿಗೆಯಲ್ಲಿದ್ದರು.
--ಚಿತ್ರ 4ಬಿಡಿಆರ್52:ಔರಾದ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ತಮಟೆ ಬಾರಿಸುವ ಮೂಲಕ ತಾಪಂ ಇಒ ಕಿರಣ ಪಾಟೀಲ್ ಚಾಲನೆ ನೀಡಿದರು.--
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.