ಲೇಖಕಿ ಮಂಜುಳಾ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಅನಾವರಣ

KannadaprabhaNewsNetwork |  
Published : Feb 02, 2025, 11:46 PM IST
ಫೋಟೋ 1ಪಿವಿಡಿ4ಇಲ್ಲಿನ ಕೆ.ಟಿ.ಹಳ್ಳಿಯ ಡಾ.ಮಂಜುಳ ಬರೆದ ಇಂದ್ರಾಜಿತ್ ಕಾದ೦ಬರಿ ಹಾಗೂ ವಿವಿಯ ಪ್ರೋಫೆಸರ್ ತಾಲೂಕಿನ ಪೆನ್ನೋಬನಹಳ್ಳಿಯ ಡಿ.ಸದಾನಂದ ಅವರು ಬರೆದ ಜಂಡರ್ ಈಕ್ವಲಿಟಿ ಪುಸಕ್ತಗಳನ್ನು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ನಟ ಶಶಿಧರ್ ಕೋಟೆ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಲೇಖಕಿ ಮಂಜುಳಾ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಅನಾವರಣ

ಕನ್ನಡಪ್ರಭ ವಾರ್ತೆ ಪಾವಗಡ ಸಮಾಜ ಮುಖಿ ಸೇವಾ ಕಾರ್ಯಗಳಲ್ಲಿ ಉತ್ತಮ ಹೆಸರುಗಳಿಸುವ ಮೂಲಕ ಗಡಿ ಪ್ರದೇಶದ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ವಾಸಿ ಲೇಖಕಿ ಡಾ.ಮಂಜುಳ ಬಹುಎತ್ತರಕ್ಕೆ ಬೆಳೆದು ಗ್ರಾಮಕ್ಕೆ ಕೀರ್ತಿ ತಂದಿದ್ದು ಅತ್ಯಂತ ಸಂತಸ ತಂದಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹರ್ಷ ವ್ಯಕ್ತಪಡಿಸಿದರು.ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಕೆ.ಟಿ.ಹಳ್ಳಿ ಡಾ.ಮಂಜುಳ ಬರೆದ ಇಂದ್ರಾಜಿತ್ ಕಾದಂಬರಿ ಹಾಗೂ ಪ್ರೋಫೆಸರ್ ಡಿ.ಸದಾನಂದ ಅವರ ಲಿಂಗ ಸಮಾನತೆಯ ಪುಸ್ತಕ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದರು. ಇಂದ್ರಜಿತ್ ಕಾದಂಬರಿ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಗುರುಗಳು ಸಲ್ಲಿಸಿದ್ದ ಸೇವೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರಿದೀಪ ಹಾಗೂ ಶಿಸ್ತುಬದ್ಧ ಬದುಕಿನ ಬಗ್ಗೆ ಅನೇಕ ವಿಚಾರಗಳು ಉಲ್ಲೇಖಿಸಿದ್ದಾರೆ. ಗ್ರಾಮೀಣ ಸೊಗಡಿನ ಬಗ್ಗೆ ಹಾಗೂ ಅಂದಿನ ಬದುಕಿನ ಸ್ಥಿತಿಗತಿ ಕುರಿತ ಕಾದಂಬರಿ ಪುಸ್ತಕ ತುಂಬಾ ಅರ್ಥಪೂರ್ಣವಾಗಿದೆ ಎಂದರು.

ಶ್ರೀರಾಮ ಗ್ರಾಮಾಂತರ ಎಜ್ಯುಕೇಷನ್ ಸೊಸೈಟಿಯ ರಂಗೇಗೌಡ್ರು ಮಾತನಾಡಿ ನಮ್ಮ ಗ್ರಾಮದಲ್ಲಿ ಜನಿಸಿದ ಪುಟ್ಟ ಹುಡುಗಿ ತನ್ನ ವಿದ್ಯಾಬ್ಯಾಸ ಮೂಲಕ ಪದವಿಗಳಿಸಿ, ಅನೇಕ ವಿಚಾರಧಾರೆ ಸಮಾಜ ಮುಖಿ ಕಾರ್ಯಗಳ ಮೂಲಕ ಎತ್ತರಕ್ಕೆ ಬೆಳೆದು ಬೆಳಕು ಚೆಲ್ಲುತ್ತಿರುವುದು ಸಂತಸ ತಂದಿದೆ ಎಂದರು.

ಖ್ಯಾತ ಗಾಯಕ ಹಾಗೂ ಕನ್ನಡ ಚಲನ ಚಿತ್ರನಟರಾದ ಶಶಿಧರ್ ಕೋಟೆ ಮಾತನಾಡಿದರು. ಬೆಂಗಳೂರು ವಿವಿಯ ಪ್ರೋಫೆಸರ್ ಡಿ.ಸದಾನಂದ ಅವರು ಪುಸ್ತಕ ಬಿಡುಗಡೆ ಕುರಿತು ಅನೇಕ ವಿಚಾರ ಮಂಡಿಸಿದರು. ಹುಬ್ಬಳ್ಳಿ ತಾಲೂಕು ಚನ್ನಾಪುರದ ಅಧ್ಯಾತ್ಮ ಅಶ್ರಮದ ಗುರು ಶ್ರೀ ಸಿದ್ಧಾರ್ಥ ಸ್ವಾಮಿಗಳು ಸಾನಿಧ್ಯವಹಿಸಿದ್ದರು.

ನೆಲಮಂಗಲ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌, ಸಮಾಜ ಸೇವಕಿ ನಾಗರತ್ನಮ್ಮ ತಿಮ್ಮರಾಯಪ್ಪ, ಬೆಂಗಳೂರು ಕಸಾಪ ಉಪಾಧ್ಯಕ್ಷೆ ಡಾ.ಮೀನಾ ಮಹದೇವ್, ರಾಜ್ಯ ರೈತ ಸಂಘ ಉಪಾಧ್ಯಕ್ಷೆ ಡಾ.ಪುಷ್ಪಲತಾ, ಬೆಂಗಳೂರು ಚಲನಚಿತ್ರ ನಟ ಸ್ಟೈಲ್ ಶಿವು, ಸಾಹಿತಿ ಚನ್ನಬಸವಣ್ಣ, ಗುತ್ತಿಗೆದಾರ ಮಂಜುನಾಥ್ , ಶ್ರೀಮ೦ತಪ್ಪಾ, ಡಾ.ಎನ್. ಬಿ.ಕೃಷ್ಣಮೂರ್ತಿ ಸಮಾಜ ಸೇವಕಿ ಗಂಗರಾಜಮ್ಮ, ಲತಾ. ಡಾ. ಶ್ರುತಿ ಮಂಜು, ನಿಹಾರಿಕಾ, ಪತ್ರಕರ್ತರಾದ ಕೆ.ರಾಮಪುರ ನಾಗೇಶ್, ನವೀನ್ ಕಿಲಾರ್ಲಹಳ್ಳಿ, ಶಿಕ್ಷಕ ನಾಗರಾಜ್ ಇದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ