ಸಿಎನ್‌ಜಿ ಬದಲು ಸಿಬಿಜಿ ಬೇಡ, ಆಟೋ ಚಾಲಕರ ಮನವಿ

KannadaprabhaNewsNetwork |  
Published : Dec 29, 2025, 03:00 AM IST
ಸಿಎನ್‌ಜಿ ಮಾತ್ರ ವಿತರಿಸಲು ಬಂಕ್‌ಗಳಿಗೆ ನಿರ್ದೇಶನ ನೀಡುವಂತೆ ಆಟೋ ಚಾಲಕರು ನರಗುಂದ ತಹಸೀಲ್ದಾರ್‌ಗೆ ಮನವಿ ನೀಡಿದರು. | Kannada Prabha

ಸಾರಾಂಶ

ಸಿಎನ್‌ಜಿ ಆಟೋಗಳಿಗೆ ಸಿಬಿಜಿ ಗ್ಯಾಸ್ ಹೊಂದುತ್ತಿಲ್ಲ. ಆಟೋಗಳ ಪಿಕ್‌ಅಪ್‌, ಮೈಲೇಜ್‌ ಸಾಮರ್ಥ್ಯ ಕುಸಿಯುತ್ತದೆ. ಕೆಲವು ಆಟೋಗಳಲ್ಲಿ ಆರಂಭಿಸುವಾಗ ಸಮಸ್ಯೆ, ಚಾಲನೆ ವೇಳೆ ಸಮಸ್ಯೆ ಉಂಟಾಗುತ್ತಿದೆ ಎಂದು ಚಾಲಕರು ಆರೋಪಿಸಿದರು.

ನರಗುಂದ: ಪಟ್ಟಣದಲ್ಲಿರುವ ಎರಡು ಸಿಎನ್‌ಜಿ ಬಂಕ್‌ಗಳಲ್ಲಿ ಈಗ ಸಿಎನ್‌ಜಿ ಬದಲು ಸಿಬಿಜಿ(ಬಯೋಗ್ಯಾಸ್‌) ಹಾಕುತ್ತಿರುವುದರಿಂದ ಆಟೋ ಚಾಲಕರಿಗೆ ಸಮಸ್ಯೆಯಾಗುತ್ತಿದೆ ಎಂದು ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜೈ ಭೀಮ ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಹಾಗೂ ಕರವೇ ಆಶ್ರಯದಲ್ಲಿ ತಹಸೀಲ್ದಾರರಿಗೆ ಮನವಿ ನೀಡಿ ಮಾತನಾಡಿದರು.

ಪಟ್ಟಣದಲ್ಲಿ ಎರಡು ಸಿಎನ್‌ಜಿ ಬಂಕ್‌ ಸ್ಥಾಪನೆಯಾದ ಬಳಿಕ, ಹಲವರು ಸಿಎನ್‌ಜಿ ಚಾಲಕ ಆಟೋ ಖರೀದಿಸಿದ್ದಾರೆ. ಆದರೆ ಬಂಕ್‌ನವರು ಈಗ ಸಿಎನ್‌ಜಿ ಬದಲು ಸಿಬಿಜಿ ಹಾಕುತ್ತಿದ್ದಾರೆ. ಸಿಎನ್‌ಜಿ ಆಟೋಗಳಿಗೆ ಸಿಬಿಜಿ ಗ್ಯಾಸ್ ಹೊಂದುತ್ತಿಲ್ಲ. ಆಟೋಗಳ ಪಿಕ್‌ಅಪ್‌, ಮೈಲೇಜ್‌ ಸಾಮರ್ಥ್ಯ ಕುಸಿಯುತ್ತದೆ. ಕೆಲವು ಆಟೋಗಳಲ್ಲಿ ಆರಂಭಿಸುವಾಗ ಸಮಸ್ಯೆ, ಚಾಲನೆ ವೇಳೆ ಸಮಸ್ಯೆ ಉಂಟಾಗುತ್ತಿದೆ ಎಂದರು.

ಸಿಎನ್‌ಜಿ ಮಾತ್ರ ವಿತರಿಸಲು ಬಂಕ್‌ಗಳಿಗೆ ಸೂಚಿಸಬೇಕು ಎಂದು ಅವರು ತಹಸೀಲ್ದಾರರಿಗೆ ಮನವಿ ನೀಡಿದರು. ತಹಸೀಲ್ದಾರ್‌ ಶ್ರೀಶೈಲ ತಳವಾರ ಅವರು ಮನವಿ ಸ್ವೀಕರಿಸಿದರು. ತಾಲೂಕು ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಚನ್ನಬಸಪ್ಪ ಹೊಸರನ್ನವರ, ಮಹಾದೇವ ಆಶೇದಾರ, ಅಲ್ಲಾಭಕ್ಷ ಮುಲ್ಲಾ, ಸಲೀಂ ಕರೆಮನಿ, ಇಮಾಮ ಹದಲಿ, ಹಜರತ ಅಲಿ ನಾಲಬಂದ ಇದ್ದರು.ಇಂದು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಗದಗ: ಕನಕದಾಸ ಶಿಕ್ಷಣ ಸಮಿತಿಯ ಕೆಎಸ್‌ಎಸ್ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹಾಗೂ ಕನ್ನಡ ಕಿರಣ ಶಿಕ್ಷಣ ಸಮಿತಿ, ಐಕ್ಯುಎಸ್‌ಸಿ ಸಯೋಗದಲ್ಲಿ ಎಂಎ ಹಾಗೂ ಎಂಎಸ್‌ಡಬ್ಲ್ಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ಡಿ. 29ರಂದು ಬೆಳಗ್ಗೆ 10ಕ್ಕೆ ರಾಜೀವಗಾಂಧಿ ನಗರದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜರುಗಲಿದೆ. ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸಮಿತಿ ಮುಖ್ಯಸ್ಥೆ ಶಕುಂತಲಾಬಾಯಿ ದಂಡಿನ ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಮಿತಿಯ ಸದಸ್ಯ ಹಾಗೂ ಜಿಲ್ಲಾ ಎಬಿವಿಪಿ ಮುಖಂಡ ಡಾ. ಪುನೀತಕುಮಾರ ಬೆನಕನವಾರಿ, ಪ್ರಾಂತ್ಯ ಪ್ರಚಾರ ಪ್ರಮುಖ ಕಿರಣಕುಮಾರ ವಿವೇಕವಂಶಿ, ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ನಗರಸಭೆ ಸದಸ್ಯೆ ಶ್ವೇತಾ ಬೆನಕನವಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೂಮಿ ಬಿಡುವುದಾದರೇ ಮೊದಲು ಒಂದು ತೊಟ್ಟು ವಿಷ ಕೊಡಿ
ಮಕ್ಕಳ ಶೈಕ್ಷಣಿಕ ಅಭ್ಯಾಸಕ್ಕೆ ಪಾಲಕರ ಪ್ರೋತ್ಸಾಹ ಅಗತ್ಯ