ನಾಡು-ನುಡಿ ವಿಚಾರದಲ್ಲಿ ಆಟೋ ಚಾಲಕರು ಸದಾ ಮುಂಚೂಣಿ

KannadaprabhaNewsNetwork |  
Published : Nov 19, 2026, 02:00 AM IST
ನಾಡು-ನುಡಿಯ ವಿಚಾರದಲ್ಲಿ ಆಟೋ ಚಾಲಕರು ಸದಾ ಮುಂಚೂಣಿ | Kannada Prabha

ಸಾರಾಂಶ

ಕೊಪ್ಪ ನಾಡು-ನುಡಿ ವಿಚಾರ ಬಂದಾಗ ರಾಜ್ಯದ ಆಟೋ ಚಾಲಕರು ಮತ್ತು ಮಾಲೀಕರು ಸದಾ ಮುಂಚೂಣಿಯಲ್ಲಿ ನಿಂತು ಒಗ್ಗಟ್ಟು ಪ್ರದರ್ಶಿಸುತ್ತಾರೆ. ಸಮಾಜಕ್ಕೆ ಸೇವೆ ಸಲ್ಲಿಸಲು ಅಧಿಕಾರ ಅಥವಾ ಆರ್ಥಿಕ ಬಲವೇ ಬೇಕಿಲ್ಲ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಾಲು ಮರದ ತಿಮ್ಮಕ್ಕ ಅವರಂತಹ ಸಾಧಕರೇ ಇದಕ್ಕೆ ಸಾಕ್ಷಿ. ಎಂದು ಕೊಪ್ಪ ಪೊಲೀಸ್ ಠಾಣಾಧಿಕಾರಿ ಮಧು ಅಭಿಪ್ರಾಯ ಪಟ್ಟರು.

ಕೊಪ್ಪ ಠಾಣಾಧಿಕಾರಿ ಮಧು । ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ ​ಕೊಪ್ಪ

ನಾಡು-ನುಡಿ ವಿಚಾರ ಬಂದಾಗ ರಾಜ್ಯದ ಆಟೋ ಚಾಲಕರು ಮತ್ತು ಮಾಲೀಕರು ಸದಾ ಮುಂಚೂಣಿಯಲ್ಲಿ ನಿಂತು ಒಗ್ಗಟ್ಟು ಪ್ರದರ್ಶಿಸುತ್ತಾರೆ. ಸಮಾಜಕ್ಕೆ ಸೇವೆ ಸಲ್ಲಿಸಲು ಅಧಿಕಾರ ಅಥವಾ ಆರ್ಥಿಕ ಬಲವೇ ಬೇಕಿಲ್ಲ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಾಲು ಮರದ ತಿಮ್ಮಕ್ಕ ಅವರಂತಹ ಸಾಧಕರೇ ಇದಕ್ಕೆ ಸಾಕ್ಷಿ. ಎಂದು ಕೊಪ್ಪ ಪೊಲೀಸ್ ಠಾಣಾಧಿಕಾರಿ ಮಧು ಅಭಿಪ್ರಾಯ ಪಟ್ಟರು.

ಪಟ್ಟಣದ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಶನಿವಾರ ನಡೆದ 71ನೇ ಅದ್ಧೂರಿ ಕನ್ನಡ ರಾಜ್ಯೋತ್ಸವ ದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ​ಕನ್ನಡ ಭಾಷೆ ಶ್ರೇಷ್ಠತೆ ಸ್ಮರಿಸಿ ಇಂಗ್ಲಿಷ್ ಭಾಷೆ ಹುಟ್ಟುವ ಮುನ್ನವೇ ಕನ್ನಡದಲ್ಲಿ ಆದಿಕವಿ ಪಂಪ ಮಹಾಕಾವ್ಯ ರಚಿಸಿದ್ದರು. ಇಂತಹ ಪರಿಶುದ್ಧ ಹಾಗೂ ಶ್ರೀಮಂತ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೋಷಕರು ಕೇವಲ ಅಂಕಗಳಿಕೆಗೆ ಒತ್ತು ನೀಡದೆ ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರಂತಹ ಮಹಾನ್ ಕವಿ ಜನಿಸಿದ ಮಲೆನಾಡಿನ ಪುಣ್ಯಭೂಮಿಯಲ್ಲಿ ನಾವಿರುವುದೇ ನಮ್ಮ ಭಾಗ್ಯ ಎಂದು ಅಭಿಪ್ರಾಯಪಟ್ಟರು.

​ಸಂಘದ ಗೌರವಾಧ್ಯಕ್ಷ ವಕೀಲ ನಾರಾಯಣ ಸ್ವಾಮಿ ಮಾತನಾಡಿ ನಾಡು ನಮಗೇನು ನೀಡಿದೆ ಎನ್ನುವುದಕ್ಕಿಂತ ನಾಡಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಬೇಕು. ನಾನು ಎಂಬುದಕ್ಕಿಂತ ನಮ್ಮದು ಎಂಬ ಮನೋಭಾವ ಬೆಳೆಯಬೇಕು. ಕುವೆಂಪು ಹಾಗೂ ಡಾ. ರಾಜ್‌ಕುಮಾರ್ ಅವರಂತಹ ಮಹನೀಯರು ತಮ್ಮ ನಿಷ್ಕಲ್ಮಶ ಕನ್ನಡ ಪ್ರೇಮ ಮತ್ತು ತ್ಯಾಗ ಮನೋಭಾವದಿಂದ ಕನ್ನಡಿಗರ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದರು.

​ಸಂಘದ ಕ್ಷೇತ್ರ ಗೌರವಾಧ್ಯಕ್ಷ ಜಗದೀಶ್ ಎಚ್.ಆರ್. ಮಾತನಾಡಿ ಸುಮಾರು 40-50 ವರ್ಷಗಳ ಇತಿಹಾಸವಿರುವ ನಮ್ಮ ಸಂಘ, ಸರ್ಕಾರದಂತೆ ನ.1ಕ್ಕೆ ಸೀಮಿತವಾಗದೆ ಇಡೀ ತಿಂಗಳು ನಾಡಹಬ್ಬ ಸಂಭ್ರಮಿಸುತ್ತದೆ. ಕುವೆಂಪು ಆಶಯ ದಂತೆ ಕರ್ನಾಟಕ ನಿಜವಾದ ಸರ್ವ ಜನಾಂಗದ ಶಾಂತಿಯ ತೋಟ. ಚಾಲಕರ ಹಕ್ಕುಗಳ ಹೋರಾಟದ ಜೊತೆಗೆ ರಕ್ತ ದಾನ, ಅನಾಥ ಶವಸಂಸ್ಕಾರ, ಅಪಘಾತದ ತುರ್ತು ನೆರವು, ಪ್ರಾಮಾಣಿಕತೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ದ ಮೂಲಕ, ಸೇವೆ ಮಾಡಲು ಹಣ-ಅಧಿಕಾರ ಬೇಕಿಲ್ಲ ಎಂಬುದನ್ನು ಚಾಲಕರು ಸಾಬೀತುಪಡಿಸಿದ್ದಾರೆ ಎಂದರು.

ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ, ಸುಧಾಕರ್, ವಿವೇಕ, ಸುರೇಂದ್ರ ಶೆಟ್ಟಿ, ವಿಕ್ರಮ್,ಮೋಹನ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ