ಆಟೋ ಚಾಲಕರು ಗೂಗಲ್ ಮ್ಯಾಪ್‌ಗಿಂತಲೂ ವೇಗ:ಕೆ.ಎನ್.ಪ್ರಸನ್ನ ಶೆಟ್ಟಿ

KannadaprabhaNewsNetwork |  
Published : Nov 11, 2024, 01:07 AM IST
ಕೊಪ್ಪ ಸಮನ್ವಯ ಆಟೋ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಬಸ್‌ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡ ಕನ್ನಡ ಧ್ವಜಾರೋಹಣ ಕಾರ್ಯಕ್ರಮ | Kannada Prabha

ಸಾರಾಂಶ

ಕೊಪ್ಪ, ಸಮಸ್ಯೆಗೆ ಸ್ಪಂದಿಸುವ ಮನೋಭಾವದಿಂದ ಸಮಸ್ತ ಮನಸ್ಸುಗಳನ್ನು ಗೆಲ್ಲುವವರು ಆಟೋ ಚಾಲಕರು ಎಂದು ಕೊಪ್ಪ ವರ್ತಕರ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಶೆಟ್ಟಿ ಹೇಳಿದರು.

ಕೊಪ್ಪ ಸಮನ್ವಯ ಆಟೋ ಚಾಲಕರು ಮತ್ತು ಮಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಮಸ್ಯೆಗೆ ಸ್ಪಂದಿಸುವ ಮನೋಭಾವದಿಂದ ಸಮಸ್ತ ಮನಸ್ಸುಗಳನ್ನು ಗೆಲ್ಲುವವರು ಆಟೋ ಚಾಲಕರು ಎಂದು ಕೊಪ್ಪ ವರ್ತಕರ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಶೆಟ್ಟಿ ಹೇಳಿದರು. ಕೊಪ್ಪ ಸಮನ್ವಯ ಆಟೋ ಚಾಲಕರು ಮತ್ತು ಮಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಬಸ್‌ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡ ಕನ್ನಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾತೃಭಾಷೆ ಕನ್ನಡದ ಉಳಿವು ಆಟೋ ಚಾಲಕರಿಂದಲೇ ಆಗುತ್ತಿದೆ.

ಭಾಷಾ ಪ್ರೇಮದೊಂದಿಗೆ ಎಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ಸ್ಥಳದಲ್ಲೇ ಹಾಜರಾಗಿ ಸ್ಪಂದಿಸುತ್ತಾರೆ. ರಕ್ತದಾನ ಎಂದಾಗ ನೆನಪಾಗುವವರೇ ಆಟೋ ಚಾಲಕರು. ಯಾವುದೇ ನೆಟ್‌ವರ್ಕ್ ಇಲ್ಲದ ಸ್ಥಳಗಳಿಗೆ ಯಾವುದೇ ಸಮಯದಲ್ಲಾದರೂ ಜನರನ್ನು ತಲುಪಿಸಲು ಧಾವಿಸಿ ಬರುವ ಆಟೋ ಚಾಲಕರು ಗೂಗಲ್ ಮ್ಯಾಪ್‌ಗಿಂತಲೂ ವೇಗವಾಗಿ ಕಾರ್ಯಾಚರಿಸುತ್ತಾರೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಕಸಾಪ ಜಿಲ್ಲಾ ಸಂಚಾಲಕಿ ಚಂದ್ರಕಲಾ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಾಡುನುಡಿ ಸೇವೆಗೆ ಬದ್ಧರಾಗಿರುವ ಆಟೋ ಚಾಲಕ ಮತ್ತು ಮಾಲಕರ ಶ್ರಮ ಸಾರ್ಥಕವಾಗಲಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಸೇವಾ ಕಾರ್ಯಗಳು ಅವರಿಂದ ನಡೆಯುತ್ತಾ ಇರಲಿ ಎಂದರು. ಸಮನ್ವಯ ಆಟೋ ಚಾಲಕರ ಸಂಘದ ಅಧ್ಯಕ್ಷ ಶ್ರೀಕಾಂತ್, ಗೌರವಾಧ್ಯಕ್ಷ ಮಂಜುನಾಥ್ ಮುಂತಾದವರು ಮಾತನಾಡಿದರು. ಸಂಜೆ ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಟೋ ಚಾಲಕರ ಸಂಘದಿಂದ ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದ ಗಾಯಕಿ ಶಿವಾನಿ ನವೀನ್ ತಂಡದಿಂದ ಶಿವಾನಿ ಮ್ಯೂಸಿಕಲ್ ಕಾರ್ಯಕ್ರಮ ನಡೆಯಲಿದ್ದು ಅನೇಕ ದೂರದರ್ಶನ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಕ್ಯಾಪ್ಷನ್‌:

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಬಸ್‌ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡ ಕನ್ನಡ ಧ್ವಜಾರೋಹಣದಲ್ಲಿ ಕೊಪ್ಪ ವರ್ತಕರ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಶೆಟ್ಟಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ