ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಟೋ ಚಾಲಕರು ದಿನನಿತ್ಯ ನೂರಾರು ಪ್ರಯಾಣಿಕರೊಂದಿಗೆ ನಿಕಟ ಸಂಪರ್ಕ ಬೆಳೆಸುವ ಮೂಲಕ ಕನ್ನಡ ಬಳಕೆಯನ್ನು ಉತ್ತೇಜಿಸುತ್ತಿದ್ದು, ನಾಡು, ನುಡಿಯ ಹೋರಾಟಗಳಲ್ಲಿ ಕಾವಲು ಪಡೆಯ ಯೋಧರಂತೆ ನಿಂತಿದ್ದಾರೆ ಎಂದು ಶ್ಲಾಘಿಸಿದರು. ಅವಘಡಗಳು ಅಥವಾ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಮೊದಲು ಧಾವಿಸುವುದು ಇವರ ಸೇವಾಭಾವದ ಮತ್ತೊಂದು ಉದಾಹರಣೆ ಎಂದರು.ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ದಿವಂಗತ ನಟ ಶಂಕರ್‌ನಾಗ್ ಕರ್ನಾಟಕದ ಅಟೋ ಚಾಲಕರಿಗೆ ಇಂದಿಗೂ ಪ್ರೇರೇಪಕ ವ್ಯಕ್ತಿತ್ವವಾಗಿದ್ದಾರೆಂದು ನೆನಪಿಸಿದರು.ಕಾರ್ಯಕ್ರಮದ ಅಂಗವಾಗಿ ಶ್ರೀ ವಿಘ್ನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ನಿಖಿಲ್, ಸುರೇಂದ್ರನಾಥ್, ರಮೇಶ್ ನಾಯ್ಡು, ಎ.ಪಿ. ಚಂದ್ರಪ್ಪ, ರಘು ಸೇರಿದಂತೆ ನೂರಾರು ಆಟೋ ಮಾಲೀಕರು ಮತ್ತು ಚಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.