ಅಪರಾಧ ನಿಖರ ಮಾಹಿತಿ ಪತ್ತೆಗೆ ಆಟೋ ಚಾಲಕರ ನೆರವು ಅಗತ್ಯ: ಎಎಸ್‌ಪಿ

KannadaprabhaNewsNetwork |  
Published : Jan 09, 2026, 02:45 AM IST
ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ದಿನೇಶ್ ಕುಮಾರ್ ಬಾರಿಕೆ ಮಾತನಾಡಿದರು. | Kannada Prabha

ಸಾರಾಂಶ

ಕೊಡಗು ಪ್ರವಾಸಿಗಾರ ತಾಣವಾಗಿದ್ದು ಇಲ್ಲಿ ಬಂದು ಹೋಗುವ ಪ್ರವಾಸಿಗರಿಂದ ಹಾಗೂ ಸ್ಥಳೀಯವಾಗಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಆಟೋ ಚಾಲಕರು ಜೀವಂತ ಸಿಸಿ ಕ್ಯಾಮರವಿದ್ದಂತೆ. ಅವರ ಬಗ್ಗೆ ನಿಖರ ಮಾಹಿತಿಗಳನ್ನು ನಿಮ್ಮಿಂದ ಮಾತ್ರ ಪಡೆಯಲು ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಬಾರಿಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕೊಡಗು ಪ್ರವಾಸಿಗಾರ ತಾಣವಾಗಿದ್ದು ಇಲ್ಲಿ ಬಂದು ಹೋಗುವ ಪ್ರವಾಸಿಗರಿಂದ ಹಾಗೂ ಸ್ಥಳೀಯವಾಗಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಆಟೋ ಚಾಲಕರು ಜೀವಂತ ಸಿಸಿ ಕ್ಯಾಮರವಿದ್ದಂತೆ. ಅವರ ಬಗ್ಗೆ ನಿಖರ ಮಾಹಿತಿಗಳನ್ನು ನಿಮ್ಮಿಂದ ಮಾತ್ರ ಪಡೆಯಲು ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಬಾರಿಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಚಾಲನೆ ಸಂದರ್ಭ ಚಾಲನಾ ಪರವಾನಗಿ, ವಾಹನ ವಿಮೆ, ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಅಪಘಾತಗಳು ಸಂಭವಿಸಿದಾಗ ದಾಖಲಾತಿ ಹೊಂದಿಲ್ಲದೆ ಇರುವ ಸಂದರ್ಭ ವಾಹನಗಳ ಮಾಲೀಕರಿಗೆ ದುಪ್ಪಟ್ಟು ದಂಡ ಅಥವಾ ಜೀವನ ಪರ್ಯಾಂತ ಜೈಲು ಶಿಕ್ಷೆ ಅಥವಾ ದಂಡಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ವಾಹನ ಚಾಲನೆ ಸಂದರ್ಭ ಅಪಘಾತ ಅವಘಡಗಳು ಒಂದಕ್ಕೊಂದು ಕೊಂಡಿ ಇದ್ದಂತೆ. ಇದರಿಂದ ೨ ಕುಟುಂಬಗಳು ಮತ್ತು ಅವರನ್ನು ಅವಲಂಬಿತರಾಗಿರುವ ಜೀವನ ಸಾಕಷ್ಟು ಸಂಕಷ್ಟಗಳನ್ನು ಜೀವನ ಪರ್ಯಾಂತ ಎದುರಿಸುವಂತಾಗುತ್ತದೆ. ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆ, ಮದ್ಯಪಾನ, ಮಾದಕ ವಸ್ತುಗಳ ಸೇವೆನೆ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವುದರಿಂದ ಇಂತಹ ಅನಾಹುತಗಳು ಸಂಭವಿಸಿ ಅಪಘಾತಗಳಿಂದ ೨ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಇದರ ದೂರವಿರುವಂತೆ ಸೋಮವಾರಪೇಟೆ ಉಪ ವಿಭಾಗ ಡಿವೈಎಸ್‌ಪಿ ಚಂದ್ರಶೇಖರ್ ಕಿವಿಮಾತು ಹೇಳಿದರು.ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮಾತನಾಡಿ, ವಾಹನ ಚಾಲನೆಯ ರಸ್ತೆಯ ನಿಯಮಗಳನ್ನು ಕಡ್ಡಾಯವಾಗಿ ಅಲ್ಲದೆ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯವುದು ಅಪರಾಧ. ಸರಕು ವಾಹನಗಳು ಅಪಘಾತಕ್ಕೀಡಾದಗ ವಾಹನ ಚಾಲಕರು ಮತ್ತು ಮಾಲೀಕರೇ ಪ್ರಯಾಣಿಕರಿಗೆ ಸಂಪೂರ್ಣ ವೆಚ್ಚ ಭರಿಸಬೇಕಾಗುತ್ತದೆ. ಅವರಿಗೆ ಜೀವವಿಮೆ ಲಭಿಸುವುದಿಲ್ಲ ಎಂದು ಚಾಲಕರಿಗೆ ಕಿವಿಮಾತು ಹೇಳಿದರು.

ಕೆಲವು ಆಟೋಗಳಲ್ಲಿ ನಿಯಮಕ್ಕಿಂತ ಅಧಿಕ ಮಕ್ಕಳನ್ನು ಕರೆದೋಯ್ಯುತ್ತಿರುವುದು ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ನಿಯಮವನ್ನು ಉಲ್ಲಂಘಿಸಿ ಅಧಿಕ ಮಕ್ಕಳನ್ನು ಕರೆದೋಯ್ಯುವ ಆಟೋಗಳ ವಿರುದ್ದ ನಿರ್ಧಾಕ್ಷಿಣ್ಯ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಆಟೋಚಾಲಕರಿಗೆ ಎಚ್ಚರಿಸಿದರು.ಆಟೋ ಚಾಲಕರ ಸಂಘದ ಅಧ್ಯಕ್ಷರು ಮಾತನಾಡಿ, ೧೫ ಕಿ.ಮೀ ದೂರ ಸಂಚರಿಸುವ ಪರವಾನಗಿ ಆಟೋಗಳಿಗೆ ಇದ್ದು ಕುಶಾಲನಗರ ಹಾಗೂ ಮಡಿಕೇರಿ ಭಾಗಗಳಿಗೆ ತುರ್ತು ಅನಾರೋಗ್ಯ ಪೀಡಿತ ರೋಗಿಗಳನ್ನು ಜಿಲ್ಲಾಸ್ಪತ್ರೆ ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಕರೆದೋಯ್ಯುವ ಸಂದರ್ಭ ಪೊಲೀಸರು ದಂಡ ವಿಧಿಸುತ್ತಿದ್ದು ಇದಕ್ಕೆ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಪದಾಧಿಕಾರಿಗಳು, ಆಟೋಚಾಲಕರು ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ