ಆಟೋ ಚಾಲಕರು ಆರೋಗ್ಯದ ಬಗ್ಗೆ ಗಮನ ನೀಡಿ

KannadaprabhaNewsNetwork |  
Published : Jan 29, 2025, 01:33 AM IST
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಸಾಕಷ್ಟು ಜನ ದಟ್ಟಣೆ ಆಗಿದೆ. ಜತೆಗೆ ದ್ವಿಚಕ್ರ ವಾಹನಗಳ ಸಂಖ್ಯೆ ಏರಿಕೆ ಕಂಡಿದ್ದು, ಆಟೋ ಸಂಖ್ಯೆಯು ಹೆಚ್ಚಾಗಿದೆ

ಗದಗ: ಆಟೋ ಚಾಲಕರು ದಿನನಿತ್ಯ ಉಪಜೀವನಕ್ಕಾಗಿ ಹಗಲು-ರಾತ್ರಿ ಎನ್ನದೇ ಆಟೋ ಚಾಲನೆ ಮಾಡಿಕೊಂಡು ಬದುಕುತ್ತಿದ್ದಾರೆ. ಇದರೊಟ್ಟಿಗೆ ನಿಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು ಎಂದು ಕಾನೂನು,ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಭಾನುವಾರ ನಗರದಲ್ಲಿ ಜಿಲ್ಲಾ ಜೈ ಭೀಮ್ ಆಟೋ ರಿಕ್ಷಾ ಮಾಲಕರ ಸಂಘ, 76 ನೇ ಪ್ರಜಾರಾಜ್ಯೋತ್ಸವದ ಅಂಗವಾಗಿ ಅಪಘಾತ ರಹಿತವಾಗಿ ಆಟೋ ಚಾಲನೆ ಮಾಡಿದ ಚಾಲಕರಿಗೆ ಅಭಿನಂದನಾ ಪ್ರಶಸ್ತಿ ಮತ್ತು ಸಮವಸ್ತ್ರ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಸಾಕಷ್ಟು ಜನ ದಟ್ಟಣೆ ಆಗಿದೆ. ಜತೆಗೆ ದ್ವಿಚಕ್ರ ವಾಹನಗಳ ಸಂಖ್ಯೆ ಏರಿಕೆ ಕಂಡಿದ್ದು, ಆಟೋ ಸಂಖ್ಯೆಯು ಹೆಚ್ಚಾಗಿದೆ. ಇದರ ನಡುವೆಯೂ ಅತ್ಯಂತ ಜಾಗರೂಕತೆಯಿಂದ ಯಾವುದೇ ಅಪಘಾತ ಆಗದ ರೀತಿ ಚಾಲನೆ ಮಾಡುವುದು ಸವಾಲಿನ ಕೆಲಸವಾಗಿದೆ ಸಾಕಷ್ಟು ಜನ ದಟ್ಟಣೆ ನಡುವೆಯೂ ಕೂದಲೆಳೆಯಷ್ಟು ಅಪಘಾತವಾಗದ ಹಾಗೇ ಚಾಲನೆ ಮಾಡಿದ ಆಟೋ ಚಾಲಕರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು ಸಂತೋಷದ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪರಶುರಾಮ ಪೂಜಾರ, ವಿನಾಯಕ ಬಳ್ಳಾರಿ, ಬಸವರಾಜ ಕಡೆಮನಿ, ಸುರೇಶ ಹುಲಿ, ಲಕ್ಷ್ಮಣ ಕಟ್ಟಿಮನಿ, ವಿಜಯ್ ಮುಳಗುಂದ, ಹರೀಶ್ ಭಾವಿಮನಿ, ಕೃಷ್ಣ ಪೂಜಾರ, ಭಾಷಾಸಾಬ್ ಮಲ್ಲಸಮುದ್ರ, ಚಾಂದಸಾಬ್ ಕೊಟ್ಟೂರ, ಎಸ್.ಎನ್. ಬಳ್ಳಾರಿ, ಬಿ.ಬಿ.ಅಸೂಟಿ, ಬಬರ್ಚಿ, ನಾಗರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ