ಆಟೋ ಗ್ಯಾಸ್‌ ದರ ಏರಿಕೆ: ಚಾಲಕರಿಂದ ಪ್ರತಿಭಟನೆ

KannadaprabhaNewsNetwork |  
Published : Mar 28, 2026, 01:15 AM IST
 ಫೋಟೋ ಇದೆ  :-27 ಕೆಜಿಎಲ್ 1 :  ಗೋ ಗ್ಯಾಸ್ ಮುಂಭಾಗದಲ್ಲಿ ನಿಂತ ಆಟೋಗಳು | Kannada Prabha

ಸಾರಾಂಶ

ಪಟ್ಟಣದಲ್ಲಿ ಖಾಸಗಿ ಗ್ಯಾಸ್ ಕಂಪನಿಯಿಂದ ಗ್ಯಾಸ್ ದರ ಏರಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕರು ಆಕ್ರೋಶಗೊಂಡು ಗ್ಯಾಸ್ ಬಂಕ್ ಮುಂಭಾಗ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ಪಟ್ಟಣದಲ್ಲಿ ಖಾಸಗಿ ಗ್ಯಾಸ್ ಕಂಪನಿಯಿಂದ ಗ್ಯಾಸ್ ದರ ಏರಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕರು ಆಕ್ರೋಶಗೊಂಡು ಗ್ಯಾಸ್ ಬಂಕ್ ಮುಂಭಾಗ ಪ್ರತಿಭಟನೆ ನಡೆಸಿದರು. ಕುಣಿಗಲ್ ಪಟ್ಟಣದಲ್ಲಿ ಇರುವಂತ ಗೋ ಗ್ಯಾಸ್ ಕಂಪನಿ ವತಿಯಿಂದ 27ರಂದು ಮಧ್ಯಾಹ್ನ 2 ಗಂಟೆಯಿಂದ 99.95ಗೆ ಪ್ರತಿ ಲೀಟರ್ ಗ್ಯಾಸ್ ದರವನ್ನು ಏರಿಸಿದ್ದ ಸಂಬಂಧ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಬೆಳಗ್ಗೆ ಆಟೋಗೆ ಗ್ಯಾಸ್ ತುಂಬಿಸಿದಾಗ 15 ರೂಪಾಯಿ ಕಡಿಮೆ ಇತ್ತು. ಎರಡು ಗಂಟೆ ನಂತರ ಏರಿಕೆ ಆಗಿದೆ ಇದರಲ್ಲಿ ಬಂಕ್ ನವರು ಮನಬಂದಂತೆ ಗ್ಯಾಸ್ ಗೆ ಹಣ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದಾಗ ಅಧಿಕೃತವಾಗಿ ಕಂಪನಿಯಿಂದ ಗ್ಯಾಸ್ ಬೆಲೆ ಹೆಚ್ಚಾಗಿರುವುದು ಕಂಡುಬಂತು. ನಂತರ ಆಟೋ ಚಾಲಕರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಟೋ ಚಾಲಕರು 100ರು. ಕೊಟ್ಟು ನಾವು ಗ್ಯಾಸ್ ಖರೀದಿ ಮಾಡಿ ಬರುವ ಆದಾಯದಿಂದ ಬೆಲೆ ತೂಗಿಸಲು ಆಟೋ ದರವನ್ನು ಏರಿಸಬೇಕಾಗುತ್ತದೆ ಅದಕ್ಕೆ ನಾವು ಜವಾಬ್ದಾರರಲ್ಲ ನಾಳೆಯಿಂದ ಗ್ಯಾಸ್ ದರ ಏರಿದ ಹಿನ್ನೆಲೆಯಲ್ಲಿ ಆಟೋ ದರ ಕೂಡ ಹೆಚ್ಚಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಗಣತಿ 2027ಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜೆ