ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಮಳವಳ್ಳಿ ರಸ್ತೆಯ ಎಂ.ಎಂ.ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆಯಿಂದ ನಡೆದ ಪ್ರಾಂತೀಯ ಸಮ್ಮೇಳನದಲ್ಲಿ ಅವರು ಆಹಾರ ಪರಿಕ್ರಮದಲ್ಲಿ ಆರೋಗ್ಯ ಕುರಿತು ಉಪನ್ಯಾಸ ನೀಡಿ, ಕ್ಯಾನ್ಸರ್ ರೋಗವು ಹಲವು ವಿಧಗಳಿಂದ ವ್ಯಾಪಿಸುತ್ತಿದೆ. ಶಿಸ್ತು ಬದ್ಧ ಜೀವನದಿಂದ ಮಾತ್ರ ವ್ಯಾಧಿಯಿಂದ ಹೊರಬರಲು ಸಾಧ್ಯ ಎಂದರು. ಧೂಮಪಾನ, ಮದ್ಯಪಾನ, ತಂಬಾಕು ಸೇವನೆ, ಬೊಜ್ಜು ಬೊಜ್ಜುರಹಿತ ಆಹಾರ ಸೇವನೆ ಇಂದ ದೂರವಿದ್ದು ಇಷ್ಟು ಬದ್ದ ಜೀವನ ಕ್ಯಾನ್ಸರ್ ವ್ಯಾಧಿ ಈಗ ಮಹಿಳೆಯರಲ್ಲೂ ಹೆಚ್ಚಾಗಿ ಕಂಡು ಬರುತ್ತಿದೆ. ಆರಂಭದಿಂದಲೇ ತಜ್ಞ ವೈದ್ಯರಿಂದ ಚಿಕಿತ್ಸೆ, ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದರಿಂದ ವ್ಯಾದಿಯನ್ನು ಮೆಟ್ಟಿಸಬಹುದು. ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಗ್ಯಾಸ್ಟಿಕ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ವಂತರಾಗ ಆಗಬೇಕಾದರೆ ಕಬ್ಬಿನಾಂಶದ ಆಹಾರ ಮತ್ತು ಹೆಚ್ಚು ನೀರು ಸೇವನೆ ಮಾಡಬೇಕು. ಇದರಿಂದ ಗ್ಯಾಸ್ಟಿಕ್ ಸಮಸ್ಯೆಯನ್ನು ದೂರವಿಡಲು ಸಾಧ್ಯ ಎಂದರು.
ಗ್ಯಾಸ್ಟಿಕ್ ಕೇವಲ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರನ್ನು ಕಾಡುತ್ತಿದೆ. ಇದಕ್ಕೆ ಅತಿಯಾದ ಒತ್ತಡ, ಕಡಿಮೆ ಊಟ, ಹೆಚ್ಚು ಮಸಾಲೆ ಪದಾರ್ಥಗಳ ಸೇವನೆ ಜೊತೆಗೆ ಆಲ್ಕೋಹಾಲ್ ಮತ್ತು ಧೂಮಪಾನ, ಬೆಳಗಿನ ವೇಳೆ ಆಹಾರ ಸೇವನೆಗೆ ಆದ್ಯತೆ ನೀಡದಿರುವುದೇ ರೋಗ ಉಲ್ಬಣಗೊಳ್ಳಲು ಕಾರಣ ಎಂದರು.ಸಮ್ಮೇಳನದಲ್ಲಿ ಸಂಸ್ಥೆ ಪ್ರಾಂತೀಯ ಅಧ್ಯಕ್ಷ ಟಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜು ವಿ.ಬೈರಿ, ಉಪಾಧ್ಯಕ್ಷ ಕೆ.ಟಿ.ಹನುಮಂತು, ಜಿಲ್ಲಾ ರಾಜಪಾಲ ಎಚ್.ಮಾದೇಗೌಡ, 1ನೇ ಉಪರಾಜ್ಯಪಾಲ ಕೆ.ಆರ್.ಶಶಿಧರ ಈಚೆಗೆರೆ, 2ನೇ ಉಪರಾಜ್ಯಪಾಲ ಕೆ.ಎಸ್.ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ವಿ.ಎಸ್.ನಾಗರಾಜು, ಖಜಾಂಚಿ ಆರ್.ಮಹೇಶ್, ಪಿಆರ್‌ಒ ರತ್ನಮ್ಮ, ಜಿಲ್ಲಾ ರಾಯಭಾರಿ ಅಪ್ಪಾಜಿ, ವಲಯಾಧ್ಯಕ್ಷ ಅಧ್ಯಕ್ಷ ರಾಧ ಸುರೇಶ್, ಶಿವಕುಮಾರ್, ಅನಿಲ್ ಬಾಬು, ಅತಿದೇಯ ಸಮಿತಿ ಅಧ್ಯಕ್ಷ ಎಂ.ಮಹೇಶ್, ಹಾಗೂ ಅಲೆಯನ್ಸ್ ಸಂಸ್ಥೆ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.