ಅಂಕೋಲಾ: ಸ್ವಾರ್ಥವಿಲ್ಲದ ಸೇವೆ ಇಂದಿನ ಸಮಾಜದ ಅಗತ್ಯತೆಯಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಸಮಾಜ ಸೇವಾ ಮನೋಭಾವ ಜಾಗೃತಗೊಳಿಸಿದರೆ ಅವರಿಂದ ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯ ಕೊಡುಗೆ ನಿರೀಕ್ಷಿಸಬಹುದು ಶಾಸಕ ಸತೀಶ ಸೈಲ್ ತಿಳಿಸಿದರು.ಪಟ್ಟಣದ ನಾಡವರ ಸಭಾಭವನದಲ್ಲಿ ಕರ್ನಾಟಕ ಸಂಘ ಮತ್ತು ದೀನಬಂಧು ಸ.ಪ. ಗಾಂವಕರ್ ದತ್ತಿನಿಧಿ ಸಮಿತಿಯಿಂದ ಆಯೋಜಿಸಿದ್ದ ಸ.ಪ. ಗಾಂವಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಕಾರವಾರದ ನರೇಂದ್ರ ದೇಸಾಯಿ ಅವರಿಗೆ ದೀನಬಂಧು ಸ.ಪ. ಗಾಂವಕರ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಪ್ರಶಸ್ತಿ ಪುರಸ್ಕೃತ ನರೇಂದ್ರ ದೇಸಾಯಿ ಮಾತನಾಡಿ, ಬಾಲ್ಯದಲ್ಲಿ ಬಡತನದ ಜೀವನದಲ್ಲಿ ಎದುರಿಸಿದ ಕಷ್ಟ, ನೋವು ಅವುಗಳ ನಡುವೆಯೂ ಸಮಾಜ ಸೇವೆಗೆ ತಾಯಿಯಿಂದ ದೊರಕಿದ ಪ್ರೇರಣೆ ಸಮಾಜದಲ್ಲಿ ನೊಂದವರ ಜತೆ ನಿಲ್ಲುವಂತೆ ಮಾಡಿದ್ದು, ಕರ್ನಾಟಕ ಸಂಘದ ದೀನಬಂಧು ಸ.ಪ. ಗಾಂವಕರ್ ದತ್ತಿನಿಧಿ ಪ್ರಶಸ್ತಿ ದೊರಕಿರುವುದು ಹೆಮ್ಮೆ ತಂದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದೀನಬಂಧು ಸ.ಪ. ಗಾಂವಕರ್ ದತ್ತಿನಿಧಿ ಅಧ್ಯಕ್ಷ ಕೆ.ವಿ. ನಾಯಕ ಮಾತನಾಡಿ, ಸುಮಾರು ಏಳು ದಶಕಗಳ ಹಿಂದೆ ಕರ್ನಾಟಕ ಸಂಘವನ್ನು ಸ್ಥಾಪಿಸಿ ಸಾಹಿತ್ಯಿಕ ಮತ್ತು ಜನಪರ ಹೋರಾಟದ ಚಟುವಟಿಕೆಗಳನ್ನು ನಡೆಸಿದ್ದ ಸ.ಪ. ಗಾಂವಕರ್ ಅವರ ಹೆಸರು ಜನಮಾನಸದಲ್ಲಿ ಸದಾ ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ದತ್ತಿನಿಧಿ ಪ್ರಶಸ್ತಿ ನೀಡಲಾಗುತ್ತಿದ್ದು, ಯೋಗ್ಯ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿರುವ ಸಮಾಧಾನವಿದೆ ಎಂದರು. ಪ್ರಶಸ್ತಿ ಪುರಸ್ಕೃತ ನರೇಂದ್ರ ದೇಸಾಯಿ ಅವರ ಪತ್ನಿ ನೇಹಾ ದೇಸಾಯಿ ಉಪಸ್ಥಿತರಿದ್ದರು. ದೀನಬಂಧು ಸ.ಪ. ಗಾಂವಕರ್ ದತ್ತಿನಿಧಿ ಸಮಿತಿ ಸದಸ್ಯ ವಿಠ್ಠಲದಾಸ ಕಾಮತ್ ಸ್ವಾಗತಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಮಹಾಂತೇಶ ರೇವಡಿ ಮಾತನಾಡಿದರು. ಸಮಿತಿ ಸದಸ್ಯ ಮಹೇಶ ನಾಯಕ ಪರಿಚಯಿಸಿದರು. ಕರ್ನಾಟಕ ಸಂಘದ ಉಪಾಧ್ಯಕ್ಷ ವಿನಾಯಕ ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ರಾಜೇಶ ನಾಯಕ ಮತ್ತು ಸುಭಾಷ ಕಾರೇಬೈಲ್ ಕಾರ್ಯಕ್ರಮ ನಿರ್ವಹಿಸಿದರು. ಗೋವಿಂದ ನಾಯಕ ವಂದಿಸಿದರು.ಯಲ್ಲಾಪುರಕ್ಕೆ ಆಗಮಿಸಿದ ಪಾದಯಾತ್ರೆ
ಉಸ್ತುವಾರಿ ವಹಿಸಿಕೊಂಡ ಡಿ.ಎನ್. ಗಾಂವ್ಕರ್, ಎನ್.ಎನ್. ಹೆಬ್ಬಾರ್, ವಿ.ಜಿ. ಭಾಗ್ವತ್, ಎಂ.ಕೆ. ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರಮುಖರಾದ ಆರ್.ಎನ್. ಹೆಗಡೆ ಗೋರ್ಸಗದ್ದೆ, ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ, ಗ್ರಾಪಂ ಸದಸ್ಯ ಗಣೇಶ್ ರೋಖಡೆ ಮಾತನಾಡಿದರು.