ಗಂಗಾವತಿ: ಕೆ.ವೈ. ಕಂದಕೂರ್ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿಗೆ ಗಂಗಾವತಿಯ ಇಸ್ಲಾಂಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಶರಣಪ್ಪ ಹಕ್ಕಂಡಿ (ಅಳವಂಡಿ) ಅವರ ಮಿಣುಕು ದೀಪಗಳು ಕೃತಿ ಆಯ್ಕೆಯಾಗಿದೆ.
ಜಯಶ್ರೀ ಹಕ್ಕಂಡಿ ಅವರು ಕನ್ನಡ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಕೆ-ಸೆಟ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಪ್ರೌಢಶಾಲಾ ಶಿಕ್ಷಕಿ (ಕನ್ನಡ ಪಂಡಿತರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಥೆ, ಕವನ, ಚುಟುಕು ಲೇಖನಗಳನ್ನು ಬರೆಯುವುದು. ಸ್ಫೂರ್ತಿದಾಯಕ ಭಾಷಣಗಳನ್ನು ಕೇಳುವುದು. ಉಪನ್ಯಾಸ ನೀಡುವುದು, ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮಗಳನ್ನು ಮತ್ತು ವಿವಿಧ ಕಾರ್ಯಕ್ರಮಗಳನ್ನು ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ವಲಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ಇಲಾಖೆ ಕೊಡಮಾಡುವ ಉತ್ತಮ ಶಿಕ್ಷಕ ಪ್ರಶಸ್ತಿ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಅಕ್ಷರನಾದ ಬಸವ ಶ್ರೀ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಪಡೆದಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ಇವರ ಅವಿರತ ಶ್ರಮ ಇದ್ದು, ಇವರು ಬರೆದ ಉಲಿದಷ್ಟೇ ದನಿ (ಕವನ ಸಂಕಲನ,) ಮಿಣುಕು ದೀಪಗಳು (ಚುಟುಕು ಸಂಕಲನ) ಹೆಸರು ಗಳಿಸಿವೆ. “ಉಲಿದಷ್ಟೇ ದನಿ” ಕವನ ಸಂಕಲನಕ್ಕೆ ಕೊಪ್ಪಳ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಮರಿಗೌಡ ಮಲ್ಲನಗೌಡರ ಹೆಸರಿನಲ್ಲಿ ಡಾ. ಮಹಾಂತೇಶ ಮಲ್ಲನಗೌಡರ ನೀಡುವ ಜಿಲ್ಲಾ ದತ್ತಿ ಪ್ರಶಸ್ತಿ ಲಭಿಸಿದೆ. ಮಿಣುಕು ದೀಪಗಳು ಕೃತಿಗೆ ಕೆ.ವೈ. ಕಂದಕೂರ್ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿ ಲಭಿಸಿದೆ.
ಕಾರಟಗಿ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ, ಕಾರ್ಯದರ್ಶಿಯಾಗಿ, ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗಂಗಾವತಿ ತಾಲೂಕು ಘಟಕದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.