ಅಜ್ಮಾನ್, ಯುಎಇ- ಗಲ್ಫ್ ಮೆಡಿಕಲ್ ವಿವಿ (ಜಿಎಂಯು) ಯಶಸ್ಸಿನ ಸಂಭ್ರಮಾಚರಣೆ ಇತ್ತೀಚೆಗೆ ನಡೆದಿದ್ದು, 14 ಸಂಶೋಧನಾ ಯೋಜನೆಗಳಿಗೆ ಅನುದಾನ ಪ್ರದಾನ ಮಾಡಲಾಯಿತು.
ಮಂಗಳೂರು: ಅಜ್ಮಾನ್, ಯುಎಇ- ಗಲ್ಫ್ ಮೆಡಿಕಲ್ ವಿವಿ (ಜಿಎಂಯು) ಯಶಸ್ಸಿನ ಸಂಭ್ರಮಾಚರಣೆ ಇತ್ತೀಚೆಗೆ ನಡೆದಿದ್ದು, 14 ಸಂಶೋಧನಾ ಯೋಜನೆಗಳಿಗೆ ಅನುದಾನ ಪ್ರದಾನ ಮಾಡಲಾಯಿತು.
ಅನುದಾನ ಪಡೆಯಲು ೩೪ ವಿಶ್ವವಿದ್ಯಾಲಯಗಳಿಂದ ೧೯೨ ಅರ್ಜಿಗಳು ಬಂದಿದ್ದವು. ಈ ಪೈಕಿ ಅಜ್ಮಾನ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ೧೪ ಸಂಶೋಧನಾ ಯೋಜನೆಗಳಿಗೆ ಅನುದಾನ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು.ಅಜ್ಮಾನ್‌ನ ಕ್ರೌನ್ ಪ್ರಿನ್ಸ್ ಹೈನೆಸ್ ಶೇಖ್ ಅಮ್ಮರ್ ಬಿನ್ ಹ್ಯೂಮೈದ್ ಅಲ್ ನುಮಿ ಮುಖ್ಯ ಅತಿಥಿಯಾಗಿದ್ದರು. ಆಡಳಿತ ನ್ಯಾಯಾಲಯದ ಅಧ್ಯಕ್ಷ ಡಾ. ಶೇಖ್ ಮಜೀದ್ ಬಿನ್ ಸಯೀದ್ ಅಲ್ ನೌಮಿ ಅವರು ವಿಜೇತರಿಗೆ ಸಂಶೋಧನಾ ಅನುದಾನ ನೀಡಿದರು.ಎಇಡಿ ೩ ಮಿಲಿಯನ್‌ನ ಆರಂಭಿಕ ಧನಸಹಾಯವನ್ನು ಪ್ರಮುಖ ಕ್ಷೇತ್ರಗಳಾದ ಔಷಧ ಅನ್ವೇಷಣೆ, ಕ್ಯಾನ್ಸರ್ ಇಮ್ಯುನೊಲಾಜಿ, ಮಧುಮೇಹ, ಆರೋಗ್ಯಕರ ವಯಸ್ಸು ಮತ್ತು ಪುನರುತ್ಪಾದಕ ಔಷಧ, ಎಐ, ಇನ್ಫಾರ್ಮ್ಯಾಟಿಕ್ಸ್ ಮತ್ತು ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್, ಆರೋಗ್ಯ ನಿರ್ವಹಣೆ, ಆರೋಗ್ಯ ಅರ್ಥಶಾಸ್ತ್ರದಲ್ಲಿ ಪರಿವರ್ತನೆ ಮತ್ತು ಆರೋಗ್ಯ ವೃತ್ತಿಗಳ ಶಿಕ್ಷಣದಲ್ಲಿ ನಾವೀನ್ಯತೆ ಮುಂತಾದ ಯೋಜನೆಗಳನ್ನು ಬೆಂಬಲಿಸಲು ಈ ಅನುದಾನ ಮೀಸಲಿಡಲಾಗಿದೆ. ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸಂಸ್ಥಾಪಕ ಮತ್ತು ತುಂಬೆ ಗ್ರೂಪ್ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಮಾತನಾಡಿ, ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಸಂಶೋಧನೆಯ ಕೇಂದ್ರವಾಗಿ ಪರಿವರ್ತಿಸಲು ಈ ಅನುದಾನವನ್ನು ಪ್ರಾರಂಭಿಸಿದ್ದೇವೆ. ಮೂರು ವರ್ಷಗಳ ನಂತರ ಒಟ್ಟು ಸಂಶೋಧನಾ ಅನುದಾನವು ಎಇಡಿ ೧೦ ಮಿಲಿಯನ್‌ವರೆಗೆ ತಲುಪಲಿದೆ ಎಂದು ಅವರು ಘೋಷಿಸಿದರು.
ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಕುಲಪತಿ ಮಂಡಾ ವೆಂಕಟ್ರಮಣ ಮಾತನಾಡಿ, ಅನುದಾನವು ಸ್ಫೂರ್ತಿದಾಯಕ ಆರಂಭವನ್ನು ಮಾಡಿದೆ. ಆರೋಗ್ಯ ರಕ್ಷಣೆಯನ್ನು ಪರಿವರ್ತಿಸುವ ಸಂಶೋಧನೆಯನ್ನು ಬೆಂಬಲಿಸಲು ನಾವು ಹೆಮ್ಮೆ ಪಡುತ್ತೇವೆ ಎಂದರು.
ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸಂಶೋಧನಾ ಉಪಕುಲಪತಿ ಪ್ರೊ.ಸಲೀಮ್ ಚೌಬ್ ಮಾತನಾಡಿದರು.
........ಅನುದಾನ ಪಡೆದ ವಿಶ್ವವಿದ್ಯಾನಿಲಯಗಳು
ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಬೋಸ್ಟನ್, ಯುನಿವರ್ಸಿಟಿ ಆಫ್ ಅರಿಜೋನ, ಯುನಿವರ್ಸಿಟಿ ಆಫ್ ವಾಟರ್ಲೂ ಕೆನಡ, ರಿಜೆನ್ಸ್‌ಬರ್ಗ್ ವಿವಿ ಜರ್ಮನಿ, ಪಾಲಿಕ್ಲಿನಿಕೊ ಒಸ್ಪೆಡಾಲಿ ರಿಯುನಿಟಿ ಇಟೆಲಿ, ಎರಾಸ್ಸುಮ್ಸ್ ವಿವಿ ರೊಟ್ಟೆರ್‌ಡಾಮ್ ನೆದರ್ಲ್ಯಾಂಡ್, ಲೆಬಾನ್ಸ್ ಯುನಿವರ್ಸಿಟಿ ಲೆಬನಾನ್, ಬಿರುಟ್ ಅರಬ್ ಯುನಿವರ್ಸಿಟಿ ಲೆಬೆನಾನ್, ಅಲೆಗ್ಸಾಂಡರಿಯಾ ಯುನಿವರ್ಸಿಟಿ ಈಜಿಪ್ಟ್, ರ‍್ಯಾಕ್ ಮೆಡಿಕಲ್ ಆ್ಯಂಡ್ ಹೆಲ್ತ್ ಸೈನ್ಸ್ ಯುನಿವರ್ಸಿಟಿ ಯುಎಇ, ಮೊಹಮ್ಮದ್ ಬಿನ್ ರಶೀದ್ ಯುನಿವರ್ಸಿಟಿ ಆಫ್ ಮೆಡಿಕಲ್ ಆ್ಯಂಡ್ ಹೆಲ್ತ್ ಸೈನ್ಸಸ್ ಯುಎಇ, ಅಜ್ಮಾನ್ ಯುನಿವರ್ಸಿಟಿ ಯುಎಇ, ಯುನಿವರ್ಸಿಟಿ ಆಫ್ ಶಾರ್ಜಾ, ಎಐ ಐನ್ ಯುನಿವರ್ಸಿಟಿ ಯುಎಇ ಅನುದಾನ ಪಡೆದಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.