-ಹಲಸಹಳ್ಳಿಯಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅಭಿಮತ ಹೊಸಕೋಟೆ: ಶಿಕ್ಷಕರಿಗೆ ಪ್ರಶಸ್ತಿಗಳು ಲಭಿಸಿದಂತೆಲ್ಲ ಅವರ ಜವಾಬ್ದಾರಿಗಳು ಹೆಚ್ಚಾಗುತ್ತವೆ ಎಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಹಲಸಹಳ್ಳಿಯಲ್ಲಿ ಮುಗಬಾಳ ಕ್ಲಸ್ಟರ್ನಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ, ನಿವೃತ್ತ ಶಿಕ್ಷಕರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮುಗಬಾಳ ಕ್ಲಸ್ಟರ್ ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಲಕ್ಷ್ಮೀ ದೇವಿ ವೆಂಕಟರಮಣಪ್ಪ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ವಿವಿಧ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕಿ ಮೈನಾರವರಿಗೆ ಬೀಳ್ಕೊಡುಗೆ ಹಾಗೂ ನಿವೃತ್ತ ಸಿಆರ್‌ಪಿ ಸುಗುಣಾಮಣಿ ಅವರಿಗೆ ಮುಗಬಾಳ ಕ್ಲಸ್ಟರ್, ಅಭಿನಂದನೆ ಸಲ್ಲಿಸಿದ್ದು ಪ್ರಶಸ್ತಿ ಪಡೆದವರು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲಿ ಹಾಗೂ ನಿವೃತ್ತರ ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು ಹೇಳಿದರು. ಶಿಕ್ಷಣ ಸಂಯೋಜಕ ರವಿಕುಮಾರ್ ಮಾತನಾಡಿ, ಪ್ರಶಸ್ತಿ ಪಡೆದವರು ಮಾತ್ರ ಅತ್ಯುತ್ತಮ ಶಿಕ್ಷಕರಲ್ಲ ಎಲ್ಲರೂ ವಿದ್ಯಾರ್ಥಿಗಳ, ಪೋಷಕರ ಗ್ರಾಮಸ್ಥರ ನೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮನದಾಳದಲ್ಲಿ ಉಳಿಯುವ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ಪ್ರಾರ್ಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಲ್ಲಾಭಕಾಶ್, ಗೌರವಾಧ್ಯಕ್ಷ ಸುಬ್ಬರಾಯಪ್ಪ, ಕಾರ್ಯದರ್ಶಿ ಅಣ್ಣಯ್ಯಪ್ಪ, ಶಿಕ್ಷಣ ಸಂಯೋಜಕ ರವಿಕುಮಾರ್, ಸಿಆರ್‌ಪಿ ಮಂಜುನಾಥ್, ಮುಖ್ಯಶಿಕ್ಷಕ ರಮೇಶ್, ಪ್ರಕಾಶ್ ಸಹಶಿಕ್ಷಕಿ ಉಷಾ, ನಿವೃತ್ತ ಮುಖ್ಯ ಶಿಕ್ಷಕ ಮುನೇಗೌಡ, ನಿವೃತ್ತ ಸಿಆರ್‌ಪಿ ಸುಗುಣಾ ಮಣಿ, ಉದಯಚಂದ್ರ, ಪ್ರೇಮಕುಮಾರಿ ಇತರರಿದ್ದರು. ಪೋಟೋ : 7 ಹೆಚ್‌ಎಸ್‌ಕೆ 3 ಹೊಸಕೋಟೆ ತಾಲೂಕಿನ ಹಲಸಹಳ್ಳಿ ಗ್ರಾಮದಲ್ಲಿ ಮುಗಬಾಳ ಕ್ಲಸ್ಟರ್ ವ್ಯಾಪ್ತಿಯ ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರನ್ನು ಶಿಕ್ಷಕರ ಸಂಘದ ವತಿಯಿಂದ ಅಭಿನಂದಿಸಲಾಯಿತು.