11ಕ್ಕೆ ಕೇಂದ್ರೀಯ ವಿವಿ ಮುತ್ತಿಗೆ, ಓಬಿಸಿ ಒಕ್ಕೂಟ ಬೆಂಬಲ

KannadaprabhaNewsNetwork |  
Published : Oct 08, 2023, 12:03 AM IST

ಸಾರಾಂಶ

11ಕ್ಕೆ ಕೇಂದ್ರೀಯ ವಿವಿ ಮುತ್ತಿಗೆ, ಓಬಿಸಿ ಒಕ್ಕೂಟ ಬೆಂಬಲ

- ಆಳಂದದ ಕಡಗಂಚಿಯಿಂದ ವಿವಿಗೆ ಪ್ರತಿಭಟನಾ ಮೆರವಣಿಗೆ: ಕೌಲಗಿ ಕಲಬುರಗಿ: ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮನುವಾದ ಹುಟ್ಟುಹಾಕಿ ಕೋಮುವಾದ ಬಿತ್ತುತ್ತಿದ್ದು, ಅದನ್ನು ಅಳಿಸಿ ಹಾಕಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಉಳಿಸಿ ಸಮಿತಿಯ ಸಂಚಾಲಕ ಡಾ. ಡಿ.ಜಿ. ಸಾಗರ್ ನೇತೃತ್ವದಲ್ಲಿ ಅ.11ರಂದು ಬೆಳಗ್ಗೆ 11.30ಕ್ಕೆ ಆಳಂದ ತಾಲೂಕಿನ ಕಡಗಂಚಿಯಿಂದ ವಿಶ್ವವಿದ್ಯಾಲಯಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಹಾಂತೇಶ್ ಎಸ್. ಕೌಲಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತ್ವ ಭಾರತದ ಕೇಂದ್ರೀಯ ವಿವಿಯಲ್ಲಿರುವ ಪ್ರೊ. ಬಟ್ಟು ಸತ್ಯನಾರಾಯಣ್ ಡಾ. ಅಂಬೇಡ್ಕರ್ ಪ್ರಣೀತ ಸಂವಿಧಾನದ ಮೇಲೆ ನಡೆಯಬೇಕೇ ಹೊರತು ಕೋಮುವಾದಿ ಅಜೆಂಡಾ ಮೇಲಲ್ಲ. ವಿಶ್ವವಿದ್ಯಾಲಯಕ್ಕೆ ಅವರು ಕುಲಪತಿಗಳಾಗಿ ಬಂದ ಮೇಲೆ ಇಡೀ ವಿಶ್ವವಿದ್ಯಾಲಯ ಶೈಕ್ಷಣಿಕ ವಾತಾವರಣವು ಕೋಮುವಾದೀಕರಣಕ್ಕೆ ಒಳಗಾಗಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿಸುವ ಮತ್ತು ಹಿಂದುತ್ವ ಚಟುವಟಿಕೆಗಳಿಗೆ ಸಹಕಾರ ನೀಡುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಧ್ಯಾಪಕರು ಮಾನ್ಯತೆ ಕೊಡುತ್ತಿದ್ದಾರೆ. ಅಲ್ಲದವರಿಗೆ ತೊಂದರೆ, ಕಿರುಕುಳ ಕಟ್ಟಿಟ್ಟ ಬುತ್ತಿ. ವೈಜ್ಞಾನಿಕ, ವೈಚಾರಿಕ ಆಲೋಚನೆ ಮಾಡುವ ವಿದ್ಯಾರ್ಥಿ, ಪ್ರಾಧ್ಯಾಪಕರಿಗೆ ಭಯ ಹುಟ್ಟಿಸಲಾಗುತ್ತಿದೆ. ಬಹುತ್ವ ಭಾರತದ ಮೌಲ್ಯಾಧಾರಿತ ವಿಚಾರಧಾರೆ ವಿದ್ಯೆಯನ್ನು ಕಲಿಯಬೇಕಾದ ಯುವ ಜನಾಂಗ ಭಯದಲ್ಲಿ ಬದುಕುವಂತಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ಅವರು ಕಳವಳ ವ್ಯಕ್ತಪಡಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ