ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿಯ ಮಲ್ಲಿಕಾರ್ಜುನ, ಬನಶಂಕರಿ, ಮಹಾದೇವರ ದೇವಸ್ಥಾನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರದ ಪಾಣಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜ.22ರವರೆಗೆ ದೇವಸ್ಥಾನ ಹಾಗೂ ಯಾತ್ರಾ ಸ್ಥಳಗಳ ಸ್ವಚ್ಛತೆಗೆ ಕರೆ ನೀಡಿದ್ದು, ಇಂದು ರಬಕವಿಯ ದೇವಸ್ಥಾನಗಳ ಸ್ವಚ್ಛತೆ ಕಾರ್ಯಕೈಗೊಳ್ಳಲಾಗಿದೆ. ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಪಾಲನೆಯೊಂದಿಗೆ ಪಾವಿತ್ರ‍್ಯ ರಕ್ಷಣೆ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಶ್ರದ್ಧಾಕೇಂದ್ರಗಳಿಗೆ ಬರುವಾಗ ಮಾನಸಿಕವಾಗಿ ಶುಚಿತ್ವ ಕಾಪಾಡಲು ಸಿದ್ಧರಾಗಬೇಕು. ಎಲ್ಲಾ ಕೇಂದ್ರಗಳಲ್ಲಿ ಶುಚಿತ್ವ ಕಾಪಾಡವ ಬಗ್ಗೆ ಅಲ್ಲಲ್ಲಿ ಫಲಕಗಳನ್ನು ಹಾಕಬೇಕು. ಸಾಕಷ್ಟು ಶೌಚಾಲಯಗಳನ್ನು ನಿರ್ಮಿಸಬೇಕು. ಕಸಕಡ್ಡಿ ಹಾಗೂ ತ್ಯಾಜ್ಯ ಬಿಸಾಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಈರಣ್ಣ ಚಿಂಚಖಂಡಿ, ಮಹಾದೇವ ಕೋಟ್ಯಾಳ, ಸಂಜಯ ತೆಗ್ಗಿ, ಶಿವಾನಂದ ಗಾಯಕವಾಡ, ಶಿವಾನಂದ ಬಾಗಲಕೋಟಮಠ, ಶಿವಾನಂದ ಬುದ್ನಿ, ಶ್ರೀನಿವಾಸ ಹಳ್ಯಾಳ, ಶಂಕರಗುರು ಶೀಲವಂತ, ಮಹಾದೇವ ಪಾಲಬಾಂವಿ, ರವಿ ಕೊರ್ತಿ, ಡಾ.ಸಂಗಮೇಶ ಹತಪಾಕಿ, ಮಹಾದೇವ ಆಲಕನೂರ, ಅರುಣ ಬುದ್ನಿ, ಯಲ್ಲಪ್ಪ ಕಟಗಿ, ರವಿ ದೇಸಾಯಿ, ಸುನೀಲ ಮಮದಾಪೂರ, ಪ್ರವೀಣ ದಭಾಡಿ, ಅಶೋಕ ಹಳ್ಳೂರ, ಬಾಬು ಮಹಾಜನ, ಇನೂಸ್ ಚೌಗಲಾ, ಗಂಗಪ್ಪ ಹುಕ್ಕೇರಿ, ಸವಿತಾ ಹೊಸೂರ, ಬೆನಕಪ್ಪ ಬೇಕ್ಕೆರಿ, ಶ್ರೀಶೈಲ ಮೂಲಿಮನಿ ಸೇರಿದಂತೆ ಅನೇಕರು ಇದ್ದರು.