-ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೆ.ಎಸ್.ಸುರೇಶ್
-----ಕನ್ನಡಪ್ರಭವಾರ್ತೆ ಚಳ್ಳಕೆರೆ
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹಲವಾರು ರೀತಿಯ ಗುಣಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಶಿಕ್ಷಣ ಇಲಾಖೆ ಮೈಲಿಗಲ್ಲು ಸ್ಥಾಪಿಸಿದೆ. ಸರ್ಕಾರ ಇತ್ತೀಚೆಗೆ ಪ್ರಾಚ್ಯಪ್ರಜ್ಞ ಕಾರ್ಯಕ್ರಮದ ಮೂಲಕ ನಮ್ಮ ಪೂರ್ವಜನರು ಈ ನಾಡಿಗೆ ನೀಡಿದ ಕೊಡುಗೆ, ಸಾಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದೆ.ವಿಶೇಷವಾಗಿ ವಿವಿಧ ಸ್ಪರ್ಧಿಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಚ್ಯಪ್ರಜ್ಞ ಕಾರ್ಯಕ್ರಮದ ಮೂಲಕ ನಮ್ಮಲ್ಲಿ ಪೂರ್ವಜರು ನಮಗಾಗಿ ಬಿಟ್ಟ ಅನೇಕ ಸಂಗತಿಗಳ ಬಗ್ಗೆ ಅರಿತುಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.
ಅವರು, ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಬಂಧ, ಭಾಷಣ, ಚಿತ್ರಕಲೆ, ರಸಪ್ರಶ್ನೆ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳ ಮಾಹಿತಿಯನ್ನು ನೀಡಲಾಯಿತು.ಪ್ರಬಂಧ ಸ್ಪರ್ಧೆಯಲ್ಲಿ ಆದರ್ಶ ಶಾಲೆಯ ಶಂಸಿಯಾ ಅಂಜುಮ್ ಪ್ರಥಮ, ಎಚ್‌ಟಿಟಿ ಶಾಲೆಯ ಟಿ.ಅನುಷ ದ್ವಿತೀಯ, ಕರೀಕೆರೆ ಶಾಲೆಯ ಸಿ.ವೈಷ್ಣವಿ ತೃತೀಯ, ಭಾಷಣ ಸ್ಪರ್ಧೆಯಲ್ಲಿ ಆದರ್ಶ ಶಾಲೆಯ ಎಂ.ವಿ.ಬಿಂದುಶ್ರೀ ಪ್ರಥಮ, ಸರ್ಕಾರಿ ಪ್ರಢೌ ಶಾಲೆ ಪಗಡಲ ಬಂಡೆಯ ಎಸ್.ಸಿಂಚನ ದ್ವಿತೀಯ, ಎನ್‌ಎಸ್‌ವಿಕೆ ಕರೀಕೆರೆಯ ಆರ್.ನಂದಿನಿ ತೃತೀಯ, ಚಿತ್ರಕಲೆ ಸ್ಪರ್ಧೆಯಲ್ಲಿ ಎಂಡಿಆರ್‌ಎಸ್ ಶಾಲೆಯ ಆರ್.ನಿಖಿಲ್ ಪ್ರಥಮ, ಎಚ್‌ಟಿಟಿ ಶಾಲೆಯ ಸಿ.ದಾಕ್ಷಾಯಿಣಿ ದ್ವಿತೀಯ, ಆದರ್ಶ ಶಾಲೆಯ ಎಂ.ಸಿ.ಶೋಭಾ ತೃತೀಯ, ರಸಪ್ರಶ್ನೆ ವಿಭಾಗದಲ್ಲಿ ಪ್ರಥಮ ಎಂ.ಕಾವ್ಯಶ್ರೀ, ಎಂ.ಆರ್.ತರುಣ್, ದ್ವಿತೀಯ ಸ್ಥಾನ ಬಿ.ವರುಣ್, ವಿ.ಉದಯಕುಮಾರ್, ತೃತೀಯ ಸ್ಥಾನ ಎನ್.ಯಶಸ್ವಿನಿ ಪಡೆದಿರುತ್ತಾರೆ.
ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಸಂಘ ಅಧ್ಯಕ್ಷ ಶಿವಮೂರ್ತಿ, ತೀರ್ಪುಗಾರರಾಗಿ ಎಸ್.ಪಾವನ, ದಾದಾಪೀರ್, ಸಿಆರ್‌ಪಿ ಶಿವಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಡಿ.ಎಸ್.ಪಾಲಯ್ಯ, ವೆಂಕಟೇಶ್, ರೂಪಶ್ರೀ, ಮಾರುತಿಭಂಡಾರಿ, ಜಗದೀಶ್, ಸವಿತಾ ಮುಂತಾದವರು ಉಪಸ್ಥಿತರಿದ್ದರು.----
ಪೋಟೋ: ಚಳ್ಳಕೆರೆ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ತಾ.ಮಟ್ಟದ ಪ್ರಾಚ್ಯಪ್ರಜ್ಞೆ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಉದ್ಘಾಟಿಸಿದರು.-----
೧೫ಸಿಎಲ್‌ಕೆ೨