ಕನ್ನಡಪ್ರಭ ವಾರ್ತೆ ಕೆಜಿಎಫ್ಸಮಾಜದ ದುರ್ಬಲ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಮಹಿಳೆಯರಿಗೆ, ವಿಕಲಚೇತನರಿಗೆ ಉಚಿತ ಕಾನೂನು ಮತ್ತು ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಕಾನೂನು ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ ಎಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.ನಗರದ ಕೆಂಗಲ್ ಹನುಮಂತಯ್ಯ ಕಾನೂನು ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಕಾನೂನು ಸೇವೆಗಳ ಕಾರ್ಯಯಕ್ರಮ ಉದ್ಘಾಟಿಸಿ ಮಾತನಾಡಿದರು.ಉಚಿತ ಕಾನೂನು ಸೇವೆ
ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆಯಡಿಯಲ್ಲಿ ಲಭಿಸುವ ಉಚಿತ ಕಾನೂನು ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ದೇಶದ್ಯಾಂತ ಕಾನೂನು ಸೇವೆಗಳ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಡವನಾಗಿರಲಿ, ವಿಕಲ ಚೇತನರಾಗಿರಲಿ, ಸಮಾಜದ ದುರ್ಬಲ ವರ್ಗದವನಾಗಿರಲಿ ಎಲ್ಲರಿಗೂ ನ್ಯಾಯ ಪಡೆಯುವ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಲು ಉಚಿತ ಕಾನೂನು ನೆರವು ಮತ್ತು ಉಚಿತ ಸಮಾಲೋಚನೆ ನಡೆಸಿ ಜನರಿಗೆ ನ್ಯಾಯ ಪಡೆಯುವ ಹಕ್ಕಿನ ಬಗ್ಗೆ ಅರಿವು ಮೂಡಿಸುತ್ತಿರುವುದಾಗಿ ಹೇಳಿದರು.ರಾಜೀ ಮೂಲಕ ಪ್ರಕರಣ ಇತ್ಯರ್ಥ
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್ ಕುಮಾರ್.ಎಂ ಮಾತನಾಡಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಮೂರ್ತಿ ಆರ್.ಎಸ್.ಮಿಶ್ರಾ, ಡಿ. ೫ ೧೯೯೫ ರಂದು ಕಾನೂನು ಸೇವೆಗಳ ಪ್ರಾಧಿಕಾರ ೧೯೮೭ ರ ಅಡಿಯಲ್ಲಿ ಜಾರಿಗೆ ತರಲಾಗಿದೆ. ಈ ಪ್ರಾಧಿಕಾರವು ಉಚಿತ ಕಾನೂನು ನೆರವು ಮಾರ್ಗದರ್ಶನ ಒದಗಿಸುವ ಮತ್ತು ಮಧ್ಯಸ್ಥಿಕೆ ಹಾಗೂ ಸೌಹಾರ್ದಯುತ ಇತ್ಯರ್ಥಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡುತ್ತಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್, ಕಾರ್‍ಯದರ್ಶಿ ನಾಗರಾಜ್, ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯಸ್, ಜಿವಿಐಟಿ ಕಾಲೇಜಿನ ಕಾರ್‍ಯದರ್ಶಿ ಕೃಷ್ಣಕುಮಾರ್, ವಕೀಲರಾದ ಕಲೈಸೆಲ್ವೆ, ಪರಮೇಶ್ವರ್, ಉಪ ಪ್ರಾಂಶುಪಾಲ ಪ್ರಸನ್ನಕುಮಾರ್ ಇದ್ದರು.