ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕ ವತಿಯಿಂದ ಹಮ್ಮಿಕೊಂಡಿದ್ದ "ವಿಶ್ವ ಋತು ಚಕ್ರ ಸ್ವಚ್ಛತಾ ದಿನ "ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಋತುಚಕ್ರ ಅದು ನಿಸರ್ಗ ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಅದರ ಬಗ್ಗೆ ಹೆಣ್ಣುಮಕ್ಕಳು ಮೌಢ್ಯತೆ ರೂಢಿಸಿಕೊಳ್ಳದೆ, ಆರೋಗ್ಯ ದೃಷ್ಟಿಯಿಂದ ಜಾಗೃತಿ ಹೊಂದಬೇಕೆಂದರು ಹೇಳಿದರು.ಋತುಚಕ್ರದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸಂಕೋಚ ಪಟ್ಟು ಮುಜುಗರ ಅನುಭವಿಸುತ್ತಾರೆ. ಕೆಲವರು ತೀವ್ರ ಭಯಭೀತಗೊಳ್ಳುತ್ತಾರೆ. ಮೌಢ್ಯತೆಯಿಂದ ಕುಟುಂಬದ ಸದಸ್ಯರು ದೂರವಿಡುತ್ತಾರೆ. ಆದ್ದರಿಂದ ಋತುಚಕ್ರದ ಬಗ್ಗೆ ಅರಿವು ಮೂಡಿಸಿಬೇಕಾದ ಅವಶ್ಯಕತೆಯಿದೆ ಎಂದರು.
ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ಹಲವು ಪ್ರಶ್ನೆ ಕೇಳುವುದರ ಮೂಲಕ ಸಮಸ್ಯೆಗಳಿಗೆ ಪರಿಹರಿ ಕಂಡುಕೊಂಡರು. ಈ ವೇಳೆ ಎನ್‌ಎಸ್‌ಎಸ್ ಅಧಿಕಾರಿ ಡಾ.ಚಂದ್ರಶೇಖರ ಕೊಂಕಲ್, ಮಂಜುನಾಥ, ಅಧ್ಯಾಪಕರಾದ ಡಾ. ಉಮಾದೇವಿ, ಡಾ. ನಾಗಲಾಂಬಿಕಾದೇವಿ ಸೇರಿ ಹಲವರಿದ್ದರು.