ಕನ್ನಡಪ್ರಭ ವಾರ್ತೆ ಶಿರಾ
ಅವರು ನಗರದ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ೫ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಬರಗೂರು ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಿ.ಎನ್. ಪರಮೇಶ್ ಗೌಡ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಂತಿನಿಕೇತನ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಥರ್ವ ಗ್ಲೋಬಲ್ ಸ್ಕೂಲ್ ಸಂಸ್ಥಾಪಕ ದೇವರಾಜು ಮಾತನಾಡಿ ಗುಣಮಟ್ಟದ ಶಿಕ್ಷಣದ ಜೊತೆಗೆ, ಗುರು ಹಿರಿಯರನ್ನು ಗೌರವಿಸುವಂತಹ ಸಂಸ್ಕಾರವನ್ನು ಶಿಕ್ಷಕರು ಕಲಿಸಬೇಕು ಎಂದರು
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪ್ರಿಯಾಂಕಾ, ಬಿ.ಪಿ. ಪಾಂಡುರಂಗಯ್ಯ ನಗರಸಭೆ ಸದಸ್ಯ ಎಸ್.ಎಲ್. ರಂಗನಾಥ್, ತೇಜು ಭಾನುಪ್ರಕಾಶ್, ಡಾ. ಪ್ರಕಾಶ್, ರೇಣುಕಾ ಪಾಂಡುರಂಗಯ್ಯ, ಪಿ. ಪ್ರಜ್ವಲ್, ಮುಂಝಿರಾ, ದಿವ್ಯಾ, ಸಾದಿಯಾ ಸಯ್ಯದ್, ಅಶ್ವಿನಿ, ಮಹಾಲಕ್ಷ್ಮೀ, ಪವಿತ್ರ, ಹಾಜೀರಾ, ಅಝ್ರಾ, ದೀಪಶ್ರೀ, ಲಾವಣ್ಯ ಸೇರಿದಂತೆ ಹಲವರು ಹಾಜರಿದ್ದರು.