ಅಂಗಾಂಗ ದಾನದ ಕುರಿತು ಜಾಗೃತಿ ಅಗತ್ಯ: ಡಾ.ಆರ್‌.ವಿ.ಪ್ರದೀಪ್ ಕೃಷ್ಣ

KannadaprabhaNewsNetwork |  
Published : Aug 24, 2026, 01:30 AM IST
ಪೋಟೋ: 23ಎಸ್‌ಎಂಜಿಕೆಪಿ04ಶಿವಮೊಗ್ಗದ ಸುಶೋಧಾ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಭಾನುವಾರ ನಡೆದ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ವೈದ್ಯರಾದ ಡಾ. ಪಿ.ವಿ.ಪ್ರದೀಪ್ ಕೃಷ್ಣ,  ಡಾ. ಜೆ.ಕೆ.ಪ್ರದೀಪ್ ಕುಮಾರ್,  ರಾಘವೇಂದ್ರ ಕುಲಕರ್ಣಿ ಅಂಗಾಂಗ ದಾನಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಭಾರತದಲ್ಲಿ 2025ರಲ್ಲಿ 20,000ಕ್ಕೂ ಹೆಚ್ಚು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ. ಆದರೆ, ಅಂಗಾಂಗಗಳ ಬೇಡಿಕೆ ಮತ್ತು ಲಭ್ಯತೆಯ ನಡುವೆ ದೊಡ್ಡ ಅಂತರವಿದೆ ಎಂದು ಅಪೋಲೋ ಆಸ್ಪತ್ರೆ ಬೆಂಗಳೂರಿನ ಎಚ್‌ಪಿಬಿ ಸರ್ಜರಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ.ಪಿ.ವಿ.ಪ್ರದೀಪ್ ಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭಾರತದಲ್ಲಿ 2025ರಲ್ಲಿ 20,000ಕ್ಕೂ ಹೆಚ್ಚು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ. ಆದರೆ, ಅಂಗಾಂಗಗಳ ಬೇಡಿಕೆ ಮತ್ತು ಲಭ್ಯತೆಯ ನಡುವೆ ದೊಡ್ಡ ಅಂತರವಿದೆ ಎಂದು ಅಪೋಲೋ ಆಸ್ಪತ್ರೆ ಬೆಂಗಳೂರಿನ ಎಚ್‌ಪಿಬಿ ಸರ್ಜರಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ.ಪಿ.ವಿ.ಪ್ರದೀಪ್ ಕೃಷ್ಣ ಹೇಳಿದರು.

ನಗರದ ಸುಶೋಧ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆಯಲ್ಲಿ ಅಪೋಲೋ ಹಾಸ್ಪಿಟಲ್ಸ್ ಬೆಂಗಳೂರು ಹಾಗೂ ಶಿವಮೊಗ್ಗದ ಸುಶೋಧಾ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅಂಗಾಂಗ ದಾನದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಪ್ರಕಾರ, ಮಾರ್ಚ್ 3, 2026ರ ವೇಳೆಗೆ ಪ್ರಮುಖ ಅಂಗಾಂಗ ಕಸಿಗಾಗಿ ಸುಮಾರು 90,000 ರೋಗಿಗಳು ಕಾಯುವಿಕೆ ಪಟ್ಟಿಯಲ್ಲಿದ್ದರು. ಹೀಗಾಗಿ ಸಮುದಾಯ ಮಟ್ಟದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.

ಅಂಗಾಂಗ ದಾನವು ಮಾನವೀಯತೆಯ ಮಹತ್ವದ ಸೇವೆಯಾಗಿದ್ದು, ರೋಗಿಗಳಿಗೆ ಜೀವನದಲ್ಲಿ ಮತ್ತೊಂದು ಅವಕಾಶ ನೀಡುತ್ತದೆ. ಕಸಿ ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ, ಅಂಗಾಂಗಗಳ ಕೊರತೆ ಇನ್ನೂ ದೊಡ್ಡ ಸವಾಲಾಗಿದೆ. ಜಾಗೃತಿ ಕಾರ್ಯಕ್ರಮಗಳ ಮೂಲಕ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಕುಟುಂಬಗಳಲ್ಲಿ ಅಂಗಾಂಗ ದಾನದ ಕುರಿತು ಚರ್ಚೆ ಹೆಚ್ಚಿಸಬೇಕು ಎಂದರು.

ಸುಶೋಧಾ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಹಾಗೂ ಹೆಪಟಾಲಜಿಸ್ಟ್ ಡಾ. ಡಾ.ಕೆ.ವಿ.ಪ್ರದೀಪ್ ಕುಮಾರ್ ಮಾತನಾಡಿ, ದೇಶದಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ಲಿವರ್ ಕಸಿ ಅನಿವಾರ್ಯವಾಗಿದೆ. ಈ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ ಎಂದು ಹೇಳಿದರು.

ಜನರಲ್ಲಿ ಹಾರ್ಟ್ ಅಟ್ಯಾಕ್, ಶುಗರ್‌ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ, ಲಿವರ್ ಸಮಸ್ಯೆ ಬಗ್ಗೆ ಅವರಲ್ಲಿ ಅರಿವಿನ ಕೊರತೆ ಇದೆ. ಸಾಮಾನ್ಯವಾಗಿ ಲಿವರ್‌ ಶೇ.70 ಹಾನಿಯಾದ ನಂತರ ಅದರ ಪರಿಣಾಮ ತಿಳಿಯುತ್ತದೆ. ಸುಧಾರಣೆ ಆಗಲು ಸಾಧ್ಯವಾಗದೆ ಇದ್ದಾಗ ಕಸಿ ಅನಿವಾರ್ಯ ಎಂದು ತಿಳಿಸಿದರು.

ಹದಿನೈದು ವರ್ಷಗಳ ಹಿಂದೆ ಕೆಲ ಆಸ್ಪತ್ರೆಗಳಲ್ಲಿ ಮಾತ್ರ ಲಿವರ್ ಕಸಿ ಮಾಡಲಾಗುತ್ತಿತ್ತು. ಈಚೆಗೆ ಸ್ಪೆಷಲಿಸ್ಟ್, ಅವಶ್ಯಕತೆ ಎಲ್ಲವೂ ಇದೆ. ಅಂಗಾಂಗ ದಾನದ ಬಗ್ಗೆ ವಿದೇಶಗಳಲ್ಲಿ ಹೆಚ್ಚಿದೆ. ಆದರೆ, ನಮ್ಮ ದೇಶದಲ್ಲಿ ಶೇ.0.3 ಅಷ್ಟು ಮಾತ್ರ ಇದೆ. ಕಾಯಿಲೆ ಬರುವುದಕ್ಕೂ‌ಮೊದಲು ಮುಂಜಾಗ್ರತೆ ಅಗತ್ಯ. ಬಂದರೆ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಂಗಾಂಗ ಕಸಿ ಮೂಲಕ ಚೇತರಿಸಿಕೊಂಡ ಲೋಕೇಶ್ ಮತ್ತು ರಾಜಶೇಖರ್ ಅವರ ಅನುಭವಗಳನ್ನು ಹಂಚಿಕೊಂಡರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ರಾಘವೇಂದ್ರ ಕುಲಕರ್ಣಿ ಅಂಗಾಂಗ ದಾನಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನ ಪಿಯುಸಿ ಮಕ್ಕಳಿಗೂ ಉಚಿತ ನೋಟ್‌ಬುಕ್‌: ಸಚಿವ ಮಧು ಬಂಗಾರಪ್ಪ
ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರತ್ನಕುಮಾರಿಗೆ ಶಾಸಕ ಆರಗ ಜ್ಞಾನೇಂದ್ರ ಅಭಿನಂದನೆ