ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರತ್ನಕುಮಾರಿಗೆ ಶಾಸಕ ಆರಗ ಜ್ಞಾನೇಂದ್ರ ಅಭಿನಂದನೆ

KannadaprabhaNewsNetwork |  
Published : Aug 24, 2026, 01:30 AM IST
ಫೋಟೋ 23 ಟಿಟಿಎಚ್ 01: ಈ ಬಾರಿಯ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿ ರತ್ನಕುಮಾರಿಯವರನ್ನು ಶಾಸಕ ಆರಗ ಜ್ಞಾನೇಂದ್ರ ಶಾಲು ಹೊದಿಸಿ ಗೌರವಿಸಿದರು.  | Kannada Prabha

ಸಾರಾಂಶ

ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಟಗಾರು ಕಡಸೂರು ಶಾಲೆಯ ಶಿಕ್ಷಕಿಯಾಗಿ ಮಾದರಿ ಶಾಲೆಯನ್ನಾಗಿ ರೂಪಿಸಿದ ಶಿಕ್ಷಕಿ ರತ್ನಕುಮಾರಿಯವರು ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ: ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಟಗಾರು ಕಡಸೂರು ಶಾಲೆಯ ಶಿಕ್ಷಕಿಯಾಗಿ ಮಾದರಿ ಶಾಲೆಯನ್ನಾಗಿ ರೂಪಿಸಿದ ಶಿಕ್ಷಕಿ ರತ್ನಕುಮಾರಿಯವರು ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಗುಡ್ಡೆ ಕೇರಿಯ ತಮ್ಮ ನಿವಾಸದಲ್ಲಿ ಭಾನುವಾರ ರತ್ನಕುಮಾರಿಯವರನ್ನು ಗೌರವಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಒಂದು ಶಾಲೆಯನ್ನ ಪರಿಸರ ಸ್ನೇಹಿಯಾಗಿ, ಶಿಕ್ಷಣ ಸ್ನೇಹಿಯಾಗಿ, ಸಾಹಿತ್ಯ ಸ್ನೇಹಿಯಾಗಿ, ಜನ ಸ್ನೇಹಿಯಾಗಿ, ವಿದ್ಯಾರ್ಥಿ ಸ್ನೇಹಿಯಾಗಿ ಹೇಗೆಲ್ಲಾ ರೂಪಿಸಬಹುದು ಎನ್ನುವುದಕ್ಕೆ ಸಂಪಟಗಾರು ಶಾಲೆಯು ಇಡೀ ರಾಜ್ಯದಲ್ಲಿಯೇ ಒಂದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ ಎಂದರು.

ಈ ಸಾಧನೆಯ ಹಿಂದೆ ರತ್ನಕುಮಾರಿಯವರ ಅಪಾರ ಕಾಳಜಿ ಶ್ರದ್ಧೆ ಶ್ರಮ ಇರುವುದನ್ನು ನಾನು ಕಳೆದ ಎಂಟು ವರ್ಷಗಳಿಂದ ಗಮನಿಸುತ್ತಿದ್ದೇನೆ, ರತ್ನಕುಮಾರಿಯವರ ಅಪೇಕ್ಷೆಯಂತೆ ಕಳೆದ ಎಂಟು ವರ್ಷಗಳಲ್ಲಿ ಸದರಿ ಶಾಲೆಗೆ ಮೂರು ನೂತನ ಕೊಠಡಿಗಳನ್ನ ಮಂಜೂರು ಮಾಡಿಸಿ ಕೊಟ್ಟಿರುವುದಲ್ಲದೆ ಬೇರೆ ಬೇರೆ ಅಗತ್ಯತೆಗಳಿಗೆ ಅನುದಾನ ಒದಗಿಸುವ ಕಾರ್ಯವನ್ನು ಮಾಡಿದ್ದೇನೆ, ಆ ಶಾಲೆಯ ಅವರು ಕರೆದಂತ ಎಲ್ಲಾ ಕಾರ್ಯಕ್ರಮಗಳಿಗೆ ತಪ್ಪದೇ ಭಾಗವಹಿಸಿ ಶಾಲೆಯ ಶ್ರೇಯೋಭಿವೃದ್ಧಿಯಲ್ಲಿ ಹಾಗೂ ಗ್ರಾಮಸ್ಥರ ಜೊತೆ ಭಾಗಿಯಾದ ಸಂತೋಷ ನನಗೂ ಕೂಡ ಇದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಕ್ಕೆ ಒಬ್ಬರಾಗಿ ದೇಶದಲ್ಲಿ 48 ಜನ ಉತ್ತಮ ಶಿಕ್ಷಕರಲ್ಲಿ ಒಬ್ಬರಾಗಿ ಅಪರೂಪದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಕ್ಕೆ ಶ್ರೀಮತಿ ರತ್ನ ಕುಮಾರಿಯವರು ಆಯ್ಕೆಯಾಗಿದ್ದು, ಸಂತಸ ತಂದಿದೆ, ರಾಜ್ಯದಿಂದ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯಲ್ಲಿ ತೀರ್ಥಹಳ್ಳಿ ಸೇರಿರುವುದು ಕ್ಷೇತ್ರದ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ ಸೇರಿದಂತಾಗಿದೆ ಎಂದು ಸಂತಸಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನ ಪಿಯುಸಿ ಮಕ್ಕಳಿಗೂ ಉಚಿತ ನೋಟ್‌ಬುಕ್‌: ಸಚಿವ ಮಧು ಬಂಗಾರಪ್ಪ
ಅಂಗಾಂಗ ದಾನದ ಕುರಿತು ಜಾಗೃತಿ ಅಗತ್ಯ: ಡಾ.ಆರ್‌.ವಿ.ಪ್ರದೀಪ್ ಕೃಷ್ಣ