ಬೇಲೂರಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಪರಿಣಾಮ ಕುರಿತು ಜಾಗೃತಿ

KannadaprabhaNewsNetwork |  
Published : Jun 07, 2025, 04:00 AM IST
6ಎಚ್ಎಸ್ಎನ್4 : ಸರ್ಕಾರಿ ಪ್ರೌಢಶಾಲೆ ಹೆಬ್ಬಾಳು ಹಾಗೂ ಗ್ರೀನರಿ ಟ್ರಸ್ಟ್ ಬೇಲೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು  ಹತ್ತಾರು ಹಣ್ಣು ಬಿಡುವ  ಗಿಡಗಳನ್ನು ನೆಡುವುದರ ಮೂಲಕ   ಅರ್ಥಪೂರ್ಣವಾಗಿ  ಆಚರಿಸಲಾಯಿತು. | Kannada Prabha

ಸಾರಾಂಶ

ವಲಯ ಅರಣ್ಯಾಧಿಕಾರಿಗಳಾದ ಶೈಲಾರವರು ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಭಾಗವಹಿಸಿ ಪರಿಸರ ಉಳಿಸುವ ಅರಣ್ಯದ ಮಹತ್ವದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಿದರು. ಗ್ರೀನರಿ ಟ್ರಸ್ಟಿನ ಕಾರ್ಯದರ್ಶಿ ಜ್ಞಾನಚಂದ್ರ ವಿಶ್ವ ಪರಿಸರ ದಿನದ ಆರಂಭಿಕ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಅನಾಹುತಗಳು ಓಝೋನ್ ಪದರದ ಶಿಥಿಲತೆ ಮತ್ತು ಸಸ್ಯ ಕೇವಲ ಸಾಂಕೇತಿಕವಾಗಿ ನಡೆದ ಅದನ್ನು ಪ್ರತಿನಿತ್ಯ ಪೋಷಿಸುವ ಕಾರ್ಯ ಆಗಬೇಕೆಂದು ಜೊತೆಗೆ ಶೂನ್ಯ ಪ್ಲಾಸ್ಟಿಕ್ ಬಳಕೆಯ ಘೋಷಣೆಯನ್ನು ಕೂಡ ಮಾಡಿ ಮನಮುಟ್ಟುವಂತೆ ಕಾರ್ಯಕ್ರಮದಲ್ಲಿ ಸಭಿಕರಿಗೆ ಮಾಹಿತಿ ಹಂಚಿ ಗಿಡಗಳನ್ನು ಕೊಟ್ಟರು.

ಕನ್ನಡಪ್ರಭ ವಾರ್ತೆ ಬೇಲೂರುಸರ್ಕಾರಿ ಪ್ರೌಢಶಾಲೆ ಹೆಬ್ಬಾಳು ಹಾಗೂ ಗ್ರೀನರಿ ಟ್ರಸ್ಟ್ ಬೇಲೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹತ್ತಾರು ಹಣ್ಣು ಬಿಡುವ ಗಿಡಗಳನ್ನು ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಧ್ರುವಕುಮಾರಿ, ಗ್ರೀನರಿ ಟ್ರಸ್ಟಿನ ಅಧ್ಯಕ್ಷರಾದ ಯುವರಾಜ್ ಅವರು ಗಿಡ ನೆಡುವುದರ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಗೌಡ ಮಾತನಾಡಿ, ಒಂದು ಗಿಡವನ್ನು ನೆಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪರಿಸರ ಜ್ಞಾನವನ್ನು ಓಝೋನ್ ಪದರದ ಸವಕಳಿ, ಪ್ಲಾಸ್ಟಿಕ್ ಪರಿಣಾಮ ಮತ್ತು ವಿದ್ಯಾರ್ಥಿಗಳು ಪರಿಸರವನ್ನುಶಾಲೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಂಡು ಕಾಪಾಡುವುದರ ಬಗ್ಗೆ ಮನದಟ್ಟು ಮಾಡಿದರು.ವಲಯ ಅರಣ್ಯಾಧಿಕಾರಿಗಳಾದ ಶೈಲಾರವರು ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಭಾಗವಹಿಸಿ ಪರಿಸರ ಉಳಿಸುವ ಅರಣ್ಯದ ಮಹತ್ವದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಿದರು. ಗ್ರೀನರಿ ಟ್ರಸ್ಟಿನ ಕಾರ್ಯದರ್ಶಿ ಜ್ಞಾನಚಂದ್ರ ವಿಶ್ವ ಪರಿಸರ ದಿನದ ಆರಂಭಿಕ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಅನಾಹುತಗಳು ಓಝೋನ್ ಪದರದ ಶಿಥಿಲತೆ ಮತ್ತು ಸಸ್ಯ ಕೇವಲ ಸಾಂಕೇತಿಕವಾಗಿ ನಡೆದ ಅದನ್ನು ಪ್ರತಿನಿತ್ಯ ಪೋಷಿಸುವ ಕಾರ್ಯ ಆಗಬೇಕೆಂದು ಜೊತೆಗೆ ಶೂನ್ಯ ಪ್ಲಾಸ್ಟಿಕ್ ಬಳಕೆಯ ಘೋಷಣೆಯನ್ನು ಕೂಡ ಮಾಡಿ ಮನಮುಟ್ಟುವಂತೆ ಕಾರ್ಯಕ್ರಮದಲ್ಲಿ ಸಭಿಕರಿಗೆ ಮಾಹಿತಿ ಹಂಚಿ ಗಿಡಗಳನ್ನು ಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಕೆ ಆರ್‌ ಉದಯಕುಮಾರ್‌ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಸುಂದರೇಶ್, ಗ್ರೀನರಿ ಟ್ರಸ್ಟಿನ ಉಪಾಧ್ಯಕ್ಷರಾದ ವೆಂಕಟೇಶ್, ಗ್ರೀನರಿ ಟ್ರಸ್ಟಿನ ವ್ಯವಸ್ಥಾಪಕ ಅಧ್ಯಕ್ಷ ಚಂದ್ರಶೇಖರಯ್ಯ, ಪ್ರದೀಪ್‌, ಪರಮೇಶ್‌, ರಿಜ್ವಾನ್ ಪಾಷ, ಗ್ರೀನರಿ ಟ್ರಸ್ಟ್ ಬೇಲೂರು ಅವರು ಭಾಗವಹಿಸಿ ಹತ್ತಾರು ಗಿಡಗಳನ್ನು ತಂದು ನೆಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಶಾಲೆಯ ವಿದ್ಯಾರ್ಥಿಗಳು ಪರಿಸರ ಗೀತೆಗಳನ್ನು ಹೇಳಿ ಪರಿಸರ ಜಾಗೃತಿ ಮೂಡಿಸಿದರು. ಶಾಲೆಯ ಶಿಕ್ಷಕರಾದ ಶೋಭಾ, ಧನಂಜಯ ಮೂರ್ತಿ, ವಸಂತ, ಶೀಲ, ಕುಸುಮ ಭಾಗವಹಿಸಿದರು. ಜೊತೆಗೆ ಶಿಕ್ಷಕರಾದ ಬಿ ಎಂ ನಾಗರಾಜು ನಿರೂಪಣೆ ನಡೆಸಿದರು. ಶಿಕ್ಷಕರಾದ ಶಂಕರ್ ಗಾಜಿ ಸ್ವಾಗತವನ್ನು ಕೋರಿದರು. ಶಿಕ್ಷಕರಾದ ಧರ್ಮಪ್ಪ ವಂದನಾರ್ಪಣೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ