ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ

KannadaprabhaNewsNetwork |  
Published : May 02, 2026, 01:45 AM IST
1ಎಚ್ಎಸ್ಎನ್12 :  | Kannada Prabha

ಸಾರಾಂಶ

ಎಐಟಿಯುಸಿ ಸಂಘಟನೆಯ ರಾಜ್ಯ ಮುಖಂಡ ಡೊಂಗ್ರೆ ಮಾತನಾಡಿ, ವಿಶ್ವ ಕಾರ್ಮಿಕರ ದಿನಾಚರಣೆಯ ಇತಿಹಾಸವನ್ನು ಸ್ಮರಿಸಿದರು. 1886ರಲ್ಲಿ ಅಮೆರಿಕಾದಲ್ಲಿ ಕಾರ್ಮಿಕರು “ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ, ಎಂಟು ಗಂಟೆ ನಿದ್ರೆ” ಎಂಬ ಬೇಡಿಕೆಯನ್ನು ಮುಂದಿರಿಸಿ ಹೋರಾಟ ನಡೆಸಿದ ಘಟನೆ ವಿಶ್ವ ಕಾರ್ಮಿಕ ಚಳವಳಿಗೆ ದಿಕ್ಕು ತೋರಿದ ಮಹತ್ವದ ಘಟ್ಟವಾಗಿದೆ ಎಂದು ಹೇಳಿದರು. ಆ ಹೋರಾಟದ ವೇಳೆ ಕಾರ್ಮಿಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಹಾಗೂ ಪ್ರಾಣತ್ಯಾಗದ ಹಿನ್ನೆಲೆ, ಇಂದು ಜಗತ್ತಿನಾದ್ಯಂತ ಎಂಟು ಗಂಟೆಗಳ ಕೆಲಸದ ನಿಯಮ ಜಾರಿಗೆ ಬಂದಿರುವುದನ್ನು ಉಲ್ಲೇಖಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಟಿಂಬರ್‌ ಕಾರ್ಮಿಕರ ಸಂಘಟನೆಯ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ (ಮೇ ದಿನ)ಯನ್ನು ಶುಕ್ರವಾರ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ಪಟ್ಟಣದ ವಿವಿಧ ಭಾಗಗಳಿಂದ ಕಾರ್ಮಿಕರು ಮೆರವಣಿಗೆಯಲ್ಲಿ ಭಾಗವಹಿಸಿ, ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದರು. ಮೆರವಣಿಗೆ ಬಳಿಕ ಸಂಘಟನೆಯ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಪುರಸಭಾ ಸಭಾಂಗಣದಲ್ಲಿ ಪ್ರಮುಖ ಕಾರ್ಯಕ್ರಮ ಆಯೋಜಿಸಲಾಯಿತು.ಎಐಟಿಯುಸಿ ಸಂಘಟನೆಯ ರಾಜ್ಯ ಮುಖಂಡ ಡೊಂಗ್ರೆ ಮಾತನಾಡಿ, ವಿಶ್ವ ಕಾರ್ಮಿಕರ ದಿನಾಚರಣೆಯ ಇತಿಹಾಸವನ್ನು ಸ್ಮರಿಸಿದರು. 1886ರಲ್ಲಿ ಅಮೆರಿಕಾದಲ್ಲಿ ಕಾರ್ಮಿಕರು “ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ, ಎಂಟು ಗಂಟೆ ನಿದ್ರೆ” ಎಂಬ ಬೇಡಿಕೆಯನ್ನು ಮುಂದಿರಿಸಿ ಹೋರಾಟ ನಡೆಸಿದ ಘಟನೆ ವಿಶ್ವ ಕಾರ್ಮಿಕ ಚಳವಳಿಗೆ ದಿಕ್ಕು ತೋರಿದ ಮಹತ್ವದ ಘಟ್ಟವಾಗಿದೆ ಎಂದು ಹೇಳಿದರು. ಆ ಹೋರಾಟದ ವೇಳೆ ಕಾರ್ಮಿಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಹಾಗೂ ಪ್ರಾಣತ್ಯಾಗದ ಹಿನ್ನೆಲೆ, ಇಂದು ಜಗತ್ತಿನಾದ್ಯಂತ ಎಂಟು ಗಂಟೆಗಳ ಕೆಲಸದ ನಿಯಮ ಜಾರಿಗೆ ಬಂದಿರುವುದನ್ನು ಉಲ್ಲೇಖಿಸಿದರು.ಮೇ ದಿನವನ್ನು ಕಾರ್ಮಿಕರ ಹಕ್ಕುಗಳ ಸಂರಕ್ಷಣೆಯ ಸಂಕೇತವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದ ಅವರು, ಇಂತಹ ದಿನಗಳು ಕಾರ್ಮಿಕರ ಏಕತೆಯನ್ನು ಬಲಪಡಿಸುವುದರ ಜೊತೆಗೆ ಅವರ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯಲು ಸಹಕಾರಿಯಾಗುತ್ತವೆ ಎಂದರು.ಕಾರ್ಯಕ್ರಮದಲ್ಲಿ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುರುಳಿ ಮೋಹನ್ ಹಾಗೂ ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ ಪಟ್ಟಣದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಮಿಕರಿಗೆ ಶುಭಾಶಯವನ್ನು ಕೋರಿದರು. ಸಂಘಟನೆಯ ವತಿಯಿಂದ ಜನಪ್ರತಿನಿಧಿಗಳಿಗೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮನವಿಪತ್ರವನ್ನೂ ಸಲ್ಲಿಸಲಾಯಿತುಈ ಸಂದರ್ಭದಲ್ಲಿ ಎಐಟಿಯುಸಿ ಸಂಘಟನೆಯ ಜಿಲ್ಲಾ ಮುಖಂಡರಾದ ಧರ್ಮಾರಾಜು, ಹರೀಶ್, ಕರವೇ ಅಧ್ಯಕ್ಷ ರಮೇಶ್ ಪೂಜಾರಿ, ಟಿಂಬರ್‌ ಕಾರ್ಮಿಕರ ಸಂಘದ ಅಧ್ಯಕ್ಷ ಶಹಜಾನ್, ಮುಖಂಡರಾದ ಕೊಲ್ಲಹಳ್ಳಿ ಅಝೀಜ್, ಸೋಮ, ವೆಂಕಟೇಶ್, ಸತೀಶ್, ಅಶ್ರಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಸ್ಕಾಂ ಗ್ರಾಹಕರಿಗೆ 91 ಪೈಸೆ ದರ ಹೆಚ್ಚಳದ ಶಾಕ್‌
ಅನಿಲ ದರ ಏರಿಕೆ ಸಂಘಟಿತ ಲೂಟಿ: ಸಿಎಂ