ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗೆ ಅರಿವು ಅಗತ್ಯ: ಡಾ.ಸುಜಯ್ ಕುಮಾರ್

KannadaprabhaNewsNetwork |  
Published : Jan 06, 2025, 01:01 AM IST
5ಕೆಎಂಎನ್ ಡಿ13 | Kannada Prabha

ಸಾರಾಂಶ

ವಿಶ್ವದ 9,800 ಪಕ್ಷಿ ಪ್ರಭೇದಗಳ ಪೈಕಿ ಶೇ.12ರಷ್ಟು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ವಿಶ್ವದ 330 ಗಿಣಿ ಜಾತಿಯ ಪಕ್ಷಿಗಳು ಸಹ ಮೂರನೇ ಒಂದು ಭಾಗದಷ್ಟಿವೆ. ಅನೇಕ ಅಪರೂಪದ ಪಕ್ಷಿಗಳು ಜನರು ಅಕ್ರಮ ಸಾಗಣೆ, ಮಾರಾಟ, ಕಾಯಿಲೆಯಿಂದಾಗಿ ಅಳಿವಿನ ಅಂಚಿಗೆ ಸಾಗುತ್ತಿವೆ. ಇಂತಹ ಪಕ್ಷಿಗಳ ಉಳಿವಿಗಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಗಾಂಧಿವಾದಿ ಡಾ.ಸುಜಯ್ ಕುಮಾರ್ ಹೇಳಿದರು.ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ ಬಳಿ ರಾಷ್ಟ್ರೀಯ ಪಕ್ಷಿ ದಿನಾಚರಣೆ ಅಂಗವಾಗಿ ಮೈಸೂರಿನ ಶೇಷಾದ್ರಿಪುರಂ ಎಂಜಿನಿಯರಿಂಗ್ ಕಾಲೇಜಿನ ಎಸ್‌ಎಸ್‌ಎಸ್ ಘಟಕ, ರೋಟರಿ ಕ್ಲಬ್ ಶ್ರೀರಂಗಪಟ್ಟಣ ಹಾಗೂ ಅಚೀವರ್ಸ್ ಅಕಾಡೆಮಿಯಿಂದ ನಡೆದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ವಿಶ್ವದ 9,800 ಪಕ್ಷಿ ಪ್ರಭೇದಗಳ ಪೈಕಿ ಶೇ.12ರಷ್ಟು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ವಿಶ್ವದ 330 ಗಿಣಿ ಜಾತಿಯ ಪಕ್ಷಿಗಳು ಸಹ ಮೂರನೇ ಒಂದು ಭಾಗದಷ್ಟಿವೆ. ಅನೇಕ ಅಪರೂಪದ ಪಕ್ಷಿಗಳು ಜನರು ಅಕ್ರಮ ಸಾಗಣೆ, ಮಾರಾಟ, ಕಾಯಿಲೆಯಿಂದಾಗಿ ಅಳಿವಿನ ಅಂಚಿಗೆ ಸಾಗುತ್ತಿವೆ. ಇಂತಹ ಪಕ್ಷಿಗಳ ಉಳಿವಿಗಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಎನ್ಎಸ್ಎಸ್ ಅಧಿಕಾರಿ ಡಾ.ರಾಘವೇಂದ್ರ ಮಾತನಾಡಿ, ರಾಷ್ಟ್ರೀಯ ಪಕ್ಷಿ ದಿನ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಜನರು ತಮ್ಮ ಸುತ್ತಮುತ್ತಲಿನಲ್ಲಿ ಇರುವ ಪಕ್ಷಿಗಳಿಗೆ ಆಹಾರ, ನೀರು ನೀಡುವ ಮೂಲಕ ರಕ್ಷಣೆ ಮಾಡಬೇಕು. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಹ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳನ್ನು ಸಂಶೋಧನೆ ಮಾಡಿ ರಕ್ಷಣೆ ಮಾಡಬೇಕಾಗಿದೆ ಎಂದರು.

ಬಳಿಕ ರಂಗನಾಥ ಸ್ವಾಮಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಕಿರಂಗೂರು, ಬಾಬುರಾಯನ ಕೊಪ್ಪಲು, ಶ್ರೀನಿವಾಸ ಅಗ್ರಹಾರ, ಕರಿಘಟ್ಟ, ಗಂಜಾಂ ಮುಖಾಂತರ ರಂಗನತಿಟ್ಟು ಪಕ್ಷಿಧಾಮದವರಿಗೆ ಪಕ್ಷಿಗಳ ಉಳಿಸುವಂತ ಘೋಷಣೆ ಯೊಂದಿಗೆ ಸಾರ್ವಜನಿಕ ಜಾಗೃತಿ ಮೂಡಿಸಿದರು.

ಹಿರಿಯ ಗಾಂಧಿವಾದಿ ಡಾ.ಸುಜಯ್ ಕುಮಾರ್ ಜೊತೆ ಪಟ್ಟಣದ ಪೊಲೀಸ್ ಉಪ ನಿರೀಕ್ಷಕ ಶಿವಲಿಂಗ ದಳವಾಯಿ, ರೋಟರಿ ಸಂಸ್ಥೆಯ ಕಾವೇರಮ್ಮ, ಸರಸ್ವತಿ, ಗಾಯಿತ್ರಿ ಹಾಗೂ ಎನ್ಎಸ್ಎಸ್ ಅಧಿಕಾರಿ ಡಾ. ರಾಘವೇಂದ್ರ ಹಸಿರು ನಿಶಾನೆ ತೋರಿ ಜಾಥಾಗೆ ಚಾಲನೆ ನೀಡಿದರು.

ಈ ವೇಳೆ ಶೇಷಾದ್ರಿಪುರಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ.ಕಿರಣ್, ಡಾ.ಉದಯ್, ಡಾ.ಪ್ರೇಮ್, ಡಾ.ವಸಂತ್, ಪ್ರಮೋದ್, ನಾಗೇಶ್ ಕದ್ರಿ, ರೋಟರಿ ಸಂಸ್ಥೆ ನಾಗೇಂದ್ರ, ಗಾಯತ್ರಿ, ರೇಖಾ, ಮಾಲತಿ, ಮೈಸೂರು ಆಕಾಶವಾಣಿ ತೇಜಸ್ವಿನಿ, ಅರಣ್ಯ ಅಧಿಕಾರಿ ಪ್ರವೀಣ್, ಅಚೀವರ್ಸ್ ಅಕಾಡೆಮಿ ನಿರ್ದೇಶಕ ದೇವರಾಜು, ಗುರುಪ್ರಸಾದ್, ಸತೀಶ್, ಶ್ರೀಧರ್, ವಿದ್ಯಾರ್ಥಿಗಳಾದ ಶ್ರೀ ಹರಿ, ಹೃದಯ, ಮುರಳಿ, ಹರ್ಷ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯವಾಗಿ ಗೂಗ್ಲಿ ಹಾಕ್ಬೇಕು, ಇಲ್ಲದಿದ್ರೆ ಯಶಸ್ಸು ಸಿಗಲ್ಲ: ಸತೀಶ್‌
ಮರ್ಯಾದಾ ಹತ್ಯೆಯಂಥ ಕೃತ್ಯ ತಡೆಗೆ ವಿಶೇಷ ಕಾನೂನು : ಸಿಎಂ