ಅಪೌಷ್ಟಿಕತೆ ತಡೆಗೆ ಜಾಗೃತಿ ಮುಖ್ಯ: ಎಂ.ಎಚ್. ನದಾಫ

KannadaprabhaNewsNetwork |  
Published : Nov 09, 2025, 03:15 AM IST
7 ರೋಣ 2.  ಸ್ತ್ರೀ ಶಕ್ತಿ ಭವನದಲ್ಲಿ ಕಾನೂನು ಸೇವಾ ಸೇವೆಗಳ ಸಮಿತಿ ,ಸಿಡಿಪಿಒ ಇಲಾಖೆ ವತಿಯಿಂದ ಜರುಗಿದ ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ವಕೀಲ ಎಂ.ಎಚ್.ಮುಲ್ಲಾ ಉದ್ಘಾಟಿಸಿದರು. | Kannada Prabha

ಸಾರಾಂಶ

ರೋಣ ಪಟ್ಟಣದ ಸ್ತ್ರಿಶಕ್ತಿ ಭವನದಲ್ಲಿ ಜರುಗಿದ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ವಕೀಲ ಎಂ.ಎಚ್. ನದಾಫ ಉದ್ಘಾಟಿಸಿದರು.

ರೋಣ: ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸಿಡಿಪಿಒ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಪ್ರಜ್ಞಾವಂತರು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಅತಿ ಮುಖ್ಯವಾಗಿದೆ ಎಂದು ಹಿರಿಯ ವಕೀಲ ಎಂ.ಎಚ್. ನದಾಫ ಹೇಳಿದರು.

ಪಟ್ಟಣದ ಸ್ತ್ರಿಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆ, ರೋಣ ತಾಲೂಕು ಕಾನೂನು ಸೇವೆಗಳ ಸಮಿತಿ‌, ವಕೀಲರ ಸಂಘ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು‌.

ಪೌಷ್ಟಿಕ ಆಹಾರ ಸೇವಿಸುವಂತೆ ತಾಯಂದಿರಲ್ಲಿ ಅರಿವು ಮೂಡಿಸಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಜಾಗೃತಿ ಮೂಡಿಸಬೇಕು. ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ನೀಡಬೇಕು. ಸ್ವಚ್ಛತೆ ಹಾಗೂ ಅಪೌಷ್ಟಿಕತೆ ತಡೆಯಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ. ಹಣ್ಣು, ತರಕಾರಿ, ಹಾಲು, ಮೊಟ್ಟೆ, ಬೇಳೆ ಕಾಳುಗಳು, ಧಾನ್ಯಗಳು ಮತ್ತು ಪ್ರೋಟೀನ್‌ಭರಿತ ಆಹಾರಗಳನ್ನು ನೀಡಬೇಕು. ಮಕ್ಕಳಿಗೆ ವಿವಿಧ ಆಹಾರಗಳನ್ನು ನೀಡುವ ಮೂಲಕ ಅವರು ಎಲ್ಲ ಪೋಷಕಾಂಶಗಳನ್ನು ಪಡೆಯುವಂತೆ ಮಾಡುವುದು ಮುಖ್ಯ. ಈ ದಿಶೆಯಲ್ಲಿ ತಾಯಂದಿರು, ಮನೆ, ಸಮುದಾಯದ ಪಾತ್ರ ಅತಿ ಮುಖ್ಯವಾಗಿದೆ ಎಂದರು.

ಸಿಪಿಪಿಒ ಶಿವಗಂಗಮ್ಮ, ಹಿರಿಯ ವಕೀಲ ವೈ.ಡಿ. ನದಾಫ, ಗುರುಶಿದ್ದಯ್ಯ ಹೆಬ್ಬಳ್ಳಿಮಠ, ಅಂಗನವಾಡಿ ಮೇಲ್ವಿಚಾರಕಿ ಸುವರ್ಣಾ ಹಾನಾಪುರ, ರೇಖಾ ಚಂದ್ರಣ್ಣವರ, ಭಾರತಿ ಮಲ್ಲಾಪುರ, ಆರ್.ಟಿ. ಶಹಪುರ, ಆರ್.ಟಿ. ಮೆಣಸಗಿ, ಸರೋಜಿನಿ ಬಡಿಗೇರ, ಫಾತಿಮಾ ವಾಲಿಕಾರ, ‌ರಾಧಿಕಾ ಪವಾರ ಉಪಸ್ಥಿತರಿದ್ದರು. ವೈ.ಡಿ. ನದಾಫ್‌ ಸ್ವಾಗತಿಸಿದರು. ಆರ್.ಟಿ. ಮೆಣಸಗಿ ವಂದಿಸಿದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ