ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಗದ್ದೆಹಳ್ಳದ ಹೋಮ್ಸ್ ಸಂಸ್ಥೆಯ ವತಿಯಿಂದ ಕೃತಿಕಾ, ಸದಾನಂದ ಕರುಂಬಯ್ಯ ಅವರ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ''''''''ಜಿಜಿಎ ನಾಟಿ ಉತ್ಸವ- ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷಿಗಳು ಯಾವ ರೀತಿ ತಮ್ಮ ಬಳಗಕ್ಕೆ ಆಹಾರ ಸಂಗ್ರಹಿಸಿ ಪೋಷಣೆ ಮಾಡುತ್ತವೆ ಎಂದು ಮಕ್ಕಳಿಗೆ ಮಾಹಿತಿ ನೀಡಿದರಲ್ಲದೇ, ಪ್ರತಿಯೊಬ್ಬ ರೈತರು ಭತ್ತದ ಕೃಷಿಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.ಮಡಿಕೇರಿ ಕೃಷಿ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಡಾ.ಎಚ್.ಸಿ.ಲತಾ ಮಾತನಾಡಿ, ಭತ್ತದ ಕೃಷಿ ಅದರ ಬೆಳವಣಿಗೆ ಮತ್ತು ಅದರ ಪರಿಕಲ್ಪನೆಯ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮತ್ತು ಮಕ್ಕಳಿಗೆ ಮಾಹಿತಿ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಕೆ.ಎಲ್.ಕುಶಾಲಿ, ಶಿಕ್ಷಕಿ ಶಾಂತಿ ದೇವರಾಜ್, ಅರ್ಪಿತಾ ಧರ್ಮಪ್ಪ, ಪ್ರೇಮಾ ಗಣೇಶ್ ಕಟ್ಟೆಮನೆ, ಭಯಾನಕ, ಭತ್ತದ ನಾಟಿ ಪ್ರವೀಣೆ ಕಮಲ ಅವರುಗಳಿಗೆ ಜಿಜಿಎ ಶಕ್ತಿ ಅವಾರ್ಡ್ ನೀಡಿ ಗೌರವಿಸಲಾಯಿತು.
300ಕ್ಕೂ ಅಧಿಕ ವಿದ್ಯಾರ್ಥಿಗಳು: ಈ ನಾಟಿ ಉತ್ಸವದಲ್ಲಿ ವಿವಿಧ ಶಾಲೆಗಳ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ನುರಿತ ನಾಟಿ ಕೆಲಸಗಾರರ ಜೊತೆ ಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ನಾಟಿಯ ಬಗ್ಗೆ ಅನುಭವ ಪಡೆದುಕೊಂಡರು.