ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮಂಗಲ ಗ್ರಾಮದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಎಲೆಕ್ಟ್ರಾನಿಕ್ಸ್ ಬ್ಯಾಂಕಿಂಗ್ ಅರಿವು ಮತ್ತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಲ್ಲಿ ಬ್ಯಾಂಕಿಂಗ್ ವ್ಯವಹಾರ ಹೆಚ್ಚುತ್ತಿದೆ. ಈ ಹಿಂದೆ ವಿದ್ಯಾವಂತರು ಮಾತ್ರ ಮೋಸದಿಂದ ಹಣ ಕಳೆದುಕೊಳ್ಳುತ್ತಿದ್ದರು. ಆದರೆ, ಪ್ರಸ್ತುತ ಸೈಬರ್ ವಂಚನೆಯಿಂದಾಗಿ ವಿದ್ಯಾವಂತರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ವಂಚನೆ ಕುರಿತು ಅರಿವು ಅಗತ್ಯವಿದೆ ಎಂದರು.ತರಬೇತಿದಾರರಾಗಿ ಭಾಗವಹಿಸಿದ್ದ ವಿನೋದ್ ಕುಮಾರ್, ಪ್ರಸನ್ನ ಅವರು ಡಿಜಿಟಲ್ ಬ್ಯಾಂಕಿಂಗ್ ಕುರಿತು ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರು. ಆರ್ಥಿಕ ಸಮಾಲೋಚಕಿ ಕೆ.ಪಿ.ಅರುಣ ಕುಮಾರಿ ಸೈಬರ್ ವಂಚನೆಗಳು ಹಾಗೂ ಸಹಾಯವಾಣಿ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ನಮಿತಾ ಮತ್ತು ಕುಮಾರ್ ಅವರು ಉಪಸ್ಥಿತರಿದ್ದರು. ತರಬೇತಿ ಕೊನೆಯಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಯಿತು.ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲುಕೋಟೆ ಪ್ರವಾಸಿತಾಣವಾಗಿದ್ದು ಸಾವಿರಾರು ಮಂದಿ ಬರುತ್ತಾರೆ. ಕಣಿವೆ ಯಾವುದೇ ಕ್ರಾಸ್ ನಲ್ಲಿ ಬೀದಿ ದೀಪ ಇಲ್ಲದ ಕಾರಣ ದ್ವಿಚಕ್ರವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ. ಈ ಸ್ಥಳಗಳಲ್ಲಿ ದೀಪದ ವ್ಯವಸ್ಥೆಯಿಲ್ಲದ ಕಾರಣ ಕಾಡು ಪ್ರಾಣಿಗಳ ಕಾಟ, ಅಪಘಾತ, ಕಳ್ಳತನವಾಗುವ ಸಾಧ್ಯತೆಗಳಿವೆ ಎಂದರು.