ಹುಬ್ಬಳ್ಳಿ:
ತಂತ್ರಜ್ಞಾನ ಭರಿತ ಭಾರತ:
ಫಿನ್ನೋವೇಟ್ ಶೃಂಗಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಬಿಎಂಆರ್ ಚೇರ್‌ಮನ್ ವಿನಯಚಂದ್ರ ಮಹೇಂದ್ರಕರ್, ದೇಶವು ಬರಲಿರುವ ದಿನಗಳಲ್ಲಿ ತಂತ್ರಜ್ಞಾನ ಭರಿತ ಭಾರತವಾಗಲಿದೆ. ಶಿಕ್ಷಣ, ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ತಂತ್ರಜ್ಞಾನವು ಸಂಪತ್ಭರಿತವಾಗಲಿದೆ. ಇದು ಪ್ರಪಂಚದಲ್ಲಿಯೇ ಬಲಿಷ್ಠ ತಂತ್ರಜ್ಞಾನ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದರು.ಶೃಂಗಸಭೆಯಲ್ಲಿ 147 ಸ್ಟಾರ್ಟಅಪ್ಗಳು, 500ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕನಕದಾಸ ಶಿಕ್ಷಣ ಸಮಿತಿಯ ಚೇರ್‌ಮನ್ ರವೀಂದ್ರನಾಥ ದಂಡಿನ, ಐಬಿಎಂಆರ್ ಸಂಸ್ಥೆಯ ಟ್ರಸ್ಟಿ ಸುಮಾ ಮಹೇಂದ್ರಕರ, ಕರ್ನಾಟಕ ರಾಜ್ಯ ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಐಬಿಎಂಆರ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸಂಜನಾ ಮಹೇಂದ್ರಕರ, ಎಸ್ಟಿಪಿಐ ನಿರ್ದೇಶಕ ಶಶಿಕುಮಾರ, ಪವನ ಜೈನ್, ಡಾ. ವೆಂಕಟೇಶ ಅರಕೇರಿ, ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಕೆಡಿಇಎಂನ ವೆಂಕಟೇಶ ದೇಶಪಾಂಡೆ ಸೇರಿದಂತೆ ಇತರರು ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡರು.ಅಭಯ ಕಬಾಡಿ, ಶಶಿಕರ ಕೃಷಿ, ರಶ್ಮಿತಾ ಕಲ್ಯಾಣ, ಹಲವು ಸಂಪನ್ಮೂಲ ವ್ಯಕ್ತಿಗಳು ಅನುಭವ ಹಂಚಿಕೊಂಡರು. ಸಿಇಒ ಇಗ್ನೇಶ್ ಸಕ್ರಿ ಸ್ವಾಗತಿಸಿದರು. ರೇಖಾ ಮಹೇಂದ್ರಕರ ಪ್ರಾಸ್ತಾವಿಕ ಮಾತನಾಡಿದರು. ರೋಹನಕುಮಾರ್ ಕುಲಕರ್ಣಿ ಶೃಂಗಸಭೆ ಕುರಿತು ತಿಳಿಸಿದರು. ನಜೀಮ್ ಮಿಶ್ರಿಕೋಟಿ ವಂದಿಸಿದರು.