ಜಿಲ್ಲಾದ್ಯಂತ ಎನ್‌ಡಿಆರ್‌ಎಫ್ ತಂಡದಿಂದ ಅರಿವು ಕಾರ್ಯಕ್ರಮ

KannadaprabhaNewsNetwork |  
Published : Dec 20, 2025, 01:15 AM IST
೧೯ಬಿಹೆಚ್‌ಆರ್ ೨: ಬಾಳೆಹೊನ್ನೂರಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಯೋಜಿಸಿದ್ದ ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ವಿವಿಧ ಅವಘಡಗಳ ಕುರಿತು ಮಾಹಿತಿ ನೀಡಲಾಯಿತು. | Kannada Prabha

ಸಾರಾಂಶ

ಬಾಳೆಹೊನ್ನೂರುಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬೆಂಗಳೂರಿನ ಎನ್‌ಡಿಆರ್‌ಎಫ್ ತಂಡದವರಿಂದ ಅಗ್ನಿ ದುರಂತ, ಪ್ರವಾಹ ಪರಿಸ್ಥಿತಿ, ಭೂಕಂಪನ ಇನ್ನಿತರೆ ಅವಘಡ ಸಂಭವಿಸಿದಾಗ ಮುಂಜಾಗ್ರತಾ ಕ್ರಮದ ಬಗ್ಗೆ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಡಿಆರ್‌ಎಫ್ ಕಮಾಂಡರ್ ಹರೀಶ್ಚಂದ್ರ ಪಾಂಡೆ ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮಾಹಿತಿ, ಪ್ರಾತ್ಯಕ್ಷಿಕೆ ನೀಡಿದ ವೇಳೆ ಕಮಾಂಡರ್ ಹರೀಶ್ಚಂದ್ರ ಪಾಂಡೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬೆಂಗಳೂರಿನ ಎನ್‌ಡಿಆರ್‌ಎಫ್ ತಂಡದವರಿಂದ ಅಗ್ನಿ ದುರಂತ, ಪ್ರವಾಹ ಪರಿಸ್ಥಿತಿ, ಭೂಕಂಪನ ಇನ್ನಿತರೆ ಅವಘಡ ಸಂಭವಿಸಿದಾಗ ಮುಂಜಾಗ್ರತಾ ಕ್ರಮದ ಬಗ್ಗೆ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಡಿಆರ್‌ಎಫ್ ಕಮಾಂಡರ್ ಹರೀಶ್ಚಂದ್ರ ಪಾಂಡೆ ತಿಳಿಸಿದರು.ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಯೋಜಿಸಿದ್ದ ಮಾಹಿತಿ, ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು. ಅವಘಡಗಳು ಸಂಭವಿಸಿದಾಗ ಯಾವ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ಮುಂಜಾಗ್ರತೆ ಬಗ್ಗೆ ಎನ್‌ಡಿಆರ್‌ಎಫ್‌ನ ತರಬೇತಿ ಪಡೆದ ಅಧಿಕಾರಿಗಳಿಂದ ಮಾಹಿತಿ ನೀಡ ಲಾಗುತ್ತಿದೆ. ಇವುಗಳನ್ನು ತಿಳಿದು ಎಚ್ಚರಿಕೆ ವಹಿಸಬೇಕು ಎಂದರು.

ಎನ್‌ಡಿಆರ್‌ಎಫ್ ಅಧಿಕಾರಿ ನಾಗರಾಜ್ ಮಾತನಾಡಿ, ತಲೆಗೆ ಹೊಡೆತ ಬಿದ್ದಾಗ, ಗಾಯವಾದಾಗ, ಕಣ್ಣಿಗೆ ಗಾಯವಾದಾಗ, ಕೈ ಕಾಲುಗಳು ಮುರಿದಾಗ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿದ್ಯಾರ್ಥಿಗಳ ಎದುರು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಹೃದಯಘಾತವಾದಾಗ ಒಂದರಿಂದ ಆರು ನಿಮಿಷ ಪ್ರಮುಖ ಘಟ್ಟವಾಗಿದ್ದು, ಸಿಆರ್‌ಪಿ ಚಿಕಿತ್ಸೆ ನೀಡಬೇಕು. ನಿಂತಿರುವ ಹೃದಯವನ್ನು ಪುನಃ ಚಾಲನೆಗೊಳಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಎನ್.ಆರ್.ಪುರ ಅಗ್ನಿಶಾಮಕ ದಳದ ಮುಖ್ಯಅಧಿಕಾರಿ ದೇವೇಂದ್ರ ನಾಯಕ್ ಮಾತನಾಡಿ, ಬೆಂಕಿ ಬಿದ್ದಾಗ ತಕ್ಷಣವೇ ಅಗ್ನಿಶಾಮಕ ಠಾಣೆಗೆ ತಿಳಿಸಬೇಕು. 112 ಸಂಖ್ಯೆಗೆ ಮಾಹಿತಿ ನೀಡಬೇಕು. ಗ್ಯಾಸ್‌ಗೆ ಬೆಂಕಿ ಹೊತ್ತಿಕೊಂಡಾಗ ಬೆಂಕಿ ನಿಯಂತ್ರಿ ಸುವ ಕ್ರಮಗಳನ್ನು ತಿಳಿದುಕೊಂಡಿರಬೇಕು. ವಿದ್ಯಾರ್ಥಿಗಳು ಮಾಹಿತಿ ಅರ್ಥೈಸಿಕೊಂಡರೆ ಮುಂದಾಗಬಹುದಾದ ಅವಘಡ ಗಳನ್ನು ತಪ್ಪಿಸಬಹುದು ಎಂದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯ ಇಬ್ರಾಹಿಂ ಶಾಫಿ, ಉಪ ತಹಸೀಲ್ದಾರ್ ಹೇಮಾ, ಕಂದಾಯ ನಿರೀಕ್ಷಕ ಮಂಜು, ಗ್ರಾಮ ಆಡಳಿತಾಧಿಕಾರಿ ಸಮೀಕ್ಷ, ಗ್ರಾಪಂ ಪಿಡಿಓ ಕಾಶಪ್ಪ ಮತ್ತಿತರರು ಹಾಜರಿದ್ದರು.೧೯ಬಿಹೆಚ್‌ಆರ್ ೨:

ಬಾಳೆಹೊನ್ನೂರಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಯೋಜಿಸಿದ್ದ ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ವಿವಿಧ ಅವಘಡಗಳ ಕುರಿತು ಮಾಹಿತಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!