ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ಮದ್ಯಮುಕ್ತ ಸಮಾಜಕ್ಕಾಗಿ ಜಾಗೃತಿ ರ್‍ಯಾಲಿ

KannadaprabhaNewsNetwork | Published : Feb 27, 2024 1:30 AM

ಸಾರಾಂಶ

ಇಂದು ನಮ್ಮ ಯುವಕರು ಅಮಲು ಪದಾರ್ಥ ಮದ್ಯಪಾನ, ಮಾದಕದ್ರವ್ಯ ಚಟಗಳಿಗೆ ವ್ಯಾಪಕವಾಗಿ ಬಲಿಯಾಗುತ್ತಿದ್ದಾರೆ.

ಕೊಪ್ಪಳ: ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕೊಪ್ಪಳ ನಗರದ ಲೇಬ‌ರ್ ಸರ್ಕಲ್‌ದಿಂದ ಅಶೋಕ ವೃತ್ತದವರೆಗೆ ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಾಗೃತಿ ರ್‍ಯಾಲಿಯನ್ನು ಸೋಮವಾರ ನಡೆಸಲಾಯಿತು.ಮುಫ್ತಿ ನಜೀರ್ ಅಹ್ಮದ್ ಸೋಲಿಡಾರಿಟಿ ಧ್ವಜವನ್ನು ಲಬೀದ್ ಶಾಫಿ ಅವರಿಗೆ ನೀಡುವುದರ ಮೂಲಕ ನಮ್ಮ ನಡಿಗೆ ನಶೆ ಮುಕ್ತ ಹಾಗೂ ಮಾದಕ ಮುಕ್ತ ಸಮಾಜ ಕಡೆಗೆ ಎಂಬ ಜಾಗೃತಿ ನಡಿಗೆಗೆ ಚಾಲನೆ ನೀಡಿದರು.ಸೋಲಿಡಾರಿಟಿ ಯೂತ್‌ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ಇಂದು ನಮ್ಮ ಯುವಕರು ಅಮಲು ಪದಾರ್ಥ ಮದ್ಯಪಾನ, ಮಾದಕದ್ರವ್ಯ ಚಟಗಳಿಗೆ ವ್ಯಾಪಕವಾಗಿ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಸೇವಿಸುವ ಸರಾಸರಿ ವಯಸ್ಸು 12 ಎಂದು ಗುರುತಿಸಲಾಗುತ್ತಿದೆ. ಅಂದರೆ ಶಾಲಾ ವಾತಾವರಣದಲ್ಲಿಯೂ ಈ ಮಾದಕ ದ್ರವ್ಯ ಕೂಡ ವ್ಯಾಪಕ ಜಾಲವಾಗಿ ಹರಡಿದೆ. ಒಂದು ವರದಿ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವಂತಹ ಮೂರನೇ ಒಂದು ಹಿನ್ನೆಲೆಯವರು ಮಾದಕ ದ್ರವ್ಯದಿಂದ ಕೂಡಿರುತ್ತಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ ಎಂದರು.ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ರಾಜ್ಯ ಗೃಹ ಇಲಾಖೆಗಳ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 16 ಡ್ರಗ್ಸ್ ಪ್ರಕರಣಗಳು ಕಂಡುಬರುತ್ತಿವೆ. ಅದರಲ್ಲಿ ಮಾದಕ ವಸ್ತುಗಳ ಸೇವನೆ ಪ್ರಕರಣ ದಾಖಲಾಗುತ್ತಿವೆ. ದೇಶದ ವಿವಿಧ ನಗರಗಳ 16ರಿಂದ 20 ವರ್ಷದ ಸಾವಿರ ಯುವಕರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಶೇ.47 ಜನರು ಸಿಗರೇಟು ಸೇವಿಸುವುದಾಗಿದ್ದು, ಶೇ.20 ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ. ಅದರಲ್ಲಿ ಶೇ.83 ಯುವಕರಿಗೆ ಈ ಚಟದಿಂದ ಹೇಗೆ ಹೊರಬರಬೇಕೆಂದು ತಿಳಿದಿಲ್ಲ. ಇದು ಇಂದಿನ ಯುವಕರು ಅನುಭವಿಸುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದ್ದು, ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದರು.ಎಂ.ಲಾಯಕ್ ಅಲಿ, ಆದಿಲ್ ಪಟೇಲ್, ಆಸಿಫ್ ಕರ್ಕಿಹಳ್ಳಿ, ಇಸಾಕ್‌ ಫುಜೆಲ್, ಅಬ್ದುಲ್ ಹಸೀಬ್, ಜಕ್ರಿಯಾ, ಇಲಿಯಾಸ್, ಗೌಸ್ ಪಟೇಲ್, ಜಮಾಅತ್‌ ಇ-ಇಸ್ಲಾಮಿ ಹಿಂದ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Share this article