ನಮ್ಮ ಗ್ರಾಮ ಯೋಜನೆ ಕುರಿತು ಜಾಗೃತಿ ಜಾಥಾ

KannadaprabhaNewsNetwork |  
Published : Aug 18, 2026, 01:45 AM IST
17ಎಚ್ಎಸ್ಎನ್14 : ರಾಮನಾಥಪುರದಲ್ಲಿ ಗ್ರಾಮೀಣ ಯೋಜನೆಯಡಿ ಗ್ರಾಮಗಳ ಸಮಗ್ರ ಸಬಲೀಕರಣದ ಜಾಥಾ ನಡೆಯಿತು | Kannada Prabha

ಸಾರಾಂಶ

‘ನಮ್ಮ ಗ್ರಾಮ’ ಯೋಜನೆಯಡಿಯಲ್ಲಿ ತೆಗೆದುಕೊಳ್ಳಬಹುದಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಧರ್ಮೇಂದ್ರ ತಿಳಿಸಿದರು. ರಾಮನಾಥಪುರದ ಗ್ರಾಮ ಪಂಚಾಯಿತಿ ಆವರಣದಿಂದ ಶ್ರೀ ಬಸವೇಶ್ವರ ವೃತ್ತ ಮುಂತಾದ ಕಡೆ ಪಥಸಂಚಲನ ಮಾಡಿದ ನಂತರ ಮಾತನಾಡಿದ ಅವರು, ಗ್ರಾಮೀಣ ಯೋಜನೆಯಡಿ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಹಾಗೂ ಕುಟುಂಬದ ಅರ್ಥಿಕ ಸಬಲೀಕರಣಕ್ಕೆ ಒಂದು ಕುಟುಂಬಕ್ಕೆ 125. ದಿನಗಳ ಕೂಲಿ ಖಾತ್ರಿ ಕೂಲಿ ಬೇಡಿಕೆ ಸಲ್ಲಿಸಿದ 15 ದಿನದೊಳಗೆ ಉದ್ದೋಗ ಖಾತ್ರಿ ಮತ್ತು ಗಂಡು-ಹೆಣ್ಣಿಗೆ ಸಮಾನ ಕೂಲಿ ದೊರೆಯಲಿದ್ದು, ನಮ್ಮ ಗ್ರಾಮ ನಮ್ಮ ಅಭಿವೃದ್ದಿ ನಮ್ಮ ಭವಿಷ್ಯ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಧರ್ಮೇಂದ್ರ ಮನವಿ ಮಾಡಿದರು.

ರಾಮನಾಥಪುರ: ಕೆರೆಕಟ್ಟೆ ಅಭಿವೃದ್ಧಿ, ನಾಲೆಗಳ ಅಭಿವೃದ್ಧಿ, ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ತೋಟಗಾರಿಕೆ ಬೆಳೆಗಳು, ಕೃಷಿ ಆಧಾರಿತ ಕಾಮಗಾರಿಗಳು, ಜಾನುವಾರು ಕೊಟ್ಟಿಗೆ, ಸಸಿ ನಾಟಿ, ಅಂಗನವಾಡಿ ನಿರ್ಮಾಣ, ಶಾಲಾ ಶೌಚಾಲಯ ಮುಂತಾದ ಕಾಮಗಾರಿಗಳನ್ನು ‘ನಮ್ಮ ಗ್ರಾಮ’ ಯೋಜನೆಯಡಿಯಲ್ಲಿ ತೆಗೆದುಕೊಳ್ಳಬಹುದಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಧರ್ಮೇಂದ್ರ ತಿಳಿಸಿದರು. ರಾಮನಾಥಪುರದ ಗ್ರಾಮ ಪಂಚಾಯಿತಿ ಆವರಣದಿಂದ ಶ್ರೀ ಬಸವೇಶ್ವರ ವೃತ್ತ ಮುಂತಾದ ಕಡೆ ಪಥಸಂಚಲನ ಮಾಡಿದ ನಂತರ ಮಾತನಾಡಿದ ಅವರು, ಗ್ರಾಮೀಣ ಯೋಜನೆಯಡಿ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಹಾಗೂ ಕುಟುಂಬದ ಅರ್ಥಿಕ ಸಬಲೀಕರಣಕ್ಕೆ ಒಂದು ಕುಟುಂಬಕ್ಕೆ 125. ದಿನಗಳ ಕೂಲಿ ಖಾತ್ರಿ ಕೂಲಿ ಬೇಡಿಕೆ ಸಲ್ಲಿಸಿದ 15 ದಿನದೊಳಗೆ ಉದ್ದೋಗ ಖಾತ್ರಿ ಮತ್ತು ಗಂಡು-ಹೆಣ್ಣಿಗೆ ಸಮಾನ ಕೂಲಿ ದೊರೆಯಲಿದ್ದು, ನಮ್ಮ ಗ್ರಾಮ ನಮ್ಮ ಅಭಿವೃದ್ದಿ ನಮ್ಮ ಭವಿಷ್ಯ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಧರ್ಮೇಂದ್ರ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಪ್ರದೀಪ್‌, ಹರೀಶ್, ಅಭಿವೃದ್ಧಿ ಅಧಿಕಾರಿ ಎಂ. ಎನ್. ಕುಮಾರಸ್ವಾಮಿ, ಕಾರ್ಯದರ್ಶಿ ರೇವಣ್ಣ ಸಿಬ್ಬಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮಪ್ಪನಾಣೆ ತಮಿಳುನಾಡಿಗೆ ನೀರು ಬಿಟ್ಟಿಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ ಸಮರ್ಥನೆ
ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆಯಿರಿ