ಶ್ರೀರಂಗಪಟ್ಟಣ:
ಮೈಸೂರಿನ ಶೇಷಾದ್ರಿಪುರಂ ಎಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಪಟ್ಟಣದ ರೋಟರಿ ಕ್ಲಬ್, ಅಚೀವರ್ಸ್ ಅಕಾಡೆಮಿಯಿಂದ ಅಂಬೇಡ್ಕರ್ ವೃತ್ತದ ಬಳಿ ಜಾಗೃತಿ ಜಾಥಾಗೆ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ರಾಘವೇಂದ್ರ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ನಂತರ ಡಾ.ರಾಘವೇಂದ್ರ ಮಾತನಾಡಿ, ಜುಲೈ 11 ‘ವಿಶ್ವ ಜನಸಂಖ್ಯಾ ದಿನ’ ವೆಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ 1987ರ ವರ್ಷದಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು ಎಂದರು.ಈ ದಿನವನ್ನು ಆಚರಿಸುವ ಮೂಲಕ ವಿಶ್ವದಲ್ಲಿ ಜನಸಂಖ್ಯೆ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ವಿಶ್ವ ಸಮುದಾಯದ ಗಮನ ಸೆಳೆಯುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಈ ದಿನ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಈ ವೇಳೆ ರೋಟರಿ ಅಧ್ಯಕ್ಷ ಎನ್.ನಾಗೇಂದ್ರ, ಕಾರ್ಯದರ್ಶಿ ಸರಸ್ವತಿ, ಅಲಯನ್ಸ್ ಅಧ್ಯಕ್ಷ ಆಶಾಲತಾ ಪುಟ್ಟೆಗೌಡ, ಗುರುಪ್ರಸಾದ್, ರವಿ, ಕಾರ್ತಿಕ್, ಭೂಮಿಕಾ, ಶಾಂಭವಿ, ಎನ್ಎಸ್ಎಸ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.ಗೊಲ್ಲರಹಳ್ಳಿ ಮಹದೇಶ್ವರ ಸ್ವಾಮಿಗೆ ನೂತನ ಕೊಳಗ ಪ್ರತಿಷ್ಠಾಪನೆ
ಅರ್ಚಕ ಮಹಾದೇವ ಮಾತನಾಡಿ, ಮಹದೇಶ್ವರಸ್ವಾಮಿಗೆ ಕೊಳಗದ ಮೂರ್ತಿಯನ್ನು ನಾವು ಮಲೆ ಮಹಾದೇಶ್ವರನ ಬೆಟ್ಟಕ್ಕೆ ಇಂದು ತೆಗೆದುಕೊಂಡು ಹೋಗಿ ದೇವಸ್ಥಾನದ ಆವರಣದಲ್ಲಿ ಸ್ವಾಮಿ ಮುಂದೆ ಪೂಜೆ ಪುನಸ್ಕಾರ ಮಾಡಿಸಿಕೊಂಡು ನಂತರ ಸಾಲೂರು ಮಠದ ಸ್ವಾಮೀಜಿ ಸನ್ನಿಧಿಯಲ್ಲಿ ಹೂವು ಹೊಂಬಾಳೆ ಮಾಡಿಸಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದು ಶ್ರೀಗಳ ಅನುಮತಿ ಪಡೆದು ಅವರ ಆಶೀರ್ವಾದದೊಂದಿಗೆ ಗ್ರಾಮದ ದೇವಸ್ಥಾನದಲ್ಲಿ ಸ್ವಾಮಿಗೆ ಕೊಳಗವನ್ನು ಧರಿಸಲಾಗುತ್ತದೆ ಎಂದರು.ಮಲೆ ಮಾಹದೇಶ್ವರ ಬೆಟ್ಟದಲ್ಲಿ ಅನ್ನ ಸಂತರ್ಪಣೆ ಸಹ ಏರ್ಪಡಿಸಲಾಗಿದ್ದು, ನಂಜಾಪುರ, ಮಡಹಳ್ಳಿ, ಚಿಕ್ಕ ಏಲಚೆಗೆರೆ, ಗೊಲ್ಲರಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಇಂದು ಹೊರಟಿದ್ದು ಅಲ್ಲಿ ಪೂಜೆ ಪುನಸ್ಕಾರ ಮುಗಿಸಿಕೊಂಡು ಬರುವುದಾಗಿ ತಿಳಿಸಿದರು.