ಕನ್ನಡಪ್ರಭ ವಾರ್ತೆ ಉಳ್ಳಾಲಪರಿಸರದಿಂದ ಎಷ್ಟು ದೂರ ಹೋಗುತ್ತೇವೆಯೋ ಅಷ್ಟು ಸಮಸ್ಯೆಗಳು ನಮ್ಮಲ್ಲಿ ಜಾಸ್ತಿಯಾಗುತ್ತದೆ. ಆಧುನಿಕತೆಯ ಕಾಲದಲ್ಲಿ ಪ್ರಕೃತಿಯ ಹತ್ತಿರ ಹೋಗಲು ಎಷ್ಟು ಸಾಧ್ಯವಿದೆಯೋ, ಅಷ್ಟು ಹತ್ತಿರ ಹೋಗುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಹರೇಕಳ ರಾಮಕೃಷ್ಣ ಪ್ರೌಢಶಾಲಾ ಸಭಾಂಗಣದಲ್ಲಿ ಮಂಗಳೂರಿನ ಲೈಫ್ ನೆಸ್ಟ್ ಟ್ರಸ್ಟ್, ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಶ್ರೀ ರಾಮಕೃಷ್ಣ ಅನುದಾನಿತ ಫ್ರೌಡಶಾಲೆ ಹರೇಕಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ಲಕ್ಷ ವೃಕ್ಷ ಕಾರ್ಯಕ್ರಮ ಮತ್ತು ಸೀಡ್‍ಬಾಲ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಪ್ರಶಾಂತ ನಾಯ್ಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಪರಿಸರ ಪ್ರೇಮಿ ಮಾಧವ ಉಳ್ಳಾಲ, ಹರೇಕಳ ಪಂಚಾಯಿತಿ ಉಪಾಧ್ಯಕ್ಷ ಮಜೀದ್, ಹರೇಕಳ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಡೆಂಜ ಸೋಮಶೇಖರ ಚೌಟ, ಮಂಗಳೂರು ವಿಶ್ವ ವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರಶಾಂತ್ ನಾಯಕ್, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ರೈ, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ವಸಂತ ಎನ್. ಕೊಣಾಜೆ, ಲೈಫ್ ನೆಸ್ಟ್ ಟ್ರಸ್ಟ್ ಅಧ್ಯಕ್ಷ ಅಚಲ್ ಆರ್.ಎನ್., ಕಾರ್ಯದರ್ಶಿ ಶ್ರೀರಾಜ್, ಯಶವಂತ್ ಬೇಕಲ್, ಸದಸ್ಯರಾದ ವಿನಯ್ ಶರ್ಮಾ, ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬದ್ರುದ್ದೀನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.ಹರೇಕಳ ರಾಮಕೃಷ್ಣ ಶಾಲೆಯ ವಿದ್ಯಾರ್ಥಿನಿಯರು ಪರಿಸರ ಗೀತೆ ಹಾಡಿದರು. ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು, ಮುಖ್ಯಶಿಕ್ಷಕಿ ಉಷಾಲತಾ ವಂದಿಸಿದರು.