ಕುದೂರು: ಗ್ರಾಮದಲ್ಲಿ ಕೆರೆ ಒಡೆದರೂ ಕೇಳುವವರಿಲ್ಲ, ಮರ ಕಡಿದರೂ ಏನೂ ಮಾಡುವುದಿಲ್ಲ ಎಂಬ ಭಂಡತನ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ರಾಮಲೀಲಾ ಮೈದಾನಕ್ಕೆ ಹೊಂದಿಕೊಂಡಿರುವ ಲಕ್ಷ್ಮಿದೇವಿ ನಗರದ ರಸ್ತೆ ಪಕ್ಕದ ಮರಗಳನ್ನು ಕಡಿದುರುಳಿಸಿದ್ದಾರೆ.
ರಾಮಲೀಲಾ ಮೈದಾನವನ್ನು ಹೈಟೆಕ್ ಮೈದಾನವನ್ನಾಗಿ ರೂಪಿಸಲು ಬೃಹತ್ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಮೈದಾನದೊಳಗಿದ್ದ ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕಿನ ಮರಗಳನ್ನು ಈಗಾಗಲೇ ಕಡಿದು ಹಾಕಲಾಗಿದೆ. ಆದರೆ ಈಗ ಕಡಿದಿರುವ ಮರಗಳು ಮೈದಾನದ ಹೊರಗಿದ್ದವು. ಅವುಗಳನ್ನು ಉಳಿಸಿಕೊಂಡೇ ಮೈದಾನವನ್ನು ರೂಪಿಸಬಹುದಾಗಿತ್ತು. ಆದರೆ, ಪರಿಸರ ಪ್ರೇಮಿಗಳ ಮಾತನ್ನು ಕೇಳದೆ ಏಕಾಏಕಿ ನಿರ್ಧಾರವನ್ನು ತೆಗೆದುಕೊಂಡು ಮರಗಳನ್ನು ಕಡಿಯಲಾಗಿದೆ. ಪಂಚಾಯ್ತಿಯವರನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ.
ಆದರೆ, ಮರಗಳನ್ನು ಕಡಿಯಬೇಡಿ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದ ಸಾಮಾಜಿಕ ಕಾರ‍್ಯಕರ್ತ ನರಸಿಂಹಮೂರ್ತಿ ಅವರಿಗೆ ಗ್ರಾಪಂ ಹಿರಿಯ ಸದಸ್ಯರೊಬ್ಬರು ಮೊಬೈಲ್ ಕರೆ ಮಾಡಿ ದೂರನ್ನು ವಾಪಸ್ ತೆಗೆದುಕೊ ಎಂದು ಧಮಕಿ ಹಾಕಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಗ್ರಾಮದ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಗ್ರಾಮಪಂಚಾಯ್ತಿಯ ಕೆಲವು ಸದಸ್ಯರು ಮಾಡುತ್ತಿರುವುದರಿಂದ ಕಣ್ಣ ಮುಂದೆಯೇ ಪರಿಸರ ನಾಶವಾಗುತ್ತಿದ್ದರೂ ಜನರು ಪ್ರಶ್ನೆ ಮಾಡದಂತಾಗಿದೆ.ಭೈರವನದುರ್ಗದ ತಪ್ಪಲಿನಲ್ಲಿದ್ದ ಕೆರೆಯನ್ನು ಬಸ್ ಡಿಪೋ ಹೆಸರಿನಲ್ಲಿ ಒಡೆದು ಅದರಲ್ಲಿದ್ದ ನೀರನ್ನು ಹೊರಗೆ ಬಿಡಲಾಯಿತು. ಆಗಲೂ ಜನ ಪ್ರಶ್ನೆ ಮಾಡಲು ಮುಂದೆ ಬಂದಾಗಲೂ ಗ್ರಾಪಂ ಇದೇ ಹಿರಿಯ ಸದಸ್ಯರು ಇಲ್ಲೊಂದು ಡಿಪೋ ಆಗುತ್ತದೆ. ಆಲ್ಲೊಂದು ಕೆರೆಯಿದೆ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲ, ಹಾಗಾಗಿ ಅದನ್ನು ಒಡೆದು ಹಾಕಲಾಗಿದೆ ಎಂದು ಹೇಳಿ ಜನರ ಪ್ರತಿಭಟನೆಗೆ ತಣ್ಣೀರು ಹಾಕಿದರು.
ಕೋಟ್ ..............
-ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು
7.ಕುದೂರು ಗ್ರಾಮದ ರಾಮಲೀಲಾ ಮೈದಾನದ ಪಕ್ಕದ ರಸ್ತೆಯಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಮೈದಾನದ ಅಭಿವೃದ್ದಿ ಎಂಬ ಹೆಸರಿನಲ್ಲಿ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೇ ಕಡಿದುರುಳಿಸಿರುವುದು.