- ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವ ಉದ್ಘಾಟಿಸಿ ಡಾ.ಶಿವಮೂರ್ತಿ ಮುರುಘಾ ಶರಣರ ನುಡಿ - - -
ಬಸವಣ್ಣನವರ ಕಾಲದ ಸಮಾನತೆಯ ಕ್ರಾಂತಿ ಮತ್ತು ಲಿಂಗೈಕ್ಯ ಜಯದೇವ ಜಗದ್ಗುರುಗಳ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಯು ಬದಲಾವಣೆಯ ಮಹತ್ವದ ಕ್ಷಣಗಳಾಗಿವೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಗುರುವಾರ ಶ್ರೀ ಶಿವಯೋಗಾಶ್ರಮ ಟ್ರಸ್ಟ್ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಯದೇವ ಶ್ರೀಗಳು ಆಂತರ್ಯದಲ್ಲಿ ಪರೋಪಕಾರಿ, ಪರಿವರ್ತನಾಕಾರಿಯಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು ಎಂದರು.ಜಗತ್ತಿನಲ್ಲಿ ಆಗೊಮ್ಮೆ, ಈಗೊಮ್ಮೆ ಸಾಧಕರು ಹುಟ್ಟುತ್ತಾರೆ. ಅಧ್ಯಾತ್ಮ ಅಥವಾ ಸಮಾಜ ಸುಧಾರಕರು ಬರುತ್ತಾರೆ. ಬಸವಣ್ಣ ಸಹ ಅಂತಹ ಅದ್ಭುತ ಸಾಧಕರು. ಅಲ್ಲಮಪ್ರಭು ಸೇರಿದಂತೆ ಎಲ್ಲ ಶರಣ-ಶರಣೆಯರೂ ಇದೇ ಸಾಲಿಗೆ ಸೇರಿದವರು. ಜಯದೇವ ಜಗದ್ಗುರುಗಳು ಅಗಲಿ 7 ದಶಕಗಳೇ ಕಳೆದಿವೆ. ಜಯದೇವ ಶ್ರೀಗಳು ಎಂದಿಗೂ ವಿಶ್ರಾಂತಿ ಪಡೆಯುತ್ತಿರಲಿಲ್ಲ. ಶರಣ ಸಂಸ್ಕೃತಿಯು ಶ್ರಮ ಸಂಸ್ಕೃತಿಯನ್ನು ಕಲಿಸಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಜಯದೇವ ಶ್ರೀಗಳ ಉತ್ಸವ:
ಶ್ರೀಗಳು ನವಕೋಟಿ ನಾರಾಯಣ:
ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶಿರಾಳಕೊಪ್ಪದ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ರಮಾನಂದ ಸ್ವಾಮೀಜಿ ಇತರೆ ಸ್ವಾಮೀಜಿಗಳು, ವಿವಿಧ ಸಮಾಜದ ಮುಖಂಡರು ಇದ್ದರು. ನಂಜಪ್ಪ ಆಸ್ಪತ್ರೆ ಹಾಗೂ ವಾಸನ್ ಐಕೇರ್‌ನಿಂದ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ ನಡೆಯಿತು.
(ಬಾಕ್ಸ್)
- ಲಿಂಗಾಯತರನ್ನೂ ಶೂದ್ರರೆಂದೇ ಪರಿಗಣಿಸಿ, ಶಿಕ್ಷಣದಿಂದ ವಂಚಿತರಾಗಿಸಿದ್ದ ಕಾಲ ಅದಾಗಿತ್ತು
ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಆಗ ಬೇರೂರಿದ್ದ ಅನಕ್ಷರತೆ, ಅಜ್ಞಾನ ಹೊಡೆದೊಡಿಸಲು ಜಯದೇವ ಶ್ರೀಗಳು ಶ್ರಮಿಸಿದರು ಎಂದರು.
ಗುರುಗಳಿಗೂ ಶಿಕ್ಷಣ ಸಿಗದ ಕಾಲ:ಆಗಿನ ಕಾಲದಲ್ಲಿ ಸಮಾಜದಲ್ಲಿ ಶಿಕ್ಷಣವಿರಲಿಲ್ಲ. ಮೇಲ್ವರ್ಗದವರಿಗೆ ಮಾತ್ರವೇ ಶಿಕ್ಷಣ ಮೀಸಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಜಯದೇವ ಸ್ವಾಮೀಜಿ ಮಾಡಿದ ಕಾರ್ಯ, ಶಿಕ್ಷಣಕ್ಕೆ ಮಹತ್ವ ನೀಡಿದ್ದು ದೊಡ್ಡ ಮೇಲ್ಪಂಕ್ತಿಯನ್ನೇ ಹಾಕಿಕೊಟ್ಟಿತು. ಗುರುಗಳಿಗೂ ಶಿಕ್ಷಣ ಸಿಗದ ಕಾಲ ಅದಾಗಿತ್ತು. ಲಿಂಗಾಯತರನ್ನೂ ಶೂದ್ರರೆಂದೇ ಪರಿಗಣಿಸಲಾಗುತ್ತಿತ್ತು. ಶಿಕ್ಷಣದ ಬೆಳಕು ಕೊಡಲು ಜಯದೇವ ಶ್ರೀಗಳು ಮುಂದಾದರು. ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು ಮೈಸೂರಿನಿಂದ ಮಹಾರಾಷ್ಟ್ರದ ಕೊಲ್ಲಾಪುರದವರೆಗೆ ನೂರಾರು ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ಮೂರೂ ರಾಜ್ಯಗಳ ಪ್ರವಾಸ ಮಾಡಿ, ಸಮಾಜದ ವಿಶ್ವಾಸವನ್ನು ಪಡೆದು ಊಟ, ವಸತಿ ಕಲ್ಪಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವ ಮಹಾತ್ಕಾರ್ಯ ಮಾಡಿದರು ಎಂದು ವಿವರಿಸಿದರು.
ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಕಲಿತವರು ಸಚಿವರು, ಶಾಸಕರು, ವೈದ್ಯ, ಎಂಜಿನಿಯರ್, ದೊಡ್ಡ ಸಾಹಿತಿಗಳೂ ಆಗಿದ್ದಾರೆ. ವಿದ್ಯಾರ್ಥಿನಿಲಯ ಸ್ಥಾಪಿಸುವವರೆಗೂ ಸಮುದಾಯದಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ ಇತ್ತು. ಅಂಬೇಡ್ಕರ್‌ರ ಶಿಕ್ಷಣ ಬೆಳಕು ಎಂಬುದನ್ನು ಜಯದೇವ ಶ್ರೀಗಳು ಪಾಲಿಸಿದರು. ಕೋಮು ಸೌಹಾರ್ದತೆಯನ್ನು ತಂದರು. ಜಾತಿ ಸಾಮರಸ್ಯ ಮೂಡಿಸಿದರು. ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ನೀಡಿ, ಭವಿಷ್ಯ ಕಟ್ಟಿಕೊಟ್ಟರು. ಹಾವೇರಿಯಲ್ಲಿ ಮಸೀದಿ ಕಟ್ಟಿಸಿಕೊಳ್ಳಲು ನೆರವು ನೀಡಿದ್ದರು ಎಂದು ತಿಳಿಸಿದರು.- - -
-8ಕೆಡಿವಿಜಿ3, 4:ದಾವಣಗೆರೆ ಶ್ರೀ ಶಿವಯೋಗಿ ಮಂದಿರದಲ್ಲಿ ಗುರುವಾರ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.